ಮೂಡಲಗಿ : ತಾಲೂಕಿನ ಹಳ್ಳೂರ ಚೆಕ್ಪೋಸ್ಟ್ದಲ್ಲಿ ಅಧಿಕಾರಿಗಳು ನಡೆಸಿದ ಭರ್ಜರಿ ಕಾರ್ಯಚರಣೆಯೊಂದರಲ್ಲಿ ಸಮರ್ಪಕವಾದ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 1 ಕೆಜಿ 25 ಗ್ರಾಂ ಬಂಗಾರ ವಶಕ್ಕೆ ಪಡೆದಿರುವ ಘಟನೆ ಬುಧುವಾರ ನಡಿದಿದೆ.
ತಾಲೂಕಿನ ಹಳ್ಳೂರ ಗ್ರಾಮದ ಚೆಕ್ ಪೋಸ್ಟ್ದಲ್ಲಿ ಮಹಾಲಿಂಗಪುರ ದಿಂದ ಬೆಳಗಾವಿಯತ್ತ ಸಾಗಿಸುತ್ತಿದ್ದ ಕಾರವೊಂದನ್ನು ತಪಾಸಣೆ ನಡೆಸಿದ ವೇಳೆ ವಾಹನದಲ್ಲಿ 1 ಕೆಜಿ 25 ಗ್ರಾಂ ಚಿನ್ನ ಇರುವುದು ಪತ್ತೆಯಾಗಿದೆ.
ಈ ಬಂಗಾರಕ್ಕೆ ವಾಹನದಲ್ಲಿದ್ದವರ ಬಳಿ ಸೂಕ್ತ ದಾಖಲೆಗಳು ಇಲ್ಲದ ಪರಿಣಾಮ ವಾಹನ ಸಹಿತ ಚುನಾವಣಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಜಪ್ತಿ ಮಾಡಿದ್ದಾರೆಂದು ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಸಿಪಿಐ ಶ್ರೀಶೈಲ್ ಬ್ಯಾಕೋಡ, ಹೆಚ್ಚುವರಿ ಪಿಎಸ್ಐ ಶಿವಕುಮಾರ್ ಬಿರಾದರ್, ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಶಿವಕುಮಾರ್ ಕಾಳೆ ಹಾಗೂ ಇನ್ನುಳಿದ ಸಿಬ್ಬಂದಿಗಳು ಇದ್ದರು.
SPECIAL REPORT BPN NEWS BELAGAVI