---Advertisement---

Advertisement

ಮೂಡಲಗಿ : ಶಿವಾಪೂರ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದ ನನ್ನ ಮಣ್ಣು, ನನ್ನ ದೇಶ ಅಭಿಯಾನ :

 

ತ್ಯಾಗ ಬಲಿದಾನಗಳ ಮೂಲಕ ಸ್ವಾತಂತ್ರ ಸಿಕ್ಕಿದೆ ಈರಣ್ಣ ಕಡಾಡಿ.

 

77 ನೇ ಸ್ವಾತಂತ್ರ ದಿನಾಚರಣೆ ಹಾಗೂ ಸ್ವಾತಂತ್ರ್ಯ ಅಮೃತ್ ಮಹೋತ್ಸವದ ಅಂಗವಾಗಿ ನನ್ನ ಮಣ್ಣು, ನನ್ನ ದೇಶ ಅಭಿಯಾನದ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಶಿಲಾ ಫಲಕ ಸಮರ್ಪಣೆ ಮಾಡಿ ಮಾತನಾಡಿ ಕಷ್ಟ ಪಟ್ಟು ಪಡೆದ ಸ್ವಾತಂತ್ರ್ಯ ಹೇಗೆ ಬೇಕೋ ಹಾಗೆ ಉಪಯೋಗಿಸಿಕೊಳ್ಳದೆ ನಮ್ಮ ಹಿರಿಯರು ಹಾಕಿ ಕೊಟ್ಟ ಸ್ವಾತಂತ್ರ, ಧ್ವಜಾರೋಹಣ, ಹೋರಾಟದಲ್ಲಿ ಮಡಿದ ಯೋಧರ ಕುಟುಂಬಸ್ಥರಿಗೆ ಸನ್ಮಾನಿಸಿ ಗೌರವ ನೀಡಬೇಕು ಎಂದರು ನಂತರ

ದೇಶದ 7500 ಗ್ರಾಮ ಪಂಚಾಯತಿ ಕೇಂದ್ರದಲ್ಲಿ ಒಂದೇ ಸಮಯದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಈ ಕಾರ್ಯಕ್ರಮದ ಮುಖಾಂತರ 1 ಚಟಿಕೆಯಲ್ಲಿ ಮಣ್ಣನ್ನು ಸಂಗ್ರಹಿಸಿ ತಾಲೂಕ, ಜಿಲ್ಲಾ ಕೇಂದ್ರ ಹಾಗೂ ರಾಜ್ಯದ ಮುಖಾಂತರ ದೆಹಲಿಯಲ್ಲಿ ನಿರ್ಮಾಣ ವಾಗುತ್ತಿರುವ ಯೋಧರ ಸ್ಮಾರಕದ ಪಕ್ಕದಲ್ಲಿ ಸಂಗ್ರಹಿಸಿದ ಮಣ್ಣಿನಿಂದ ಉದ್ಯಾನವನ ನಿರ್ಮಾಣ ಮಾಡುವುದರಿಂದ ಎಲ್ಲರಿಗೂ ನನ್ನ ಮಣ್ಣು, ನನ್ನ ದೇಶ ಕಲ್ಪನೆ ಬರುತ್ತದೆ ಎಂದು ಹೇಳಿದರು.

ನಂತರ ಪಂಚಪ್ರಾಣ ಶಪಥ, ವಾಸುಧಾ ವಂದನ ಕಾರ್ಯಕ್ರಮ ಹಾಗೂ ಹಾಲಿ ಹಾಗೂ ಮಾಜಿ 14 ಜನ ಸೈನಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ವೀರ ಯೋಧ ವಿಠ್ಠಲ ಮೇತ್ರಿ ಅವರ ಪರಿವಾರದವರಿಗೂ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶಿವಾಪೂರ ಗ್ರಾಮವನ್ನು ಸಂಸದರ ಆದರ್ಶ ಗ್ರಾಮಕ್ಕೆ ಆಯ್ಕೆ ಮಾಡಿಕೊಂಡು ವೇದಿಕೆ ಮೇಲೆಯೇ ಗ್ರಾಮದ ಅಭಿವೃದ್ಧಿಗೆ 10 ಲಕ್ಷ ರೂಗಳನ್ನು ಕೊಡಲು ಘೋಷಣೆ ಮಾಡಿದರು. ಪಿ ಡಿ ಓ ಎಸ್ ಎಲ್ ಬಬಲಿ ಪ್ರಾಸ್ತವಿಕವಾಗಿ ಮಾತನಾಡಿದರು,

ಈ ಸಂದರ್ಭದಲ್ಲಿ ತಾಲೂಕ ಪಂಚಾಯತ್ ಇ ಓ ಗಳಾದ ಎಫ್ ಜಿ ಚಿನ್ನನವರ, ಎಸ್ ಎಸ್ ರೊಡ್ಡನವರ, ತಾಲೂಕ ಎ ಡಿ ಗಳಾದ ಚಂದ್ರಶೇಖರ ಬಾರ್ಕಿ, ಜೆ ಜೆ ಆಸ್ಪತ್ರೆ ನಿರ್ದೇಶಕರಾದ ಎಸ್ ಎಸ್ ಪಾಟೀಲ, ಪಂಚಾಯತ ಅಧ್ಯಕ್ಷರಾದ ಯಮನವ್ವ ಗಿಡ್ಡವ್ವಗೋಳ, ಉಪಾಧ್ಯಕ್ಷರಾದ ಎಂ ಎಂ ಜುಂಜರವಾಡ, ಮಾಜಿ ಅಧ್ಯಕ್ಷರಾದ ಬಿ ಆರ್ ಸಾಯನ್ನವರ ಹಾಗೂ ಎಲ್ಲ ಸದಸ್ಯರು, ಪಿಕೆಪಿಸ್ ಅಧ್ಯಕ್ಷರಾದ ಎಸ್ ಡಿ ಪಾಟೀಲ, ಕೆ ಬಿ ಮುಧೋಳ, ಎಸ್ ವಾಯ್ ಜುಂಜರವಾದ,ಮಾಜಿ ಸೈನಿಕರಾದ ಎಸ್ ಎಸ್ ತುಕ್ಕನವರ, ಸಂಘ ಸಂಸ್ಥೆಯ ಎಲ್ಲ ಪದಾಧಿಕಾರಿಗಳು, ಎಸ್ ಡಿ ಎಂ ಸಿ ಅಧ್ಯಕ್ಷ ಎಸ್ ಬಿ ರಡೇರಟ್ಟಿ ,ಶಾಲೆಯ ಸದಸ್ಯರು ಹಾಗೂ ಎಲ್ಲ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು,

By BPN

Leave a Reply

Your email address will not be published. Required fields are marked *