ಬೆನ್ನಿಗೆ ಸಣ್ಣ ಸಣ್ಣ ಕಲ್ಲು ಒತ್ತುತ್ತಿತ್ತ, ಹುಳ-ಹುಪ್ಪಟೆ ಬೆನ್ನಲ್ಲಿ ಹರಿದಾಡ್ತಿತ್ತ? ಗೊತ್ತಿಲ್ಲ. ಪಾತ್ರದ ಗುಂಗಲ್ಲಿದ್ದ ಖ್ಯಾತ ನಟ ಎಂ. ಕೆ ಮಠ ರವರ ಅನುಭವ.
ಒಂದು ಚಿತ್ರಕ್ಕೆ ಪಾತ್ರಗಳು ಎಷ್ಟು ಮುಖ್ಯನೋ ಅದರ ಪಾತ್ರಧಾರಿಯು ಅಷ್ಟೇ ಮುಖ್ಯ. ಪಾತ್ರಧಾರಿಯ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿ ಅಭಿನಯಿಸಿದ್ದಾಗ ಮಾತ್ರ ಆ ಪಾತ್ರಕ್ಕೆ ಜೀವ ಬರುವುದು. ಹಾಗೆ ಆ ಪಾತ್ರಕ್ಕೆ ತಕ್ಕದಾದ ವೇಷ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಒಬ್ಬ ಕಲಾವಿದ ತನಗೆ ಸಿಕ್ಕಿರುವ ಪಾತ್ರಕ್ಕೆ ನ್ಯಾಯ ಒದಗಿಸಲು ಎಷ್ಟು ಕಷ್ಟ ಪಡಬೇಕಾಗುತ್ತದೆ ಆ ಪಾತ್ರದ ಪೂರ್ವ ತಯಾರಿ ಹೇಗಿರುತ್ತದೆ…?
ಹೌದು ಪ್ರಿಯಾ ಓದುಗರೇ ಇವತ್ತಿನ Belagaviphotonews.com ನ ಶುಕ್ರವಾರದ ಸಿನಿ ವಿಶೇಷ ದಲ್ಲಿ ಒಂದು ಶಿಕಾರಿ ಕಥೆ ಚಿತ್ರದ ಪಾತ್ರ ಒಂದಕ್ಕೆ ಖ್ಯಾತ ನಟ ನಮ್ಮೆಲ್ಲರ ಪ್ರೀತಿಯ ಎಂ. ಕೆ ಮಠ ರವರ ಅನುಭವ ಕೇಳೋಣ..
ಜುಲೈ 29 ರಂದು ಸಂಜೆ 6 ಗಂಟೆಗೆ
#Zeeಪಿಚ್ಚರ್ ವಾಹಿನಿಯಲ್ಲಿ
ಪ್ರಸಾರ ಆಗ್ತಿರೋ #ಒಂದು_ಶಿಕಾರಿಯ_ಕಥೆ ಚಿತ್ರದಲ್ಲಿ
ನನ್ನದೂ ಒಂದು ಪಾತ್ರ ಇದೆ. ನಿಯ್ಯತ್ತಿನ ಸೇವಕನ ಪಾತ್ರ.
ತನ್ನ ಯಜಮಾನನಿಗಾಗಿ ಹುಲಿ ವೇಷ ಹಾಕಲೇ ಬೇಕಾದ ಸಂದರ್ಭವೂ ಬರತ್ತೆ. ಬಣ್ಣ ಸಹಜವಾಗಿರಬೇಕು ಅನ್ನೋ ಕಾರಣಕ್ಕೆ ಹುಲಿವೇಷಕ್ಕೆ ಬಣ್ಣ ಹಾಕುವವರನ್ನೇ ಕರೆಸಿದ್ರು ಚಿತ್ರದ ನಿರ್ದೇಶಕರಾದ Sachin Shetty ಅವ್ರು…
ಆಗುಂಬೆ ಸಮೀಪದ ಆ ಊರಲ್ಲಿ ಕ್ಯಾರವಾನ್ ಇರಲಿಲ್ಲ, ಹವಾನಿಯಂತ್ರಿತ ಕೊಠಡಿಗಳಿರಲಿಲ್ಲ, ಹತ್ತಿರದಲ್ಲೆಲ್ಲೂ ಒಂದೇ ಒಂದು ಮನೆ ಇರಲಿಲ್ಲ. ಇದ್ದಿದ್ದು ಸುರುಳಿ ಸುತ್ತಿ ಮಲಗಿದಂತಿದ್ದ ರಸ್ತೆ ಮತ್ತು ಚಿತ್ರತಂಡದವರಲ್ಲಿದ್ದ ಆತ್ಮವಿಶ್ವಾಸ. ಆಗುಂಬೆಯ
Prakash Agumbe Pakka ಅವರು ಕೆಂಪು ನಿಕ್ಕರ್ ಕೊಟ್ಟಾಗ ಅದನ್ನ ತೊಟ್ಕೊಂಡು ಖಾಲಿ ರಸ್ತೆಯಲ್ಲೇ ನಿಟಾರನೆ ಮಲಗಿದ್ದೆ…
ಬೆನ್ನಿಗೆ ಸಣ್ಣ ಸಣ್ಣ ಕಲ್ಲು ಒತ್ತುತ್ತಿತ್ತ, ಹುಳ-ಹುಪ್ಪಟೆ ಬೆನ್ನಲ್ಲಿ ಹರಿದಾಡ್ತಿತ್ತ? ಗೊತ್ತಿಲ್ಲ. ಪಾತ್ರದ ಗುಂಗಲ್ಲಿದ್ದ ನನ್ನ ಗಮನಕ್ಕೆ ಅದ್ಯಾವುದೂ ಬರಲೇ ಇಲ್ಲ. ಅಲ್ಲಿ ಪ್ರೀತಿಸುವ, ಗೌರವಿಸುವ ಮನಸುಗಳಿತ್ತು, ಎಲ್ಲಕ್ಕಿಂತ ಹೆಚ್ಚಾಗಿ ಚಿತ್ರೀಕರಣದುದ್ದಕ್ಕೂ ಸಹೋದರನಂತೆ ನೋಡಿಕೊಂಡ Arun Gowda Guddekeri ಅವ್ರಿದ್ರು, ಜೊತೆಯಲ್ಲಿ ಅಭಿನಯಿಸಿದ್ದ ಅಪರೂಪದ ಕಲಾವಿದರುಗಳು ಇದ್ರು…
Yogesh Gowda ಅವರ ಛಾಯಾಗ್ರಹಣದಲ್ಲಿ ಮೂಡಿ ಬಂದ ಚಿತ್ರವನ್ನು ಅಣ್ಣನಂಥ Kemparaju Shamanna ಅವ್ರು ಅಷ್ಟೇ ಚಂದವಾಗಿ ಸಂಕಲಿಸಿದ್ದಾರೆ. ನೀವುಗಳೊಮ್ಮೆ ಈ ಚಿತ್ರವನ್ನು ನೋಡಬೇಕು. ನಿಮಗೆ ಇಷ್ಟ ಆಗದೇ ಇರದು…
ಮರೀಬೇಡಿ
ಜುಲೈ 29 ರಂದು ಸಂಜೆ 6 ಗಂಟೆಗೆ
Zeeಪಿಚ್ಚರ್ ವಾಹಿನಿಯಲ್ಲಿ…
ಕಲಾವಿದ ಬರಹಗಾರ ಎಂ. ಕೆ. ಮಠ ರವರ ಸಂಪೂರ್ಣ ಸಿನಿ ಜೀವನ ಪಯಣ ಅತೀ ಶ್ರೀಘ್ರದಲ್ಲೇ ನಿಮ್ಮ Belagaviphotonews.com ಯಲ್ಲಿ ನಿರೀಕ್ಷಿಸಿ…..
cinevarthe – Belagaviphotonews.com