---Advertisement---

Advertisement

ಕುಟುಂಬದಲ್ಲಿ ಕೀರ್ತಿಗೊಬ್ಬ ಮಗ ಆರತಿಗೊಬ್ಬ ಮಗಳು ಆದರೆ ಕುಟುಂಬವು ಸುಖಜೀವನ : ಡಾ ಬಿಂದುಶ್ರೀ ಗಿರಡ್ಡಿ

 

ಮೂಡಲಗಿ : ಹಳ್ಳೂರ ಗ್ರಾಮ ಜಾಗತಿಕ ಜನಸಂಖ್ಯೆ ಬೆಳೆದಂತೆ ಬಡತನ ಆರ್ಥಿಕ ಕಾಳಜಿ ಉದ್ಯೋಗದಂತ ಸಮಸ್ಯೆಗಳು ಹೆಚ್ಚಾಗುತ್ತಿವೆ. ವಿಶ್ವ ಜನಸಂಖ್ಯಾ ದಿನಾಚರಣೆ ಮಾಡುವುದರಿಂದ ಜನಸಂಖ್ಯೆ ನಿಯಂತ್ರಣದಲ್ಲಿಡಲು ಸಾದ್ಯ. ಕುಟುಂಬದಲ್ಲಿ ಕೀರ್ತಿಗೊಬ್ಬ ಮಗ ಆರತಿಗೊಬ್ಬ ಮಗಳು ಆದರೆ ಕುಟುಂಬವು ಸುಖಜೀವನ ಹಾಗೂ ಜನಸಂಖ್ಯೆ ನಿಯಂತ್ರಣದಲ್ಲಿಡಲು ಸಾದ್ಯವಾಗುವದೆಂದು ಹಳ್ಳೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾದ ಬಿಂದುಶ್ರೀ ಗಿರಡ್ಡಿ ಹೇಳಿದರು.

ಅವರು ಗ್ರಾಮದ ಬಿ ಕೆ ಎಂ ಪ್ರೌಡ ಶಾಲೆಯಲ್ಲಿ ಆಯೋಜಿಸಿದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಜಾಗತಿಕ ಜನಸಂಖ್ಯೆ ಮತ್ತು ಅದರ ಏರಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಜನರಿಗೆ ತಿಳಿಸಲು ಮತ್ತು ಜಾಗೃತಿ ಮೂಡಿಸಲು ಪ್ರತಿ ವರ್ಷ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಆಚರಿಸುತ್ತಿದ್ದಾರೆ. ಎಲ್ಲರೂ ಜನಸಂಖ್ಯೆ ನಿಯಂತ್ರಣದಲ್ಲಿಡಲು ಪ್ರಯತ್ನಿಸಬೇಕು.ಜನಸಂಖ್ಯೆ ಹೆಚ್ಚಾಗುವುದರಿಂದ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿದೆ. ಯುವಕ ಯುವತಿಯರು ವಿದ್ಯಾವಂತರು ಕುಟುಂಬದಲ್ಲಿ ತಿಳಿ ಹೇಳಿದರೆ ಮಾತ್ರ ಜನಸಂಖ್ಯೆ ನಿಯಂತ್ರಣದಲ್ಲಿಡಲು ಸಾದ್ಯ ಎಂದು ಹೇಳಿದರು. ಅಭಿಲಾಷಾ ನಿಡಗುಂದಿ ಜನಸಂಖ್ಯೆ ನಿಯಂತ್ರಣ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಮಯದಲ್ಲಿ ಮುಖ್ಯೋಪಾದ್ಯಯರಾದ ಎಂ ಎನ್ ಕುಲಕರ್ಣಿ. ಆರ್ ಎಂ ತೆಲಸಂಗ. ಎಸ್ ಎಲ್ ಪೂಜೇರಿ. ಎಂ ಟಿ ದಡ್ಡಿಮನಿ. ಎಂ ಟಿ ಪಠಾನ. ಎಸ್ ಬಿ ಅರ್ಗಿ. ಮುರಿಗೆಪ್ಪ ಮಾಲಗಾರ. ಜಾನಕಿ ಹರಿಜನ ಪ್ರಾ ಆ ಕೆ ಸುರಕ್ಷಣಾಧಿಕಾರಿಗಳು. ವಿದ್ಯಾ ರಡರಟ್ಟಿ. ಆಶಾ ಸುಗಮಕಾರರು. ವತ್ಸಲಾ ಹೀರೆಮಠ. ಯಮನವ್ವ ಶಹಾಪುರ. ಲಕ್ಷ್ಮೀ ಲೋಕಣ್ಣವರ. ಶಾಮಶ್ಯಾದ ಮುಜಾವರ. ಸಂಗೀತಾ ಬಡಿಗೇರ. ಲಕ್ಷ್ಮೀ ಪಾಲಬಾಂವಿ. ಗೀತಾ ಹರಿಜನ. ಶೋಭಾ ತೇರದಾಳ. ಶಾಂತಾ ನೇಸೂರ. ಪ್ರೀತಿ ಮಾಲಗಾರ. ಸೇರಿದಂತೆ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

By BPN

Leave a Reply

Your email address will not be published. Required fields are marked *