---Advertisement---

Advertisement

ಖ್ಯಾತ ನಟಿಯ ಆರೋಗ್ಯದಲ್ಲಿ ಏರುಪೇರು. ಹಾಸಿಗೆ ಹಿಡಿದ ಲೀಲಾವತಿ ಅಮ್ಮನನ್ನು ಭೇಟಿಯಾಗಲು ಬಂದ ಸ್ಟಾರ್ ನಟರು ಯಾರು ಗೊತ್ತಾ?

ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ನಾಯಕ ನಟಿಯಾಗಿ ಮಿಂಚಿದ್ದ ಹಿರಿಯ ನಟಿ ಲೀಲಾವತಿ(Leelavathi Kannada Actress) ಅಮ್ಮನವರು ಇತ್ತೀಚಿಗಷ್ಟೇ ವಯೋಸಹಜ ಕಾಯಿಲೆಗಳಿಂದಾಗಿ ಹಾಸಿಗೆ ಹಿಡಿದಿದ್ದಾರೆ ಎನ್ನುವ ಅಧಿಕೃತ ಮಾಹಿತಿಗಳು ಹೊರಬಂದಿವೆ. ಲಾಕ್ಡೌನ್ ಸಂದರ್ಭದಲ್ಲಿ ತಮ್ಮ ಜಮೀನನ್ನು ಮಾರಿ ಅವರು ಮಾಡಿದಂತಹ ಸಮಾಜ ಸೇವೆ ಇಂದಿಗೂ ಕೂಡ ಪ್ರತಿಯೊಬ್ಬರು ನೆನಪಿಟ್ಟುಕೊಳ್ಳಬೇಕಾಗಿರುವಂತಹ ವಿಚಾರವಾಗಿದೆ.

ಎಲ್ಲಕ್ಕಿಂತ ಪ್ರಮುಖವಾಗಿ ಕೋಟಿ ಕೋಟಿ ಸಂಪಾದನೆ ಇಲ್ಲದಿದ್ದರೂ ಕೂಡ ಕೋಟಿ ಕೋಟಿ ದಾನ ಮಾಡಬೇಕು ಎನ್ನುವ ಅವರ ಮನಸ್ಸು ನಿಜಕ್ಕೂ ಕೂಡ ಎಲ್ಲರಿಗಿಂತ ದೊಡ್ಡದು ಎಂದು ಹೇಳಬಹುದಾಗಿದೆ. ಆದರೆ ಈಗ ಅವರು ಹಾಸಿಗೆ ಹಿಡಿದು ಮಲಗಿರುವುದು ನಿಜಕ್ಕೂ ಕೂಡ ಪ್ರತಿಯೊಬ್ಬರಿಗೆ ಬೇಸರವನ್ನು ಮೂಡಿಸಿದೆ. ಸದ್ಯಕ್ಕೆ ಲೀಲಾವತಿ(Leelavathi) ಅಮ್ಮನವರು ನೆಲಮಂಗಲದ(Nelamangala) ಸೋಲದೇವನಹಳ್ಳಿ ಇರುವ ತಮ್ಮ ತೋಟದ ಮನೆಯಲ್ಲಿಯೇ ಇದ್ದಾರೆ.

ವಿನೋದ್ ರಾಜ್(Vinod Raj) ರವರು ತಮ್ಮ ತಾಯಿಯ ಆರೈಕೆಯನ್ನು ಮಾಡುತ್ತಿದ್ದು ಲೀಲಾವತಿ ಅಮ್ಮನವರ ಆರೋಗ್ಯವನ್ನು ವಿಚಾರಿಸಲು ಹಾಗೂ ಅವರನ್ನು ಭೇಟಿಯಾಗಿ ಮಾತನಾಡಿಸಲು ಕನ್ನಡ ಚಿತ್ರರಂಗದ ಸ್ಟಾರ್ ನಟ ಹಲವಾರು ಕನ್ನಡ ಕಲಾವಿದರ ಜೊತೆಗೆ ಬಂದಿರುವುದು ಮತ್ತೊಂದು ವಿಶೇಷವಾದ ಸುದ್ದಿಯಾಗಿದೆ. ಹಾಗಿದ್ದರೆ ಆ ಕನ್ನಡದ ಸ್ಟಾರ್ ನಟ ಯಾರು ?

 

ಕನ್ನಡ ಚಿತ್ರರಂಗದ ಪಣಯರಾಜ ಎಂದೇ ಬಿರುದಾಂಕಿತರಾಗಿರುವ ಶ್ರೀನಾಥ್(Srinath Kannada Actor) ರವರು ಸುಂದರ್ ರಾಜ್(Sundar Raj) ಪ್ರಮೀಳಾ ಜೋಷಾಯಿ ಹಾಗೂ ಇನ್ನಿತರರ ಜೊತೆಗೆ ಲೀಲಾವತಿ ಅಮ್ಮನವರ ಆರೋಗ್ಯವನ್ನು ವಿಚಾರಿಸಿ ಮಾತನಾಡಿಕೊಂಡು ಹೋಗಿದ್ದಾರೆ. ಶ್ರೀನಾಥ್ ಅವರನ್ನು ನೋಡಿ ಲೀಲಾವತಿ ಅಮ್ಮನವರು ಖುಷಿಯಿಂದ ಮಾತನಾಡಿಸಿದ್ದಾರೆ ಎಂಬುದಾಗಿ ಕೂಡ ತಿಳಿದು ಬಂದಿದೆ. ಈ ಸಂದರ್ಭದಲ್ಲಿ ಕ್ಲಿಕ್ಕಿಸಿರುವಂತಹ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

By BPN

Leave a Reply

Your email address will not be published. Required fields are marked *