ಮೂಡಲಗಿ ಸದ್ಯದ ಚುನಾವಣೆಯಲ್ಲಿ ಅರಬಾವಿ ಮತಕ್ಷೇತ್ರದ ಸ್ಥಳೀಯರು ಅವಕಾಶ ನೀಡಬೇಕು ಹೀಗಾಗಿ ನಾನು ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ನನಗೂ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಬಿಜೆಪಿ ಮುಖಂಡ ನಿಂಗಪ್ಪ ಪಿರೋಜಿ ಹೇಳಿದರು.
ಬೆಳಗಾವಿಯಲ್ಲಿ ಪತ್ರಕರ್ತರೊಡನೆ ಮಾತನಾಡಿದ ಅವರು 20 ವರ್ಷಗಳಿಂದ ಬಿಜೆಪಿಯಲ್ಲಿ ಅರಮನೆ ಬ್ಲಾಕ್ ಅಧ್ಯಕ್ಷರಾಗಿ ಮತ್ತು ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ ಅವರನ್ನು ಬಿಟ್ಟು ಶಾಸಕರು ಆಗಿದ್ದಾರೆ.
ಅರಬಾವಿಯಲ್ಲಿ ಈ ಸಲ ಸ್ಥಳೀಯರಿಗೆ ಅವಕಾಶ ಕೊಡಿ ಎಂದು ರಾಜ್ಯ ಮತ್ತು ರಾಷ್ಟ್ರ ನಾಯಕರನ್ನು ಕೇಳುತ್ತೇನೆ.
ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಿಗೆ ದೊಡ್ಡ ದೊಡ್ಡ ಜವಾಬ್ದಾರಿ ಹುದ್ದೆ ನೀಡಿದ ಉದಾಹರಣೆ ಇದೆ ಎಲ್ಲಾ ಸಮಾಜದವರ ಸಹಕಾರವಿದೆ ನನಗೆ .
ಈ ಸಲ 2023ರ ಅರಭಾವಿ ಮತಕ್ಷೇತ್ರದ ಪ್ರಬಲ ಆಕಾಂಕ್ಷಿ ಅಭ್ಯರ್ಥಿ ನಾನಾಗಲು ಬಯಸಿದ್ದೇನೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್ ಅವರು ಭೇಟಿ ಮಾಡಿ ಈ ಬಗ್ಗೆ ಮನವಿ ಸಲ್ಲಿಸಿದ್ದಾಗಿಯೂ ಪಿರೋಜಿ ಹೇಳಿದರು.