ಸಂವಿಧಾನದ ಮೌಲ್ಯಗಳನ್ನು ಪಾಲಿಸುವ, ಜಾತ್ಯತೀತ, ಮೂಡಿಸುವ ಹಾಗೂ ಜಾತಿ, ಧರ್ಮ, ಸಮುದಾಯ- ವೆನ್ನದೆ ಎಲ್ಲರನ್ನೂ ಸಮಾನ ದೃಷ್ಟಿಯಲ್ಲಿ ನೋಡುವ ಅಭ್ಯರ್ಥಿಗಳನ್ನು ನಾಡಿನ ಮತದಾರರು ಆಯ್ಕೆ ಮಾಡಬೇಕು. ಸೌಹಾರ್ದವನ್ನು
ಹಿಜಾಬ್, ಅಜಾನ್, ಮತಾಂತರ ನಿಷೇಧ, ಹಲಾಲ್ ಮುಂತಾದ ಕೋಮುವಾದದ ಕಾರ್ಯ- ಸೂಚಿಯನ್ನು ಈ ನಾಡಿನ ಜನತೆ ಒಪ್ಪುವುದಿಲ್ಲ ಎಂಬ ಸಂದೇಶವನ್ನು ಈ ಚುನಾವಣೆಯಲ್ಲಿ ನಾವು ತೋರಿಸಬೇಕು. ಯಾವುದೇ ಧರ್ಮ ಇರಲಿ, ಅದನ್ನು ಆಚರಿಸುವುದಕ್ಕೆ ಧಾರ್ಮಿಕ ಸ್ವಾತಂತ್ರ್ಯಕ್ಕೆ ಪ್ರೋತ್ಸಾಹ ನೀಡುವ ಹಾಗೂ ಮಾನವ ಹಕ್ಕುಗಳನ್ನು ತೀವ್ರವಾಗಿ ಪ್ರತಿಪಾದಿಸುವವರನ್ನು ಬೆಂಬಲಿಸಬೇಕು.
ಬಸವಣ್ಣನವರ ಕಲ್ಯಾಣ ಕರ್ನಾಟಕ, ಕುವೆಂಪು ಅವರ ಸರ್ವೋದಯ ಕರ್ನಾಟಕವನ್ನು ನಿರ್ಮಿಸುವ, ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಇಚ್ಛಾಶಕ್ತಿ ಇರುವ ಅಭ್ಯರ್ಥಿಗಳಿಗೆ ನಾವು ಮತ ಹಾಕಬೇಕು.
ಇಂದು ನಾವು ಕೈಗೊಳ್ಳುವ ನಿರ್ಧಾರ ನಮ್ಮ ಮಕ್ಕಳ ಮುಂದಿನ ಭವಿಷ್ಯವನ್ನು ರೂಪಿಸುತ್ತದೆ ಎಂಬುದನ್ನು ನಾವು ಮರೆಯಬಾರದು. ಹಣ, ಉಡುಗೊರೆ ಮುಂತಾದ ಆಮಿಷಗಳಿಗೆ ಒಳಗಾಗದೆ ಸಂವಿಧಾನ ನೀಡಿರುವ ಹಕ್ಕನ್ನು ಪ್ರಜ್ಞಾಪೂರ್ವಕವಾಗಿ ಹಾಗೂ ಕಡ್ಡಾಯವಾಗಿ ಈ ಚುನಾವಣೆಯಲ್ಲಿ ಚಲಾಯಿಸಬೇಕು.
ರೆವರೆಂಡ್ ಡಾ. ಪೀಟರ್ ಮಚಾದೊ, ಬೆಂಗಳೂರಿನ ಆರ್ಚ್ ಬಿಷಪ್