ಖಾನಾಪೂರ ತಾಲೂಕಿನ ಗೋಧೂಳಿಯ ನಾಲ್ವರು ಕಬ್ಬಿಗೆ ನೀರು ಹಾಯಿಸಿ ಮನೆಗೆ ವಾಪಸ್ಸು ಆಗುತ್ತಿರುವ ಸಂದರ್ಭದಲ್ಲಿ ಅಪರಿಚಿತ ಕಾರು ಡಿಕ್ಕಿ ಹೊಡೆದು ಹೋದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ಮಹಾಬಲೇಶ್ವರ ಶಿಂಧೆ (65) ಮತ್ತು ಪುಂಡಲೀಕ ರೆಡೇಕರ (72) ಸ್ಥಳದಲ್ಲೇ ಮೃತಪಟ್ಟಿದ್ದು, ಪುಂಡಲೀಕ ಅವರ ಹಿರಿಯ ಸಹೋದರ ಕೃಷ್ಣ ರೆಡೇಕರ ಅವರು ಗಂಭೀರವಾಗಿ ಗಾಯಗೊಂಡಿದ್ದು ಮತ್ತೊಬ್ಬನಿಗೆ ಅಲ್ಪಸ್ವಲ್ಪ ಗಾಯಗಳಾಗಿವೆ ಮೃತ ದೇಹವನ್ನು ಖಾನಾಪೂರ.
ಸರ್ಕಾರಿ ಆಸ್ಪತ್ರೆಗೆ ತಂದಿದ್ದು ಶಾಸಕಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರು ಭೇಟಿ ನೀಡಿ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಕೂಡಲೇ ಪಂಚನಾಮೆ ಮಾಡಿ ಮೃತ
ದೇಹವನ್ನು ನೀಡಲು ಆಸ್ಪತ್ರೆಯ ಮೇಲಾಧಿಕಾರಿಗಳಿಗೆ ಹೇಳಿದ್ರು ರಾತ್ರಿ ವೇಳೆ ಹೊಲಕ್ಕೆ ನೀಡುವ ತ್ರಿಫೇಸ್ ವಿದ್ಯುತ್ ಪೂರೈಕೆ ಬಗ್ಗೆ ಮೇಲಿಂದ ಮೇಲೆ ಹೆಸ್ಕಾಂ ಅಧಿಕಾರಿಗಳಿಗೆ ಗಮನಕ್ಕೆ ತಂದು ಹಗಲಿನ ಹೊತ್ತು ನೀಡಲು ಸೂಚನೆ ನೀಡಿಯೂ ಪ್ರಯೋಜನವಾಗಿಲ್ಲ ಬಿಜೆಪಿ ಸರ್ಕಾರ ರೈತರ ಬಗ್ಗೆ ಕಾಳಜಿಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
BPN ಸುದ್ಧಿ .ಸ್ಟಿವನ್ ಫರ್ನಾಂಡಿಸ್ ಖಾನಾಪುರ ವರದಿ .