---Advertisement---

Advertisement

 

ಕನ್ನಡ ಸಾಹಿತ್ಯ ಪರಿಷತ್ತಿನ ʻಕನ್ನಡ ಪ್ರವೇಶʼ, ʻಕಾವʼ, ʻಜಾಣʼ ಹಾಗೂ ʻರತ್ನʼ ಪರೀಕ್ಷೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ೨೦೨೩-೨೪ನೆಯ ಸಾಲಿನ ʻಕನ್ನಡ ಪ್ರವೇಶʼ, ʻಕಾವʼ, ʻಜಾಣʼ ಹಾಗೂ ʻರತ್ನʼ ಪರೀಕ್ಷೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.
೨೦೨೩ರ ಡಿಸೆಂಬರ್ ಕೊನೆಯ ವಾರದಲ್ಲಿ ನಡೆಯಲಿರುವ ʻಕನ್ನಡ ಪ್ರವೇಶ, ಕಾವ, ಜಾಣ ಹಾಗೂ ರತ್ನʼ ಪರೀಕ್ಷೆಗಳಿಗೆ ಅರ್ಜಿಯನ್ನು ಸಲ್ಲಿಸಲು ೨೦೨೩ರ ಆಗಸ್ಟ್ ೩೧ ಕೊನೆಯ ದಿನವಾಗಿದೆ. ೨೦೨೩ರ ಸೆಪ್ಟೆಂಬರ್ ೧೫ ರ ವರೆಗೆ ದಂಡ ಶುಲ್ಕ ರೂ. ೫೦-೦೦ ಅನ್ನು ಹೆಚ್ಚುವರಿಯಾಗಿ ಪಾವತಿಸಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಣೆಯಲ್ಲಿ ತಿಳಿಸಿದೆ.
ಪರೀಕ್ಷಾ ನಿಯಮಾವಳಿ ಹಾಗೂ ಅರ್ಜಿಯನ್ನು ೨೫ ರೂ. ಶುಲ್ಕ ಪಾವತಿಸಿ, ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿಯಲ್ಲಿ ಇರುವ ಮಾರಾಟ ಮಳಿಗೆಯಲ್ಲಿ ದಿನಾಂಕ ೦೧-೦೭-೨೦೨೩ ರಿಂದ ಪಡೆಯಬಹುದಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಹೆಸರಿಗೆ ಮೂವತ್ತು ರೂಪಾಯಿ ಮನಿಯಾರ್ಡರ್ ಮಾಡಿದರೆ ಅರ್ಜಿಯನ್ನು ತಾವು ನೀಡಿರುವ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸುವ ಸೌಲಭ್ಯವನ್ನು ಪರಿಷತ್ತು ಕಲ್ಪಿಸಿದೆ.
ಅರ್ಜಿ ನಮೂನೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಂತರ್ಜಾಲ ತಾಣ www.kasapa.in ಮೂಲಕ ಸಹ ಪಡೆದು ಕೊಳ್ಳಬಹುದು. ಅಂತರ್ಜಾಲದ ಮೂಲಕ ಅರ್ಜಿ ನಮೂನೆ ಪಡೆದವರು ಪರೀಕ್ಷಾ ಶುಲ್ಕದೊಂದಿಗೆ ಅರ್ಜಿ ಶುಲ್ಕ ೨೫ ರೂ.ಗಳನ್ನು ಪ್ರತ್ಯೇಕವಾಗಿ ಪಾವತಿಸಬೇಕಾಗುವುದು. ಹೆಚ್ಚಿನ ವಿವರಗಳಿಗೆ ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು- ೫೬೦೦೧೮, ದೂರವಾಣಿ ಸಂಖ್ಯೆ : ೦೮೦-೨೬೬೧೨೯೯೧, ೨೨೪೨೩೮೬೭, ೨೬೬೨೩೫೮೪ ಸಂಪರ್ಕಿಸಿ ಪಡೆದುಕೊಳ್ಳಬಹುದಾಗಿದೆ.

 

By BPN

Leave a Reply

Your email address will not be published. Required fields are marked *