ಬೆಳಗಾವಿ : ನಗರದಲ್ಲಿ ಹಾಡ ಹಗಲೇ ಪಿಸ್ತೂಲ್ ತೋರಿಸಿ ಚಿನ್ನಾಭರಣದ ಅಂಗಡಿಯನ್ನು ದರೋಡೆಗೆ ಯತ್ನಿಸಿದ ಘಟನೆ ಸೋಮವಾರ ನಡೆದಿದೆ.
ಇಲ್ಲಿನ ಶಾಹುನಗರಲ್ಲಿರುವ ಸಂತೋಷಿ ಜುವೇಲರ್ಸ್ ಚಿನ್ನಾಭರಣದ ಅಂಗಡಿಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಪಿಸ್ತೂಲ್ ತೋರಿಸಿ ದರೋಡೆಗೆ ಯತ್ನಿಸಿದ್ದಾರೆ. ಅಂಗಡಿ ಮಾಲೀಕ ಪ್ರಶಾಂತ ಜತೆಗೆ ಸಿನಿಮೀಯ ರೀತಿಯಲ್ಲಿ ಕುಸ್ತಿ ಹಿಡಿದು ಪರಾರಿಯಾಗಿದ್ದಾರೆ
.
ಸ್ಥಳಕ್ಕೆ ಭೇಟಿ ನೀಡಿದ ನಗರ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ ಎಪಿಎಂಸಿ ಪೊಲೀಸ್ ಸಿಬ್ಬಂದಿಗಳೊಂದಿಗೆ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿ ನಗರ ಪೊಲೀಸ್ ಆಯುಕ್ತ ಡಾ. ಎಸ್.ಎನ್.ಸಿದ್ದರಾಮಪ್ಪ, ಎಂದಿನಂತೆ ಬೆಳಗಿನ ಜಾವ ಸಂತೋಷಿ ಜುವೇಲರ್ಸ್ ಅಂಗಡಿಯನ್ನು ಬೆಳಗ್ಗೆ ತೆಗೆದು ಸ್ವಚ್ಚತೆ ಮಾಡುವಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಆಗಮಿಸಿ ಮಾಲೀಕರಿಗೆ ಪಿಸ್ತೂಲ್ ತೋರಿಸಿ ಕಳ್ಳತನ ಮಾಡಲು ಯತ್ನಿಸಿದ್ದಾರೆ. ಅಂಗಡಿ ಮಾಲೀಕರೊಂದಿಗೆ ಫೈಟ್ ಮಾಡಿ ಪರಾರಿಯಾಗಿದ್ದು ಅಂಗಡಿ ಮಾಲೀಕರಿಗೆ ಸಣ್ಣ ಪುಟ್ಟ ಗಾಯವಾಗಿವೆ. ಆರೋಪಿಗಳ ಸುಳಿವು ಸಿಕ್ಕಿದ್ದು ಶೀಘ್ರದಲ್ಲೇ ಬಂಧಿಸಲಾಗುವುದು ಎಂದರು.
ಡಿಸಿಪಿಗಳಾದ ಜಗದೀಶ್ ರೋಹಣ್, ಸ್ನೇಹಾ ಪಿ.ವಿ. ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.