ಬೆಳಗಾವಿ BPN ಸುದ್ಧಿ : ಮಹಾನಗರ ಪಾಲಿಕೆಯ ಬಜೆಟ್ ಸಭೆ ಇದೇ ಮಾರ್ಚ್ 6 ರಂದು ನಡೆಯಲಿದೆ ಈ ಹಿಂದೆ ಅಧಿಕಾರಿಗಳು ಸಿದ್ಧ ಪಡಿಸಿದ ಬಜೆಟ್ ಬಗ್ಗೆ ಚರ್ಚೆ ನಡೆಸಲಾಗುವುದು ,ಅನುಮೋದನೆ ಪಡೆಯುವ ಸಲುವಾಗಿ ಈ ಸಭೆ ನಡೆಸಲಾಗುತಿದೆ ಎನ್ನಲಾಗಿದೆ.
ಹಾಗೆ ನೋಡಿದರೆ ಬಜೆಟ್ ಅನುಮೋದಿಸಲು ಸಾಮಾನ್ಯ ಸಭೆ ಕರೆಯ ಬೇಕಿತ್ತು ಆದರೆ ಇಲ್ಲಿ ಮೇಯರ್ 22 ಜನ ನಗರ ಸೇವಕರ ಸಹಿ ಪಡೆದು ವಿಶೇಷ ಸಭೆ ಕರೆಯಲು ತೀರ್ಮಾನಿಸಿದ್ದಾರೆ.
ಇದರಿಂದ ಸಾಮಾನ್ಯ ಸಭೆ ಕರೆಯುವ ಬದಲು ಬಜೆಟ್ ಬಗ್ಗೆ ಚರ್ಚಿಸಲು ವಿಶೇಷ ಸಭೆ ಕರೆದ್ದಿದ್ದಾರೆ ಎನ್ನಲಾಗಿದೆ.
ಇಲ್ಲಿ ಯಾವುದೇ ಸ್ಥಾಯೀ ಸಮಿತಿ ರಚಿಸದೆ ಸಾಮಾನ್ಯ ಸಭೆ ಕರೆಯುವಂತಿಲ್ಲ, ಕೆಲವೇ ದಿನದಲ್ಲಿ ಚುನಾವಣಾ ನೀತಿ ಸಮೀತೆ ಬರುವುದರಿಂದ ಯಾವುದೇ ಸ್ಥಾಯಿ ಸಮಿತಿ ರಚಿಸೋ ಹಾಗಿಲ್ಲ
ಇದಲ್ಲದೆ ಬಜೆಟ್ ಅನುಮೋದನೆ ಪಡೆದುಕೊಳ್ಳದ್ದಿದರೆ ಸಿಬ್ಬಂದಿಗಳ ಸಂಬಳ ಕೂಡ ಆಗುವುದು ಕಷ್ಟವಾಗುತ್ತದೆ.
ಮಹಾನಗರ ಪಾಲಿಕೆಯ ಆಡಳಿತದಲ್ಲಿ ಮೇಯರ್ ಆಗಲಿ ಉಪಮೆಯರ್ ಆಗಲಿ ಹಸ್ತ ಕ್ಷೇಪ ಮಾಡುವಂತಿಲ್ಲವೆಂದು ಶಾಸಕರು ತಿಳಿಸಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಮಾಧ್ಯಮದಲ್ಲಿ ಬಂದ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಶಾಸಕರಿಬ್ಬರು ಇಬ್ಬರನ್ನು ಕರೆದು ಕಟ್ಟು ನಿಟ್ಟಿನಲ್ಲಿ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
B P N ಸುದ್ಧಿ.