---Advertisement---

Advertisement

ಬೆಳಗಾವಿ BPN ಸುದ್ಧಿ: ದಕ್ಷಿಣ ಭಾರತದ ರಾಷ್ಟ್ರೀಯ ವೀಲ್‌ ಚೇರ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ, ಫೈನಲ್ ಪಂದ್ಯಾವಳಿಯಲ್ಲಿ ತಂಡ ಚಾಂಪಿಯನ್ ಆಗುವಲ್ಲಿ ಶ್ರಮಿಸಿ ಅತ್ಯುತ್ತಮ ಬೌಲರ್ ಪ್ರಶಸ್ತಿಗೆ ಭಾಜನರಾದ ಕ್ರೀಡಾಪಟು ಹನುಮಂತ ಲಕ್ಕಪ್ಪ ಹಾವನ್ನವರ ಸಾಧನೆಗೆ ಬೆಳಗಾವಿಯ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇಲ್ಲಿಯ ಸಾಮಾಜಿಕ ಕಾರ್ಯಕರ್ತ ಪ್ರಕಾಶ ಮುದೋಳ, ಜೆಡಿಎಸ್ ನಾಯಕ ರಾಮದುರ್ಗ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದ್ದಾರೆ.

 

ಹನುಮಂತ ಲಕ್ಕಪ್ಪ ಹಾವನವರ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಗುಲಗಂಜಿಕೊಪ್ಪ ಗ್ರಾಮದಲ್ಲಿ 1991ರ ಆಗಸ್ಟ್‌ 5ರಂದು ಲಕ್ಕಪ್ಪ, ಲಕ್ಷ್ಮಿ ದಂಪತಿಗಳಿಗೆ ಪ್ರತನಾಗಿ ಜನಸಿದರು. ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1ರಿಂದ 5ನೇ ತರಗತಿಯವರೆಗೆ ಯಾದವಾಡದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿ, ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆಯಲ್ಲಿ ರಿಂದ 10ನೇ ತರಗತಿ,2009ರಲ್ಲಿ ಗೋಪನಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜುನಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದಾರೆ.

 

ಬಡ ಮಕ್ಕಳಿಗೆ ಸಹಾಯಹಸ್ತ: ಸ್ವಾಮಿ ವಿವೇಕಾನಂದರ ಆದರ್ಶಗಳನ್ನು, ಜೀವನದಲ್ಲಿ ಅಳವಡಿಸಿಕೊಂಡಿರುವ ಹಾವನ್ನವರ ತಮ್ಮ ಜೀವನವನ್ನೂ ಸಾಮಾಜಿಕ ಸೇವೆಗೆ ಮುಡಿಪಾಗಿ ಇಟ್ಟಿದ್ದಾರೆ. ನಂತರ ರಾಜಕೀಯ ಕ್ಷೇತ್ರ ಪ್ರವೇಶಿಸಿ ಅದರಲ್ಲೂ ಸೈ ಎನಿಸಿಕೊಂಡಿದ್ದಾರೆ. ವಿಶೇಷವಾಗಿ ಹಾಲುಮತ ಸಮುದಾಯದ ಬಡ ಮಕ್ಕಳಿಗಾಗಿ ಸಾಕಷ್ಟು ಸಹಾಯ ಮಾಡಿದ್ದಾರೆ.

ಮುರಾರ್ಜಿ ದೇಸಾಯಿ ಒಳಗೊಂಡು ಇತರ ವಸತಿ ಶಾಲೆ, ಪ್ರತಿಷ್ಠಿತ ಶಾಲೆಗಳಲ್ಲಿ ಸಮುದಾಯದ ಅನೇಕ ಬಡ ಹಾಗೂ ಕುರಿಗಾಹಿ ಮಕ್ಕಳಿಗೆ ದಾಖಲಾತಿ ಕೊಡಿಸಿದ್ದಾರೆ. ಕುರಿಗಳಿಗೆ ಉಚಿತ ಔಷಧಿ, ಅನಾಥ ಮಕ್ಕಳಿಗೆ ಕೈಲಾದ ಸಹಾಯ ಮಾಡಿದ್ದಾರೆ. ಅನೇಕ ಮಠಾಧೀಶರಿಗೂ ಈತ ಅಚ್ಚುಮೆಚ್ಚು, ಎನ್‌ಜಿಒಗಳ ಮೂಲಕ ಗುರುತಿಸಿಕೊಂಡಿದ್ದೂ, ಸಾಮಾಜಿಕ ಸೇವೆಯಲ್ಲಿ

ತೊಡಗಿಕೊಂಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೇವೆಗಳನ್ನು ಅರ್ಹರ ಮನೆಬಾಗಿಲಿಗೆ ಮುಟ್ಟುವಂತೆ ಮಾಡಿದ್ದಾರೆ. ಅಲ್ಲದೆ, ಅಂಗವಿಕಲರ ಪಾಲಿನ ಆಶಾಕಿರಣವೂ ಹೌದು.

ಗುಲಗಂಜಿ ಕೊಪ್ಪದ ಗ್ರಾಮ ಪಂಚಾಯಿತಿ ಸದಸ್ಯನಾಗಿರುವ ಈತ ಬಿಜೆಪಿ ಪಕ್ಷದಲ್ಲಿಗು ರುತಿಸಿಕೊಂಡಿದ್ದು. ಪಕ್ಷ ನೀಡುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಉತ್ತಮ ಕ್ರೀಡಾಪಟುವಾಗಿರುವ ಇವರು, ಸ್ಟೀಲ್‌ ಚೇರ್ ಕಿಕೆಟರ್’ ಎಂದೇ ಈ ಭಾಗದಲ್ಲಿ ಖ್ಯಾತಿ ಪಡೆದಿದ್ದಾರೆ. ನೇಪಾಳದಲ್ಲಿ 2023ರ ಮಾರ್ಚ್‌ನಲ್ಲಿ ಆಯೋಜಿಸಿರುವ ವೀಲ್‌ ಚೇರ್ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇದೇ ರೀತಿ ಉತ್ತಮ ಸಾಧನೆಗೈದು ಹಾಲುಮತ ಸಮುದಾಯದ ಸೇವೆಗೂ ಸದಾ ಸಿದ್ಧರಾಗಿರುವ ಹನುಮಂತ ಅವರ ಜೀವನ ಸುಖಕರವಾಗಲಿ ಎಂದು ಬೆಳಗಾವಿ ಫೋಟೋ ನ್ಯೂಸ್ ವತಿಯಿಂದ ಶುಭ ಹಾರೈಕೆಗಳು.

ಸ್ಟೀಫನ್ ಜೇಮ್ಸ್.

 

By BPN

Leave a Reply

Your email address will not be published. Required fields are marked *