ಇದೇ ಫೆಬ್ರವರಿ 27 ರಂದು ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿ ಅವರು ನಮ್ಮ ಬೆಳಗಾವಿಯ ನೂತನ ರೈಲ್ವೆ ನಿಲ್ದಾಣದ ಉದ್ಘಾಟನೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲನೆ ಮಾಡಿದ ಸಂಸದೆ ಮಂಗಳ ಅಂಗಡಿ.
ರೈಲ್ವೆ ಅಧಿಕಾರಿಗಳಾದ ಶ್ರೀ ಹರ್ಷ ಖಾರೆ ಹಾಗೂ ಶ್ರೀ ಹರಿತಾ ಅವರ ಜತೆ ಸಭೆ ನಡೆಸಿ ಪ್ರತಿಯೊಂದು ಮಾಹಿತಿಯನ್ನು ಪಡೆದುಕೊಂಡು ಎಲ್ಲ ರೀತಿಯ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬೆಳಗಾವಿ ರೈಲ್ವೆ ನಿಲ್ದಾಣವನ್ನು ಸುಮಾರು 210 ಕೋಟಿ ರೂಪಾಯಿ ವೆಚ್ಚದಲ್ಲಿ ಮರುರೂಪಿಸಲಾಗಿದೆ ಹಾಗೂ ಅಂದಾಜು 550 ಕೋಟಿ ವೆಚ್ಚದಲ್ಲಿ ಘಟಪ್ರಭಾ ಲೋಂಡಾ ಡಬಲ್ ಟ್ರ್ಯಾಕ್ ನಿರ್ಮಿಸಲಾಗಿದೆ ಎಂದು ಸಂಸದೆ ಮಂಗಳ ಅಂಗಡಿ BPN ಗೆ ತಿಳಿಸಿದರು.
BPN ಸುದ್ಧಿ.