ನ್ಯೂಯಾರ್ಕ್: ಸೂರ್ಯನಿಂದ ಬೃಹತ್ ಭಾಗ ವೊಂದು ಬೇರ್ಪಟ್ಟಿದ್ದು, ಇದು ಸೂರ್ಯನ ಉತ್ತರ ಧ್ರುವದಲ್ಲಿ ಸುರುಳಿಯಾಕಾರದಲ್ಲಿ ಸುತ್ತತೊಡಗಿದೆ. ಎಂಬುದನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ದ ಜೇಮ್ಸ್ ವೆಬ್ ಟೆಲಿಸ್ಕೋಪ್ ಪತ್ತೆಹಚ್ಚಿದೆ. ವಿಜ್ಞಾನಿಗಳಲ್ಲಿ ತೀವ್ರ ಅಚ್ಚರಿ ಮೂಡಿಸಿದೆ. ಅಲ್ಲದೆ, ಇದರಿಂದ ಭೂಮಿಯ ಮೇಲೆ ಯಾವ ರೀತಿಯ ಪುಣಾಮ ಉಂಟಾಗಬಹುದು. ಎಂಬ ಬಗ್ಗೆ ಅಧ್ಯಯನ ಆರಂಭವಾಗಿದೆ.
1 ವರ್ಷ ಹಿಂದೆ ಇಂಥ ವಿದ್ಯಮಾನ ನಡೆದಿದ್ದರೂ, ಈಗ ಹಿಂದಿಗಿಂತ ಹೆಚ್ಚು ಪ್ರಮಾಣದಲ್ಲಿ ಬೃಹತ್ ಭಾಗ ಸೂರ್ಯನಿಂದ ಬೇರ್ಪಟ್ಟಿದೆ. ಈವರೆಗೂ ಬಿಡುಗಡೆಯಾಗುತ್ತಿದ್ದ ಜ್ವಾಲೆಗಳು ಭೂಮಿಯಲ್ಲಿನ ಸಂವಹನದ ಮೇಲೆ ಪರಿಣಾಮ ಬೀರುತ್ತಿದ್ದವು, ಆದರೆ ಈ ಸಲ ಬೇರ್ವಟ್ಟ ಭಾಗದಿಂದ ಬೃಹತ್ ಸೌರಜ್ವಾಲೆಗಳು ಏಳುತ್ತಿವೆ. ಉಪಗ್ರಹಗಳಿಂದ ಬರುವ ತರಂಗಗಳ ಮೇಲೆ ಮತ್ತಷ್ಟು ಪರಿಣಾಮ ಅಧ್ಯಯನಗಳು ನಡೆಯುತ್ತಿವೆ.
ಜೇಮ್ಸ್ ವೆಬ್ ಟೆಲಿಸ್ಕೋವ್ ಸೆರೆಹಿಡಿರುವ ಈ ವಿಡಿಯೋವನ್ನು ಹವಾಮಾನ ತಜ್ಞ ಡಾ.ತಮೀಹಾ ಸ್ಟೋವ್ ಅವರು ಟೀಟರ್‌ನಲ್ಲಿ ಹಂಚಿಕೊಂಡಿದ್ದಾರೆ.