ಮುಂಬೈ:BPN ವರದಿ ಜನವರಿ 23 ರಂದು ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಹಾಗೂ ಕ್ರಿಕೆಟಿಗ ಕೆ.ಎಲ್ ರಾಹುಲ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಈ ಜೋಡಿ ಹಕ್ಕಿಗಳು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ರಾಹುಲ್ ಹಾಗೂ ಅಥಿಯಾ ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಮದುವೆ ವಿಚಾರ ಬಂದಾಗಲೆಲ್ಲಾ ಈ ಜೋಡಿ, ಸುದ್ದಿಯನ್ನು ನಿರಾಕರಿಸುತ್ತಲೇ ಇದ್ದರು. 5 ದಿನಗಳ ಹಿಂದಷ್ಟೇ ಸರಳವಾಗಿ ಮದುವೆಯಾಗಿದ್ದಾರೆ. ಸುನಿಲ್ ಶೆಟ್ಟಿ ಮುಂಬೈನ ನಿವಾಸದಲ್ಲೇ ಈ ಮದುವೆ ನೆರವೇರಿದೆ
ಸುನಿಲ್ ಶೆಟ್ಟಿ ಹುಟ್ಟಿದ್ದು ಮಂಗಳೂರಿನ ಮುಲ್ಕಿಯಲ್ಲಿ. ಬಾಲಿವುಡ್‌ನಲ್ಲಿ ದೊಡ್ಡ ಸ್ಟಾರ್ ನಟನಾಗಿ ಹೆಸರು ಮಾಡಿದ್ದಾರೆ. ಆದರೂ ಅವರು ಕರ್ನಾಟಕದ ಸಂಪ್ರದಾಯವನ್ನು ಮರೆತಿಲ್ಲ. ಮದುವೆಯ ಎಲ್ಲಾ ಶಾಸ್ತ್ರಗಳು ದಕ್ಷಿಣ ಭಾರತದ ಸಂಪ್ರದಾಯದಂತೆ ನೆರವೇರಿದೆ.
ಸುನಿಲ್ ಶೆಟ್ಟಿ ಆಗ್ಗಾಗ್ಗೆ ಮಂಗಳೂರಿಗೆ ಬಂದು ದೇವರ, ದೈವದ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ತುಳು ಕಾರ್ಯಕ್ರಮಗಳಿಗೂ ಅತಿಥಿಯಾಗಿ ಭಾಗವಹಿಸಿದ್ದಾರೆ. ಇದೀಗ ತಮ್ಮ ಮಗಳ ಮದುವೆಯಲ್ಲಿ ಕೂಡಾ ಅವರು ತಮ್ಮ ಊರಿನ ಸಂಪ್ರದಾಯವನ್ನು ಪಾಲಿಸಿದ್ದಾರೆ.
ಮದುವೆ ಹಾಗೂ ಹಳದಿ ಶಾಸ್ತ್ರದ ದಿನ ಸುನಿಲ್ ಶೆಟ್ಟಿ, ತಮ್ಮ ನಿವಾಸದ ಸುತ್ತಮುತ್ತ ಸೇವಂತಿಗೆ ಹೂವಿನಿಂದ ಸಿಂಗಾರ ಮಾಡಿಸಿದ್ದಾರೆ.
ಮದುವೆ ವೇಳೆ ಎಲ್ಲಾ ಶಾಸ್ತ್ರಗಳೂ ದಕ್ಷಿಣ ಭಾರತದ ಸಂಪ್ರದಾಯದಂತೆ ನೆರವೇರಿದೆ. ಇದಕ್ಕೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಮದುವೆಗೆ ಬಂದ ಅತಿಥಿಗಳಿಗೆ ಸುನಿಲ್ ಶೆಟ್ಟಿ ಬಾಳೆ ಎಲೆ ಊಟದ ವ್ಯವಸ್ಥೆ ಮಾಡಿಸಿದ್ದರು ಎನ್ನಲಾಗಿದೆ.
BPN ಚಿತ್ರ ವಾರ್ತೆ…