---Advertisement---

Advertisement

ಚಾಮರಾಜನಗರದ ಇಮ್ರಾನ್ ಅಹ್ಮದ್ ರವರಿಗೆ ಕಂಚು ಮತ್ತು ಬೆಳ್ಳಿ ಪದಕ

ಚಾಮರಾಜನಗರ. ಜುಲೈ-೦೬- ಕರ್ನಾಟಕ ಸ್ಟೇಟ್ ರೈಫಲ್ ಅಸೋಸಿಯೇಷನ್ ಆಯೋಜಿಸಿದ್ದ ರಾಜ್ಯ ಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಚಾಮರಾಜನಗರದ ಇಮ್ರಾನ್ ಅಹ್ಮದ್ ರವರಿಗೆ ಕಂಚು ಮತ್ತು ಬೆಳ್ಳಿ ಪದಕ ಲಭಿಸಿದೆ.

ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ, ಕರ್ನಾಟಕ ಒಲಂಪಿಕ್ ಅಸೋಸಿಯೇಷನ್, ಸ್ಟೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ, ಶೂಟಿಂಗ್ ರೇಂಜ್, ಬೆಂಗಳೂರಿನಲ್ಲಿ ೨೦೨೩ರ ಜೂನ್ ೩೦ ರಿಂದ ಜುಲೈ ೮ ರವರೆಗೆ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಕ್ಲಬ್‌ನಲ್ಲಿ ನಡೆಯುತ್ತಿರುವ ಶೂಟಿಂಗ್ ಸ್ಪರ್ಧೆಯಲ್ಲಿ ಚಾಮರಾಜನಗರದ ಯುವ ಕ್ರೀಡಾಪಟು ಇಮ್ರಾನ್ ಅಹ್ಮದ್ ಕಂಚು ಮತ್ತು ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.

ಕರ್ನಾಟಕ ರೈಫಲ್ ಅಸೋಸಿಯೇಷನ್ ಉಪಾಧ್ಯಕ್ಷ ಮುತ್ತುರಾಯರೆಡ್ಡಿ ರವರು ಇಮ್ರಾನ್ ಅಹ್ಮದ್ ರವರಿಗೆ ಕಂಚು ಮತ್ತು ಬೆಳ್ಳಿ ಪದಕವನ್ನು ನೀಡಿ ಗೌರವಿಸಿದರು.

ಇಮ್ರಾನ್ ಅಹ್ಮದ್ ಮಾತನಾಡಿ ಚಾಮರಾಜನಗರ ಗಡಿಜಿಲ್ಲೆನಾನು ತರಬೇತಿಯನ್ನು ಪಡೆಯಲು ಪ್ರತಿವಾರ ಬೆಂಗಳೂರಿಗೆ ಹೋಗುತ್ತೇನೆ. ನನ್ನ ಮುಂದಿನ ಗುರಿ ಒಲಂಪಿಕ್ ನಲ್ಲಿ ಭಾಗವಹಿಸಿ ನಮ್ಮ ದೇಶಕ್ಕೆ ಕೀರ್ತಿತರುವ ತರಬೇತಿಯನ್ನು ಪಡೆಯಲು ಶ್ರಮಿಸುತ್ತೇನೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ನಡೆಸಿರುವ ಹಲವುಶೂಟಿಂಗ್ ಸ್ಪರ್ಧೆಯಲ್ಲಿ ೨೦೧೭ರಲ್ಲಿ ಚಿನ್ನದ ಪದಕ, ೨೦೧೭, ೧೮,೧೯ ರಲ್ಲಿ ೪ ಬೆಳ್ಳಿ ಪದಕ ೨೦೧೭ ಮತ್ತು ೨೨ರಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ,

 

 

By BPN

Leave a Reply

Your email address will not be published. Required fields are marked *