ಜಿಲ್ಲೆಯಲ್ಲಿ ಉತ್ತಮವಾದ ಗುರುಭವನವನ್ನು ನಿರ್ಮಿಸಲಾಗುವುದು-ಸಿ.ಪುಟ್ಟರಂಗಶೆಟ್ಟಿ
ಚಾಮರಾಜನಗರ ಜುಲೈ-೨-ಶೈಕ್ಷಣಿಕ ಅಭಿವೃದ್ದಿಗೆ ಶ್ರಮಿಸಲಾಗುವುದು ಸರ್ಕಾರಿ ಶಾಲೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ನಡೆಸುತ್ತೇವೆ ಎಂದು ಶಾಸಕ ಸಿ,ಪುಟ್ಟರಂಗಶೆಟ್ಟಿ ತಿಳಿಸಿದರು.
ನಗರದ ಭುವನೇಶ್ವರಿ ವೃತ್ತದಲ್ಲಿ ಇರುವ ಶಿಕ್ಷಕರ ಭವನದಲ್ಲಿ ಶಾಸಕರಿಗೆ ಶಿಕ್ಷರ ಸಂಘದ ವತಿಯಿಂದ ಗೌರವ ಹಾಗೂ ಮನವಿಃ ಸ್ವೀಕರಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಶಿಕ್ಷಕರಿಗೆ, ಶೈಕ್ಷಣಿಕ ಕಾರ್ಯಗಾರ, ಸಭೆ ಸಮಾರಂಭ ಗಳಿಗೆ ಅನುಕೂಲವಾಗುವಂತೆ ಜಿಲ್ಲಾ ಗುರುಭವನ ನಿರ್ಮಾಣ ಮಾಡಿಕೊಡಲಾಗುವುದು, ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಜೊತೆಯಲ್ಲಿ ಸ್ಥಳ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.
ಭುವನೇಶ್ವರಿ ವೃತ್ತದಲ್ಲಿ ಇರುವ ಹಳೆ ತಾಲ್ಲೂಕು ಶಿಕ್ಷಕಭವನದಲ್ಲಿ ಖಾಲಿ ಇರುವ ಆವರಣದಲ್ಲಿ ಸಭಾ ಕೊಠಡಿ ನಿರ್ಮಾಣ ಮಾಡಿಸಿಕೊಡಲಾಗುವುದು. ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯು ಶಿಥಲವಾಗಿದ್ದು ನೂತನ ಕಟ್ಟಡಕ್ಕೆ ಸರ್ಕಾರ ದಿಂದ ಅನುಮೋದನೆ ಪಡೆದು ಶಿಘ್ರವಾಗಿ ನಿರ್ಮಿಸಿಕೊಡುವುದಾಗಿ ಬರವಸೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರನ್ನು ಶಿಕ್ಷಕರ ಸಂಘದ ತಾಲ್ಲೂಕು ಘಟಕದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಶಿಕ್ಷರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ತಾಲ್ಲೂಕು ಅಧ್ಯಕ್ಷ ಲಾಲಿಂಗಸ್ವಾಮಿ. ಪ್ರಧಾನ ಕಾರ್ಯದರ್ಶಿ ಭರತ್‌ಭೂಷನ್ ಪದಾಧಿಕಾರಿಗಳಾದ ಎಂ.ಡಿ.ಮಹದೇವಯ್ಯ, ಸಿ.ಕೆ, ರಾಮಸ್ವಾಮಿ, ಬಿ.ಕೃಷ್ಣಮೂರ್ತಿ, ಕೆ.ರಾಚಯ್ಯ, ಸವಿತರಾಣಿ, ಸುಧಾ, ಶಶಿಕಲಾ, ಸಿ.ಮಹದೇವಸ್ವಾಮಿ, ಎಸ್.ಜಿ.ರಾಜು, ಮುರುಗೇಶ್‌ಕುಮಾರ್, ಶಾಂತರಾಜು, ಮಹೇಶ್, ಸಿ ಮಲ್ಲಿಕಾರ್ಜುನ್, ಸಿದ್ದಲಿಂಗಮೂರ್ತಿ, ರಾಜು.ಎಸ್.ಬಿ, ಕೆಂಪರಾಜು, ಜಿ.ರಾಜು ಇನ್ನು ಮುಂತಾದವರು ಇದ್ದರು.