ಚೆಕ್ ಬೌನ್ಸ್ ಆರೋಪಿಗೆ ಶಿಕ್ಷೆ
ಮೂಡಲಗಿ: ಇಲ್ಲಿಯ ದಿವಾಣಿ ಮತ್ತು ಜೆಎಂಎಫ್‌ಸಿ
ನ್ಯಾಯಾಲಯವು 2021ರ ಚೆಕ್ ಬೌನ್ಸ್ ಪ್ರಕರಣದಲ್ಲಿ ರಾಯಬಾಗ ತಾಲೂಕಿನ ಮುಗಳಖೋಡದ ಕಲ್ಲಪ್ಪ ಲಕ್ಷ್ಮಣ ಗೌಲೆತ್ತಿನವರ ಎಂಬುವರಿಗೆ ಶಿಕ್ಷೆ ವಿಧಿಸಿದೆ. ದೂರುದಾರರಾದ ಮೂಡಲಗಿಯ ಶಿವಬಸು ಬಾಳಪ್ಪ ಹಂದಿಗುಂದ ಅವರು ನೀಡಿದ್ದ ರೂ. 6 ಲಕ್ಷ ಸಾಲವನ್ನು ಮರುಪಾವತಿಸಲು ಆರೋಪಿಯು ಚೆಕ್ ನೀಡಿದ್ದರು. ಚೆಕ್ ಬೌನ್ಸ್ ಆಗಿದ್ದರಿಂದ ದೂರುದಾರರು ಫೆ 2, 2021ರಂದು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಎರಡೂವರೆ ವರ್ಷಗಳ ವಿಚಾರಣೆಯ ಆ. 4ರಂದು ಆರೋಪಿಗೆ ಚೆಕ್‌ನ ಮೊತ್ತ ರೂ. 6 ಲಕ್ಷ ಮತ್ತು ರೂ. 10 ಸಾವಿರ ಪಾವತಿಸುವಂತೆ ಹಾಗೂ ಒಂದು ವೇಳೆ ಪಾವತಿಸದಿದ್ದಲ್ಲಿ ಒಂದು ವರ್ಷ ಕಾಲ ಸಾದಾ ಕಾರಾಗೃಹ ವಾಸ ಅನುಭವಿಸುವಂತೆ ಮೂಡಲಗಿ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶೆ ಜ್ಯೋತಿ ಪಾಟೀಲ ಆದೇಶ ಮಾಡಿದ್ದಾರೆ. ದೂರುದಾರರ ಪರ ವಕೀಲ ಐ.ಎಂ. ಹಿರೇಮಠ ವಕಾಲತ್ತು ವಹಿಸಿದ್ದರು.