ಚಾಮರಾಜನಗರ. ಏಪ್ರೀಲ್-.೧೯:- ವೈದ್ಯಕೀಯ ಕ್ಷೇತ್ರ ಬಹಳ ದೊಡ್ಡದು, ಇಲ್ಲಿ ವೃತ್ತಿ ಮಾಡುತ್ತಿರುವ ವೈದ್ಯರಿಗೆ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳುವ ಕಾರ್ಯಗಾರಗಳನ್ನು ರೂಪಿಸುವುದರಿಂದ ಉತ್ತಮ ವೈದ್ಯರಾಗಲು ಸಾಧ್ಯವಾಗುತ್ತದೆ. ಎಂದು ಸಿಮ್ಸ್ ಆಸ್ಪತ್ರೆಯ ನಿರ್ದೇಶಕ ಹಾಗೂ ಡೀನ್ ಡಾ. ಸಂಜೀವ್ ತಿಳಿಸಿದರು.
ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಸಿಮ್ಸ್ ಟೀರ‍್ಸ್ ಅಸೋಸಿಯೇಶನ್ ವತಿಯಿಂದ ಮೆಡಿಕಲ್ ಕಾಲೇಜಿನ ಯಡಪುರದ ಸಿಮ್ಸ್ ಆಸ್ಪತ್ರೆಯ ಸಭಾಂಗಣದಲ್ಲಿ ಮಂಗಳವಾರ ನಡೆದ ಐಎಂಎ, ಚಾಮರಾಜನಗರ; ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಅಪೋಲೊ ಆಸ್ಪತ್ರೆ, ಮೈಸೂರು ಇವರ ಸಹಯೋಗದೊಂದಿಗೆ ಸಿ.ಎಂ.ಇ ಇನ್ ಆರ್ಗಾನ್‌ಟ್ರಾನ್ಸ್ಪ್ಲಾಂಟ್ ಕುರಿತು ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚಾಮರಾಜನಗರ ಸಿಮ್ಸ್ ಆಸ್ಪತ್ರೆಯು ಹೊಸ ಹೊಸ ಅವಿಷ್ಕಾರಗಳನ್ನು ವೈದ್ಯರಿಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಕಾರ್ಯಗಾರಗಳನ್ನು ನಡೆಸುತ್ತಿದೆ. ಮನುಷ್ಯನ ಶರೀರದ ಅಂಗಾAಗಗಳನ್ನು ಕಸಿ ಮಾಡುವುದರ ಕುರಿತು ಈಬಾರಿ ಕಾರ್ಯಗಳನ್ನು ನಡೆಸಲಾಗುತ್ತಿದೆ. ಇದರ ಅವಶ್ಯಕ ವಿರುವ ರೋಗಿಗಳು ಜಿಲ್ಲೆಯ ಸಿಮ್ಸ್ ಆಸ್ಪತ್ರೆಯಲ್ಲಿ ಪ್ರಯೋಜನ ಪಡೆಯ ಬಹುದು ಎಂದು ಹೇಳಿದರು.
ಈ ಕಾರ್ಯಗಾರಕ್ಕೆ ಹಲವಾರು ಜಿಲ್ಲೆಗಳಿಂದ ವೈದ್ಯರು ಬಂದು ಉಪನ್ಯಾಸ ನೀಡಿದ್ದಾರೆ. ೧೦೦ ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿ ವಿಷಯಗಳನ್ನು ತಿಳಿದುಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.
ಸಿಮ್ಸ್ ಟೀರ‍್ಸ್ ಅಸೋಸಿಯೇಶನ್ ಅಧ್ಯಕ್ಷರಾದ ಡಾ||ಮಾರುತಿ ಸಿ.ವಿ ಅವರು ಮಾತನಾಡಿ ವೈದ್ಯ ವೃತ್ತಿಯಲ್ಲಿ ಹೆಚ್ಚನ ಶಿಕ್ಷಣ ಕಲಿತರೆ ಮಾತ್ರ ಮುಂದುವರೆದ ವಿಜ್ಞಾನದ ಬಗ್ಗೆ ತಿಳಿದುಕೊಳ್ಳಬಹುದು. ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಮುಂದೆ ಇದ್ದಾರೆ. ವೈದ್ಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಮುಂದುವರೆದ ಶಿಕ್ಷಣದ ಕುರಿತು ಕಾರ್ಯಗಳನ್ನು ನಡೆಸಲಾಗುತ್ತಿದೆ. ಇದರಿಂದ ಕೆಲವು ರೋಗಿಗಳು ಪ್ರಯೋಜನ ಪಡೆದಿದ್ದಾರೆ ಎಂದರು.
ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ಎಲ್ಲಾ ವಿಭಾಗಗಳಲ್ಲಿ ಜಿಲ್ಲೆಯ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವುದರಲ್ಲಿ ಮೇಲುಗೈ ಸಾಧಿಸಿದ್ದು, ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಆರ್ಗಾನ್ ಟ್ರಾನ್ಸ್ಪ್ಲಾಂಟ್ ಅನ್ನುಯಾವ ರೋಗಿಗಳಿಗೆ ಮಾಡಲಾಗುತ್ತದೆ, ಯಾರಿಂದ ಆರ್ಗಾನ್ ಡೊನೇಶನ್ ಪಡೆಯಬೇಕಾಗುತ್ತದೆ, ಆರ್ಗಾನ್ ಟ್ರಾನ್ಸ್ಪ್ಲಾಂಟ್ ಮಾಡುವಾಗ ಯಾವತರಹದ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕಾಗುತ್ತದೆ ಹಾಗೂ ಆರ್ಗಾನ್ ಟ್ರಾನ್ಸ್ಪ್ಲಾಂಟ್ ಮಾಡುವ ವಿಧಾನ ಕುರಿತು ಹಾಗೂ ಸರ್ಕಾರದ ನಿಯಮಾವಳಿಗಳ ಬಗ್ಗೆ ಎಲ್ಲಾ ವೈದ್ಯರಿಗೂ ತರಬೇತಿಯನ್ನು ನೀಡಲಾಗುತ್ತದೆ. ಆರ್ಗಾನ್ ಟ್ರಾನ್ಸ್ಪ್ಲಾಂಟ್ ನಂತಹ ಆಧುನಿಕ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಒದಗಿಸಲು ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ವಿಶೇಷ ಆಸಕ್ತಿಯನ್ನು ಹೊಂದಿದ್ದು, ಇದರಿಂದ ಚಾಮರಾಜನಗರ ಜನತೆಗೆ ಇದರ ಸೇವೆಯನ್ನು ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿಯೇ ದೊರೆಯುವಂತೆ ಮಾಡಲು ಈ ಕಾರ್ಯಕ್ರಮವು ಉಪಯೋಗವಾಗಲಿದೆ ಎಂದರು.
ಸಿಎAಇ ಕಾರ್ಯಕ್ರಮದಲ್ಲಿ ಅಪೋಲೋ ಆಸ್ಪತ್ರೆಯ ನುರಿತ ತಜ್ಞರುಗಳಾದ ಡಾ|| ಶ್ರೀನಿವಾಸ ನಲ್ಲೂರ್, ಚೀಫ್ ಕನ್ಸಲ್ಟೆಂಟ್ ಹಾಗೂ ಮುಖ್ಯಸ್ಥರು, ನೆಫ್ರಾಲಜಿ ವಿಭಾಗರವರು ಸಿಕೆಡಿ ಹಾಗೂ ಕಿಡ್ನಿ ಟ್ರಾನ್ಸ್ಪ್ಲಾಂಟ್ ವಿಷಯದ ಬಗ್ಗೆ ಡಾ|| ಯಶ್ವಂತ್‌ಕುಮಾರ್ ವಿ, ಕನ್ಸಲ್ಟೆಂಟ್ ಹೆಪ್ಯಾಟೋಬಿಲಿಯರಿ ಹಾಗೂ ಲಿವ್ ಟ್ರಾನ್ಸ್ಪ್ಲಾಂಟ್ ಸರ್ಜನ್‌ರವರುಆರ್ಗಾನ್‌ರಿಟ್ರೆöÊವಲ್ ಹಾಗೂ ಲಿವರ್ ಟ್ರಾನ್ಸ್ಪ್ಲಾಂಟ್ ವಿಷಯದ ಬಗ್ಗೆ ಡಾ||ಹರೀಶ್ ಎಂ.ನಾಯಕ್, ಕನ್ಸಲ್ಟೆಂಟ್ ಇಂಟೆನ್ಸಿವಿಸ್ಟ್ ಕ್ರಿಟಿಕಲ್‌ಕೇರ್ ಆಸ್ಪೆಕ್ಟ್÷್ಸಆಫ್ ಆರ್ಗಾನ್‌ಡೋನರ್ ಮ್ಯಾನೇಜ್‌ಮೆಂಟ್ ವಿಷಯದ ಬಗ್ಗೆ ಮತ್ತು ಸುಧಾ, ಅಸಿಸ್ಟೆಂಟ್ ಮ್ಯಾನೇಜg
ಡಯಾಲಿಸಿಸ್ ಯೂನಿಟ್ ರವರು ರೂಲ್ಸ್ ಮತ್ತು ರೆಗುಲೇಶನ್ ಆಫ್ ಕ್ಯಾಡವರ್ ಡೊನೇಶನ್ಸ್, ಸೋಟ್ಟೋ ವಿಷಯದ ಬಗ್ಗೆ ತಿಳಿಸಿಕೊಟ್ಟರು.
ಜಿಲ್ಲಾ ಶಸ್ತçಚಿಕಿತ್ಸಕ ಡಾ||ಕೃಷ್ಣಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸೋಟ್ಟೋ (ಸ್ಟೇಟ್‌ಆರ್ಗಾನ್&ಟಿಶ್ಯೂಟ್ರಾನ್ಸ್ಪ್ಲಾಂಟ್‌ಆರ್ಗನೇಜೇಶನ್) ಅಡಿಯಲ್ಲಿ ಮೈಸೂರನ್ನು ಪ್ರತ್ಯೇಕ ವಿಭಾಗವಾಗಿ ಗುರುತಿಸಿ ಮೈಸೂರು, ಹಾಸನ, ಮಂಡ್ಯ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಆರ್ಗಾನ್ ಟ್ರಾನ್ಸ್ಪ್ಲಾಂಟ್ ಅನ್ನು ಪ್ರೋತ್ಸಾಹಿಸಲು ಮತ್ತು ಸ್ಥಳೀಯವಾಗಿ ಟ್ರಾನ್ಸ್ಪ್ಲಾಂಟ್ ಸೆಂಟರ್‌ಗಳನ್ನು ಆರಂಭಿಸಿ ಈಗಾಗಲೇ ಆರ್ಗಾನ್ ಟ್ರಾನ್ಸ್ಪ್ಲಾಂಟ್ ಗಾಗಿ ನೋಂದಣಿಯಾಗಿರುವ ರೋಗಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚನೆ ಯನುಸಾರ ಸೇವೆಯನ್ನು ಒದಗಿಸಬಹುದಾಗಿರುತ್ತದೆ. ಈ ನಿಟ್ಟಿನಲ್ಲಿ ಎಲ್ಲಾರೀತಿಯ ಆರ್ಗಾನ್ ಟ್ರಾನ್ಸ್ಪ್ಲಾಂಟ್‌ಗಾಗಿ ಅಪೋಲೊ ಬಿಜಿಎಸ್ ಆಸ್ಪತ್ರೆ, ಮೈಸೂರು ಅನ್ನು ಸಿಡಿಎ ಕ್ರಾಸ್-ಮ್ಯಾಚಿಂಗ್ ಸೆಂಟರ್ ಆಗಿ ಗುರುತಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಆಡಳಿತಾಧಿಕಾರಿಗಳಾದ ಶ್ರೀ ಮಂಜುನಾಥ್‌ಆರ್, ಸಿಮ್ಸ್ ಟೀರ‍್ಸ್ ಅಸೋಸಿಯೇಶನ್ ಅಧ್ಯಕ್ಷರು ಹಾಗೂ ಕೀಲು ಮೂಳೆ ವಿಭಾಗದ ಮುಖ್ಯಸ್ಥರಾದ ಡಾ|| ಮಾರುತಿ ಸಿ.ವಿ, ಪ್ರಾಂಶುಪಾಲರಾದ ಡಾ|| ಗಿರೀಶ್ ವಿ ಪಾಟೀಲ್, ಹೆಚ್‌ಎಸ್, ನಿವಾಸಿ ವೈದ್ಯಾಧಿಕಾರಿಗಳಾದ ಡಾ|| ಮಹೇಶ್ ಎಂ, ಸಿಮ್ಸ್ ಟೀರ‍್ಸ್ ಅಸೋಸಿಯೇಶನ್ ಉಪಾಧ್ಕಕ್ಷ Àಡಾ|| ಅಜಯ್ ಕೆ ಟಿ, ಸಿಮ್ಸ್ ಟೀರ‍್ಸ್ ಅಸೋಸಿಯೇಶನ್‌ನ ಖಜಾಂಚಿ ಡಾ|| ನವೀನ್‌ಎನ್, ಸಿಮ್ಸ್ನ ಎಲ್ಲಾ ವಿಭಾಗಗಳ ಮುಖ್ಯಸ್ಥರುಗಳು, ಸಿಮ್ಸ್ ಟೀರ‍್ಸ್ ಅಸೋಸಿಯೇಶನ್ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಮತ್ತು ಅಪೋಲೊ ಆಸ್ಪತ್ರೆಯ ತಜ್ಞ ವೈದ್ಯರುಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಿಮ್ಸ್ನ ಎಲ್ಲಾ ವೈದ್ಯರುಗಳು, ವೈದ್ಯಾಧಿಕಾರಿಗಳು, ಜಿಲ್ಲೆಯ ವೈದ್ಯಾಧಿಕಾರಿಗಳು, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ವೈದ್ಯರುಗಳು ಮತ್ತುಸಂಸ್ಥೆಯ ಸ್ನಾತಕೋತ್ತರ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.
ಈ ಸಂದರ್ಭದಲ್ಲಿ ಸ್ವೀಫ್ ಸಮಿತಿ ಹಾಗೂ ಸಿಮ್ಸ್ ವತಿಯಿಂದ ಡಾ. ವೇದಶ್ರೀ ರವರು ಮತದಾನದ ಬಗ್ಗೆ ಅರಿವು ಮೂಡಿಸಿದರು.
BPN ಸುದ್ಧಿ :ಶ್ರೀನಿವಾಸ ಬಿಳಿಗಿರಿ