ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟ
ಮಕ್ಕಳ ಭವಿಷ್ಯದ ಪ್ರಥಮ ಘಟ್ಟ ಎಸ್‌ಎಸ್‌ಎಲ್‌ಸಿ : ಉತ್ತಮ ಸಾಧನೆ ಮಾಡಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದನೆ- ನಾಡೋಜ ಡಾ. ಮಹೇಶ ಜೋಶಿ
ಬೆಂಗಳೂರು : ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ೨೦೨೨-೨೩ನೇ ಸಾಲಿನ ಎಸ್ಎಸ್ಎಲ್ ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಇಂದು ಪ್ರಕಟಿಸಿದ್ದು, ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಪ್ರಸ್ತುತ ಶೈಕ್ಷಣಿಕ ರ್ಷರದಲ್ಲಿ ಚಿತ್ರದರ್ಗನ ಜಿಲ್ಲೆಯ ವಿದ್ಯಾರ್ಥಿಗಳು ಶೇಕಡಾ ೯೬.೦೮ರಷ್ಟು ಫಲಿತಾಂಶಗಳಿಸುವುದರೊಂದಿಗೆ ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಮಕ್ಕಳ ಭವಿಷ್ಯದ ಪ್ರಥಮ ಘಟ್ಟವಾಗಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದಿಸುತ್ತದೆ ಎಂದು *ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ* ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಬಾರಿಯ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಒಟ್ಟು ಶೇಕಡಾ ೮೩.೮೯ರಷ್ಟು ವಿದ್ಯಾರ್ಥಿಗಳು ಉತ್ತರ್ಣಯರಾಗಿದ್ದಾರೆ. ಪರೀಕ್ಷೆ ಬರೆದ ಒಟ್ಟು ೮,೩೫,೧೦೨ ವಿದ್ಯಾರ್ಥಿಗಳ ಪೈಕಿ ೭,೦೦,೬೧೯ ವಿದ್ಯಾರ್ಥಿಗಳು ಪಾಸಾಗಿದ್ದು, ನಾಲ್ವರು ವಿದ್ಯಾರ್ಥಿಗಳು ೬೨೫ ಕ್ಕೆ ೬೨೫ ಅಂಕ ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ್ದಾರೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಒಟ್ಟು ೩,೪೧,೧೦೮ ಬಾಲಕರು ಹಾಗೂ ೩,೫೯,೫೧೧ ಬಾಲಕಿಯರು ಉತ್ತರ್ಣ್ರಾಗಿದ್ದಾರೆ.
ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶದಲ್ಲಿ ಮಂಡ್ಯ ಜಿಲ್ಲೆ ಎರಡನೇ ಸ್ಥಾನ ಪಡೆದಿದ್ದು, ಹಾಸನ ಜಿಲ್ಲೆ ಮೂರನೇ ಸ್ಥಾನಗಳಿಸಿದೆ. ಒಟ್ಟಾರೆಯಾಗಿ ಕನ್ನಡ ನಾಡಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು ಅವರು ಭವಿಷ್ಯದಲ್ಲಿ ಕನ್ನಡ ನಾಡು ನುಡಿಗಾಗಿ ಮಿಡಿಯುವ ಯುವ ಪೀಳಿಗೆಯಾಗಿ ಸೃಷ್ಟಿಯಾಗಲಿದ್ದಾರೆ ಇವರ ಕೈಗಳಲ್ಲಿ ಕನ್ನಡ ನಾಡಿನ ಭವಿಷ್ಯ ಸುರಕ್ಷಿತವಾಗಿರಲಿದೆ ಎಂದು *ನಾಡೋಜ ಡಾ. ಮಹೇಶ ಜೋಶಿ* ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾಲ್ವರು ವಿದ್ಯರ್ಥಿ್ ೬೨೫ ಕ್ಕೆ ೬೨೫ ಅಂಕ ಗಳಿಸಿ ರಾಜ್ಯದಲ್ಲಿ ಪ್ರಥಮ ಸ್ಥಾನವನ್ನುಗಳಿಸಿದ್ದಾರೆ. ಬೆಂಗಳೂರಿನ ಹೊಸೂರು ರಸ್ತೆಯ ನ್ಯೂ ಮೆಕಾಲೆ ಶಾಲೆಯ ಭೂಮಿಕಾ ಪೈ, ಚಿಕ್ಕಬಳ್ಳಾಪುರ ಜಿಲ್ಲೆಯ ಅಗಲರ್ಕಿಮಯ ಬಿಜಿಎಸ್ ಶಾಲೆಯ ಯಶಸ್ ಗೌಡ, ಬೆಳಗಾವಿ ಜಿಲ್ಲೆಯ ಸವದತ್ತಿಯ ಶ್ರೀಕುಮಾರೇಶ್ವರ ಶಾಲೆಯ ಅನುಪಮಾ ಶ್ರೀಶೈಲ್ ಹಿರೆಹೋಳಿ ಹಾಗೂ ವಿಜಯಪುರದ ಭೀಮನಗೌಡಾ ಪಾಟೀಲ್ ರಾಜ್ಯಕ್ಕೆ ಪ್ರಥಮ ಬಂದಿದ್ದು ಅವರ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ಹೆಮ್ಮೆಯನ್ನು ವ್ಯಕ್ತಪಡಿಸಿದೆ ಎಂದು ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಹೇಳಿದ್ದಾರೆ.