---Advertisement---

Advertisement

ಬೆಳಗಾವಿ : ಮನೆಗಳ್ಳನೋರ್ವನನ್ನು ಬಂಧಿಸಿರುವ ನಗರದ ಮಾರ್ಕೆಟ ಠಾಣೆಯ ಪೊಲೀಸರು ಬಂಧಿತನಿಂದ 10 ಲಕ್ಷ ಮೌಲ್ಯ ಚಿನ್ನಾಭರಣ ವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

 

ದಿ. 20 ರಂದು ಮಾರ್ಕೇಟ ಪೊಲೀಸ್ ಠಾಣೆ ವ್ಯಾಪ್ತಿಯ ಸಮರ್ಥ ನಗರದ ಮನೆಯಲ್ಲಿ ಒಂದರಲ್ಲಿ ಕಳ್ಳರು ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಮಾರ್ಕೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮಾರ್ಕೆಟ್ ಉಪ ವಿಭಾಗದ ಎಸಿಪಿ ಎನ.ವಿ.ಭರಮನಿ ಇವರ ನೇತೃತ್ವದಲ್ಲಿ ಪಿಐ ಮಹಾಂತೇಶ ಧಾಮನ್ನವರ ಹಾಗೂ ಅವರ ತಂಡ ಮಾಹಿತಿ ಕಲೆ ಹಾಕಿ ಆರೋಪಿತನಾದ ಜಿಲ್ಲೆಯ ನಿಪ್ಪಾಣಿಯ ಯಾಸೀನ ಹಾಸಿಮ ಶೇಖ (23) ಈತನನ್ನು ವಶಕ್ಕೆ ಪಡೆದು, ಬಂಧಿತನಿಂದ ಸುಮಾರು 10 ಲಕ್ಷ ಮೌಲ್ಯದ 231 ಗ್ರಾಂ ಬಂಗಾರ ಮತ್ತು 140 ಗ್ರಾಂ ಬೆಳ್ಳಿಯ ಆಭರಣಗಳನ್ನು ಜಪ್ತಪಡಿಸಿಕೊಂಡು ಆತನ ವಿರುದ್ಧ ಕಾನೂನು ಕ್ರಮ ಜರುಗಿಸಿ, ತನಿಖೆ ಮುಂದುವರೆಸಲಾಗಿದೆ.

ಈ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಶ್ರಮಿಸಿದ ಮಾರ್ಕೆಟ್ ಠಾಣೆಯ ಪಿಐ

ಮಹಾಂತೇಶ ಧಾಮಣ್ಣವರ, ಪಿಎಸ್ ಐ ಗಳಾದ ವಿಠಲ ಹಾವನ್ನವರ,

ಮಹಾಂತೇಶ ಮಠಪತಿ ಹಾಗೂ ಸಿಬ್ಬಂದಿಗಳಾದ ಶರತಕುಮಾರ

ಖಾನಾಪೂರೆ, ವಿಶ್ವನಾಥ ಮಾಳಗಿ, ಶಂಕರ ಕುಗಟೊಳ್ಳಿ, ಖಾದರಸಾಬ

ಖಾನಮ್ಮನವರ, ಲಕ್ಷ್ಮಣ ಕಡೋಲ್ಕರ, ಆಶೀರ್ ಜಮಾದಾರ, ಶಿವಾನಂದ

ಚಂಡಕಿ, ವಿನೋದ ಜಗದಾಳೆ, ಶಿವಪ್ಪಾ ತೇಲಿ, ಸಂಜು ಪಾತ್ರೋಟ,

ನವೀನಕುಮಾರ ಇವರ ಕಾರ್ಯವನ್ನು ಪೊಲೀಸ್ ಆಯುಕ್ತ ಸಿದ್ದರಾಮಪ್ಪ,

ಉಪ-ಪೊಲೀಸ್ ಆಯುಕ್ತರು ಶ್ಲಾಘಿಸಿರುತ್ತಾರೆ

By BPN

Leave a Reply

Your email address will not be published. Required fields are marked *