ಮೂಡಲಗಿ: ಸಾಮಾನ್ಯವಾಗಿ ಮಳೆ ಬಂದ್ರೆ ನದಿ ತೀರದ ಗ್ರಾಮಸ್ಥರಿಗೆ ಮೋಸಳೆಗಳು ಬಂದು ಆತಂಕ ಸೃಷ್ಟಿಸೋದು ಕಾಮನ್, ಆದ್ರೆ ಸರಿಯಾದ ಮಳೆ ಇಲ್ಲದೇ ಬೆಳೆಗಳು ಬಾರದೇ ರೈತಾಪಿ ವರ್ಗದವರು ಸಂಕಷ್ಟು ಎದುರಸುತ್ತಿದ್ದಾರೆ. ಆದರೆ ಘಟಪ್ರಭಾ ನದಿ ದಡದಲ್ಲಿ ಸತತವಾಗಿ 15 ದಿನಗಳಿಂದ ಮೋಸಳೆ ಪ್ರತ್ಯಕ್ಷವಾದ ಹಿನ್ನಲೆ ತಾಲೂಕಿನ ಅರಳಿಮಟ್ಟಿ ಗ್ರಾಮಸ್ಥರು ಆತಂಕದ ಛಾಯೆ ಎದುರಾಗಿದೆ.
ಅರಳಿಮಟ್ಟಿ ಗ್ರಾಮದ ಮಹಿಳಿಯರು ಬಟ್ಟೆ ತೋಳೆಯುವುದಕ್ಕೆ ಹಾಗೂ ಗ್ರಾಮಸ್ಥರು ಜಾನುವಾರುಗಳನ್ನು ತೋಳೆಯುವುದಕ್ಕೆ ನದಿ ದಡಕ್ಕೆ ಹೋಗುವುದರಿಂದ ಆ ಸ್ಥಳದಲ್ಲೇ ಮೊಸಳೆ ಪ್ರತ್ಯಕ್ಷವಾಗಿದರಿಂದ ಜನರಲ್ಲಿ ಆತಂಕ ಮೂಡಿದೆ. ಸದ್ಯ ಸ್ಥಳದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮೊಸಳೆ ಸೆರೆಹಿಡಿಯಲು ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಾಲೂಕಾ ಅರಣ್ಯಾಧಿಕಾರಿ ಸಂಜು ಸವಸುದ್ದಿ ತಿಳಿಸಿದ್ದಾರೆ.