ಬೆಳಗಾವಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಭೌತಶಾಸ್ತ್ರ ಉಪನ್ಯಾಸಕರ ಪುನಶ್ಚೇತನ ಕಾರ್ಯಗಾರಕ್ಕೆ ಚಾಲನೆ ನೀಡಿದ ಡಿಡಿಪಿಯುಇ ಎಂ ಎಂ ಕಾಂಬಳೆ
ಬೆಳಗಾವಿ : ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಭೌತಶಾಸ್ತ್ರ ಉಪನ್ಯಾಸಕರ ವೇದಿಕೆ ಬೆಳಗಾವಿ ಹಾಗೂ ಎಕ್ಸ್ಪರ್ಟ್ ಸೈನ್ಸ್ ಮತ್ತು ಕಾಮರ್ಸ್ ಕಾಲೇಜ್ ಬೆಳಗಾವಿ ಇವರ ಸಯುಕ್ತ ಆಶ್ರಯದಲ್ಲಿ ಬೆಳಗಾವಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಭೌತಶಾಸ್ತ್ರ ಉಪನ್ಯಾಸಕರ ಕಾರ್ಯಾಗಾರಕ್ಕೆ ಮಾನ್ಯ ಉಪ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ಬೆಳಗಾವಿ ಶ್ರೀ ಎಂ ಎಂ ಕಾಂಬಳೆ ಸರ್ ರವರು ಉದ್ಘಾಟಿಸಿದರು ಹಾಗೂ ಭೌತಶಾಸ್ತ್ರದ ಉಪನ್ಯಾಸಕರ ಕುರಿತು ಮತ್ತು ಫಲಿತಾಂಶ ಸುಧಾರಣೆ ಬಗ್ಗೆ ಮಾಹಿತಿ ನೀಡಿದರು . ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ನಾಗೇಶ್ ದಂಡಾಪುರೆ ಅಧ್ಯಕ್ಷ ಸ್ಥಾನ ವಹಿಸಿದ್ದರು. ಹಾಗೂ ಭೌತಶಾಸ್ತ್ರದ ಉಪನ್ಯಾಸಕರ ಕುರಿತು ಹಾಗೂ ಭೌತಶಾಸ್ತ್ರದ ವಿಷಯ ಕುರಿತು ಮಾತನಾಡಿದರು.
ಭೌತಶಾಸ್ತ್ರದ ವಿಭಾಗದ ಮುಖ್ಯಸ್ಥರು ಡಾ|| ವಿಜಯ್ ಕುಲಕರ್ಣಿ ರವರು ಮುಖ್ಯ ಅತಿಥಿ ಸ್ಥಾನ ಅಲಂಕರಿಸಿದ್ದರು ಹಾಗೂ ಅತಿಥಿಗಳಾಗಿ ಬೆಳಗಾವಿ ಜಿಲ್ಲಾ ಪದವಿಪೂರ್ವ ಕಾಲೇಜು ನೌಕರರ ಮಹಾಮಂಡಳಿಯ ಅಧ್ಯಕ್ಷರಾದ ಶ್ರೀ ಬಿ ವೈ ಹನ್ನೂರ್ ಅವರನ್ನು ಆಹ್ವಾನಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಗಳಾಗಿ ಮರಾಠ ಮಂಡಲ ಪದವಿ ಪೂರ್ವ ಕಾಲೇಜು ಬೆಳಗಾವಿ ಪ್ರಾಚಾರ್ಯರಾದ ಶ್ರೀ ಎಸ್ ಎಸ್ ಪಾಟೀಲ್, ಭೌತಶಾಸ್ತ್ರ ವಿಭಾಗ ಎಸ್ ಎಸ್ ಸಿ ಎ ಸರ್ಕಾರಿ ಪದವಿ ಪೂರ್ವ ಕಾಲೇಜು, ಕೆಕೆ ಕೊಪ್ಪ ಕಾಲೇಜಿನ ಉಪನ್ಯಾಸಕರು ಡಾ|| ಎಸ್ ಎಸ್ ಪಾಟೀಲ್ ರವರು, ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆ ಬೆಳಗಾವಿಯ ಅಧ್ಯಕ್ಷರಾದ ನಾಗೇಶ್ ದಂಡಾಪುರೆ ಅವರು ಉಪಸ್ಥಿತರಿದ್ದರು. ಆದರದ ಸ್ವಾಗತ ಕೋರಿದವರು ಶ್ರೀ ವೈ ಎಂ ಪಾಟೀಲ್ ಹಾಗೂ ಶ್ರೀ ನಾಗರಾಜ್ ಚಿಕ್ಕೋಡಿ ರವರು. ಎಕ್ಸ್ಪರ್ಟ್ ಕಾಲೇಜಿನ ಪ್ರಾಚಾರ್ಯರಾದ ತೆಹಸಿನ್ ನಾಜ್ ರವರು ಮತ್ತು ಎಕ್ಸ್ಪರ್ಟ್ ಕಾಲೇಜಿನ ಮೇಲ್ವಿಚಾರಕರಾದ ಮೈಲಾರ ಟೆನಗಿ ರವರು ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಎಕ್ಸ್ಪರ್ಟ್ ಕಾಲೇಜಿನ ಉಪನ್ಯಾಸಕಿಯಾದ ಲಕ್ಷ್ಮಿ ಹಾದಿಮನಿ ಅವರು ವಂದಿಸಿದರು.