ಸರ್ಕಾರದ ಸಚಿವಾಲಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (Department of School Education and Literacy) ಎಂದು ಮರುಪದನಾಮೀಕರಣಗೊಳಿಸಿ ಸರ್ಕಾರ ಆದೇಶಿಸಿದೆ .
ಶಿಕ್ಷಣ ಇಲಾಖೆ ಎಂಬ ಶೀರ್ಷಿಕೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ” ಎಂಬ ಶೀರ್ಷಿಕೆ ನೀಡಿ ತಿದ್ದು ಪಡಿ ಮಾಡಲಾಗಿದೆ.
ಅದರಂತೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಹಾಗೂ ಅದರ ಅಧೀನದಲ್ಲಿ ಬರುವ
ಎಲ್ಲಾ ಕ್ಷೇತ್ರ ಕಛೇರಿಗಳು ಹಾಗೂ ರಾಜ್ಯದ ಎಲ್ಲಾ ಜಿಲ್ಲಾ ಕ್ಲಸ್ಟರ್ ಶಾಲೆಗಳು ಮತ್ತು ಕಛೇರಿಗಳ ನಾಮಫಲಕಗಳನ್ನು “ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ” ಎಂಬ ನೂತನ ಪದನಾಮಕ್ಕೆ ಸರಿಹೊಂದುವಂತೆ ಬದಲಾಯಿಸಲು ಸರ್ಕಾರವು ನಿರ್ಣಯಿಸಿ ಆದೇಶಿಸಿದೆ.
ಸರ್ಕಾರದ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಹಾಗೂ ಅದರ ಅಧೀನದಲ್ಲಿ ಬರುವ ಎಲ್ಲಾ ಕ್ಷೇತ್ರ ಕಛೇರಿಗಳು ಹಾಗೂ ರಾಜ್ಯದ ಎಲ್ಲಾ
ಜಿಲ್ಲಾ, ಕ್ಲಸ್ಟರ್ ಶಾಲೆಗಳು ಮತ್ತು ಕಛೇರಿಗಳ ನಾಮಫಲಕಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಈ ಕಳಕಂಡಂತೆ ಮರು ಪದನಾಮಿಕರಣಗೊಳಿಸಿ ಆದೇಶಿಸಿದೆ .
1. ‘ಸಾರ್ವಜನಿಕ ಶಿಕ್ಷಣ ಇಲಾಖೆ’ ಎಂದು ಈವರೆಗೆ ಕರೆಯಲ್ಪಡುವ ಇಲಾಖೆಯನ್ನು, ಶಾಲಾ ಶಿಕ್ಷಣ ಇಲಾಖೆ’ ಎಂದು ವದನಾಮಿಕರಿಸಿದೆ.
2. ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ ಹುದ್ದೆಯನ್ನು, ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಎಂದು ಪದನಾಮಿಕರಿಸಿದ. ಇದೇ ರೀತಿ ಇಲಾಖೆಯ ಅಪರ ಆಯುಕ್ತಾಲಯ, ಕಲಬುರಗಿ ಮತ್ತು ಧಾರವಾಡ ಇಲಾಖೆಯ ಎಲ್ಲಾ ನಿರ್ದೇಶನಾಲಯಗಳು ಹಾಗೂ ಅವುಗಳ ಬರುವ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು / ಬ್ಲಾಕ್ ಕಛೇರಿಗಳು, ವಿಭಾಗ ಹಂತದ ಕಛೇರಿಗಳು, ಜಿಲ್ಲಾ ಹಂತದ ಉಪನಿರ್ದೇಶಕರು (ಆಡಳಿತ) ಹಾಗೂ ಡಯಟ್ ಪ್ರಾಂಶುಪಾಲರ ಕಛೇರಿ, ಬ್ಲಾಕ್ ಹಂತದ ಕ್ಷೇತ್ರ. ಬದಲಾಯಿಸಲು ತಿಳಿಸಿದೆ.