ಹಾಸನದಲ್ಲಿ ಗಾಂಧಿ ಭವನ ಉದ್ಘಾಟನೆಗೆ ಸಿದ್ದವಾಗಿದೆ. ಅಲ್ಲಿ ಗಾಂಧಿ ಹಾಗೂ ಅವರ ಸಂಗಾತಿಗಳ ಆಕೃತಿಗಳು ಎದ್ದು ನಿಂತಿವೆ. ಒಮ್ಮೆ ನೋಡಿ ಬನ್ನಿ.
ಕಳೆದ ಎರಡು ಮೂರು ದಿನಗಳಿಂದ ನೋಡಿದವರೆಲ್ಲಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಾಂಧಿಯಂತೂ ‘ಬಾಡಿ ಬಿಲ್ಡರ್’ ತರಹ ಕಾಣ್ತಾರೆ. ಅವರ ದೇಹ ಹಾಗೂ ರುಂಡಕ್ಕೂ ಸಂಬಂಧವೇ ಇಲ್ಲ. ಉಳಿದ ಶಿಲ್ಪಗಳಲ್ಲಿ ಕೆಲವರಂತೂ ಅಂಗ ಊನ ಆದವರಂತೆ ಕಾಣುತ್ತಾರೆ. ದೇಹದ ಅಂಗರಚನೆ ಮೂಲ ಪಾಠಗಳನ್ನೇ ಧಿಕ್ಕರಿಸಿ ಕೆತ್ತನೆ ಮಾಡಿದ್ದಾರೆ.
ಶಿಲ್ಪಕಲೆಗೆ ಜಗತ್ತಿನಾದ್ಯಂತ ಹೆಸರಾಗಿರುವ ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಹೊಂದಿರುವ ಈ ಜಿಲ್ಲೆಯಲ್ಲಿ ಕಲೆಗೆ ಈ ಗತಿಯೇ ಎಂದು ಹಿರಿಯ ಕಲಾವಿದರು ಟೀಕೆ ಮಾಡಿದ್ದಾರೆ.