ಕಳಚಿತು ಕನ್ನಡ ಚಿತ್ರರಂಗದ ಮತ್ತೊಂದು ಕೊಂಡಿ, ಹಿರಿಯ ನಿರ್ದೇಶಕ ಭಗವಾನ್ ಇನ್ನಿಲ್ಲ
ತೀವ್ರ ಅನಾರೋಗ್ಯಕ್ಕೀಡಾಗಿದ್ದ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್ ಕೆ ಭಗವಾನ್ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 89 ವರ್ಷದ ಭಗವಾನ್ ಕೊನೆಯುಸಿರೆಳೆದಿದ್ದಾರೆ.
ಜಯದೇವ ಆಸ್ಪತ್ರೆ ಸೇರಿದ ಬಳಿಕ ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ ಎಂದು ಡಾ. ಸಿಎನ್ ಮಂಜುನಾಥ್ ಹೇಳಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ನಮ್ಮನ್ನೆಲ್ಲ ಬಿಟ್ಟು ಭಗವಾನ್ ಇಹಲೋಕ ತ್ಯಜಿಸಿದ್ದಾರೆ
ಬೆಳಗಾವಿ ಫೋಟೋ ನ್ಯೂಸ್ ತಂಡದಿಂದ ಭಾವಪೂರ್ಣ ಶ್ರದ್ಧಾಂಜಲಿ