---Advertisement---

Advertisement

ಬೆಳಗಾವಿ(BPN REORT): ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ನೀಡಲಾಗುವ ಲಸಿಕೆಯನ್ನು ಪಡೆಯದೇ ಅಥವಾ ಅರ್ಧಕ್ಕೆ ಬಿಟ್ಟುಹೋದ 0 ದಿಂದ 2 ವರ್ಷದ ಮಕ್ಕಳ ದಡಾರ ಮತ್ತು ರುಬೇಲ್ಲಾ 1 ಮತ್ತು 2 ಡೋಸ್ ಲಸಿಕೆ, ಡಿ.ಪ.ಟಿ ವರ್ದಕ ಮತ್ತು ಓ.ಪಿ.ಇ ವರ್ದಕ ಪಡೆಯದಿರುವ ಎಲ್ಲ 2 ರಿಂದ 5 ವರ್ಷದ ಮಕ್ಕಳ ಹಾಗೂ ಒಂದೂ ಲಸಿಕೆ ಪಡೆಯದ, ಬಾಗಶಹ ಲಸಿಕೆ ಪಡೆದ ಗರ್ಭಿಣಿಯರಿಗೆ ತೀವ್ರತರ ಮಿಷನ್ ಇಂದ್ರದನುಷ 5.0 ಅಭಿಯಾನದಲ್ಲಿ ಲಸಿಕೆಯನ್ನು ನೀಡಲಾಗುವದು. ಅರ್ಹ ಫಲಾನುಭವಿಗಳು ಲಸಿಕೆಯನ್ನು ಪಡೆಯಲು ತಿಳಿಸಿದರು. ಜಿಲ್ಲೆಯ ವಿವಿಧ ಇಲಾಖೆಗಳು ತೀವ್ರತರ ಮಿಷನ್ ಇಂದ್ರದನುಷ 5.0 ಅಭಿಯಾನದಡಿ ಸಮನ್ವತೆಯಿಂದ ಕಾರ್ಯ ನಿರ್ವಹಿಸಬೇಕೆಂದು ಹಾಗೂ ಅಭಿಯಾನದ ಕುರಿತು ಸಾರ್ವಜನಿಕರಲ್ಲಿ ವ್ಯಾಪಕ ಪ್ರಚಾರವನ್ನು ಕೈಗೊಳ್ಳಬೇಕು, ಸಾಕಷ್ಟು ಪ್ರಮಾಣದಲ್ಲಿ ಲಸಿಕೆಗಳನ್ನು ದಾಸ್ತಾನು ಇಟ್ಟುಕೊಳ್ಳುಲು ಮಾನ್ಯ ಜಿಲ್ಲಾಧಿಕಾರಿಗಳು ತಿಳಿಸಿದರು.

ಬೆಳಗಾವಿ ಜಿಲ್ಲೆಯಲ್ಲಿ ಅಗಷ್ಟ 7 ರಿಂದ 12 ರವರೆಗೆ ಮೊದಲನೆ ಸುತ್ತು, ಸಪ್ಟೆಂಬರ 11 ರಿಂದ 16 ರವರೆಗೆ 2ನೇ ಸುತ್ತು. ಹಾಗೂ ಅಕ್ಟೋಬರ 9 ರಿಂದ 14 ರವರೆಗೆ 3ನೇ ಸುತ್ತು ಈ ಮೂರು ಸುತ್ತುಗಳಲ್ಲಿ ತೀವ್ರ ಇಂದ್ರದನುಷ್ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಶ ಕೋಣಿ ಅವರು ತಿಳಿಸಿದರು.ಜಿಲ್ಲೆಯ ಲಸಿಕಾ ಕಾರ್ಯಪಡೆಯ ಸಭೆಗೆ ಬೆಳಗಾವಿ ಜಿಲ್ಲೆಯಲ್ಲಿ ನೀಡುತ್ತಿರುವ ಲಸಿಕೆಗಳ ವಿವರಗಳನ್ನು ಮತ್ತು ತೀವ್ರತರ ಮಿಷನ್ ಇಂದ್ರದನುಷ 5.0 ಅಭಿಯಾನದ ವಿವರಗಳನ್ನು ಡಾಚೇತನ ಕಂಕಣವಾಡಿ ಜಿಲ್ಲಾ ಸಂತಾನೋತ್ಪತಿ ಹಾಗೂ ಮಕ್ಕಳ ಮತ್ತು ಲಸಿಕಾ ಅಧಿಕಾರಿಗಳು ತಿಳಿಸಿದರು

By BPN

Leave a Reply

Your email address will not be published. Required fields are marked *