ಹೆಣ್ಣು ಮಕ್ಕಳಿಗೆ ತಂದೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಯಾವಾಗ ಸಿಗುವುದಿಲ್ಲ ಗೊತ್ತಾ.?
2005ರಲ್ಲಿ ಭಾರತದ ಕಾನೂನಿನಲ್ಲಿ ಆಸ್ತಿ ವಿಚಾರವಾಗಿ ಒಂದು ತಿದ್ದುಪಡಿ ಆಯಿತು. ಆ ಅಮೆಂಟ್ ಮೆಂಟ್ ಪ್ರಕಾರ ಹೆಣ್ಣು ಮಕ್ಕಳೂ ಕೂಡ ತಂದೆ ಆಸ್ತಿಯಲ್ಲಿ ಸಮಾನ ಹಕ್ಕುದಾರರು ಎಂದು ಆದೇಶ ಹೊರಡಿಸಲಾಯಿತು. ಆದರೆ ಅದರಲ್ಲಿ ಹಲವಾರು ಗೊಂದಲಗಳು ಜನರಿಗೆ ಏರ್ಪಟ್ಟಿತ್ತು. ಸುದ್ದಿ ಮಾಧ್ಯಮದಲ್ಲಿ ದಿನಪತ್ರಿಕೆಗಳು ಮತ್ತು ಬಾಯಿಂದ ಬಾಯಿಗೆ ಪ್ರಚಾರ ಆಗುತ್ತಿದ್ದ ಹಾಗೆ ಎಲ್ಲರೂ ಕೂಡ ತಮ್ಮ ತಂದೆ ಆಸ್ತಿಯಲ್ಲಿ ಪಾಲು ಕೇಳಲು ಶುರು ಮಾಡಿದರು.ವಿಚಾರವಾಗಿ ಇದ್ದ ಎಲ್ಲಾ ಅನುಮಾನಗಳಿಗೂ 2020ರಲ್ಲಿ ಬಂದ ತೀರ್ಪು ಉತ್ತರ ಆಗಿತ್ತು.
ಅದರ ಪ್ರಕಾರ ಹೇಳಿರುವುದು ಏನೆಂದರೆ 2005ರ ಹಿಂದೆ ತಂದೆ ತೀರಿ ಹೋಗಿದ್ದರು ಅಥವಾ 2005 ರಿಂದ ನಂತರ ತಂದೆ ತೀರಿಹೋಗಿದ್ದರೂ ಕೂಡ ಹೆಣ್ಣು ಮಕ್ಕಳು ತಂದೆ ಆಸ್ತಿಯಲ್ಲಿ ಸಮಾನ ಹಕ್ಕುದಾರರೇ. ಆದರೆ ಎಲ್ಲ ಹೆಣ್ಣು ಮಕ್ಕಳು ಕೂಡ ತಂದೆಯ ಆಸ್ತಿಯಲ್ಲಿ ಪಾಲು ಕೇಳಲು ಬರುವುದಿಲ್ಲ. ಯಾವ ಯಾವ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ತಂದೆ ಆಸ್ತಿಯಲ್ಲಿ ಸಮಾನ ಹಕ್ಕು ಅಥವಾ ಹಕ್ಕು ಕೇಳಲು ಬರುವುದಿಲ್ಲ ಎಂದು ನೋಡುವುದಾದರೆ,
ಒಂದು ವೇಳೆ ತಂದೆ ಆಸ್ತಿ ಸ್ವಯಾರ್ಜಿತವಾಗಿದ್ದರೆ ಅವರು ತಮ್ಮ ಸ್ವಂತ ದುಡಿಮೆಯಿಂದ ಆಸ್ತಿಯನ್ನು ಸಂಪಾದಿಸಿದ್ದರೆ ಅವರ ಮಕ್ಕಳಲ್ಲಿ ಯಾವ ಮಕ್ಕಳಿಗಾದರೂ ಆಸ್ತಿಯನ್ನು ಮಾಡಿಕೊಡಬಹುದು. ಅವರು ಕ್ರಯ ಪತ್ರದ ಮೂಲಕ ಅಥವಾ ರಿಜಿಸ್ಟರ್ ಮಾಡುವ ಮೂಲಕ ಅಥವಾ ಇನ್ಯಾವುದರದ ಮೂಲಕ ತಮ್ಮ ಆಸ್ತಿ ಹಕ್ಕನ್ನು ತಮ್ಮ ಇಷ್ಟವಾದ ಮಕ್ಕಳಿಗೆ ಕೊಟ್ಟಿದ್ದರೆ ಅದು ಅವರ ಸ್ವಂತ ಸಂಪಾದನೆ ಆಗಿರುವ ಕಾರಣ ಹೆಣ್ಣು ಮಕ್ಕಳು ಅದರಲ್ಲಿ ಪಾಲು ಕೇಳಲು ಬರುವುದಿಲ್ಲ.
ಇನ್ನು ಪಿತ್ರಾರ್ಜಿತ ಆಸ್ತಿಯ ವಿಷಯವಾಗಿ ಹೇಳುವುದಾದರೆ ಪಿತ್ರಾರ್ಜಿತವಾಗಿ ಬಂದ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಖಂಡಿತವಾಗಿಯೂ ಸಮಾನ ಪಾಲು ಇರುತ್ತದೆ ಆದರೆ ಹೆಣ್ಣುಮಕ್ಕಳ ಮದುವೆ
ನಮ್ಮವಾಟ್ಸಪ್ ಗುಂಪಿಗೆ ೨೦ ದ ತವರು ಜಾಯಿನ್ ಆಗಿ ಮನೆಯ ಜವಾಬ್ದಾರಿಗಳಿಗೆ ಎಂದು ಈಗಾಗಲೇ ಸಾಕಷ್ಟು ಹಣ ಖರ್ಚು ಮಾಡಲಾಗಿರುತ್ತದೆ.
ಜೊತೆಗೆ ಆಸ್ತಿ ಭಾಗವಾಗುವ ಸಂದರ್ಭದಲ್ಲಿ ಹೆಣ್ಣು ಮಕ್ಕಳು ತಮಗೆ ಆಸ್ತಿ ಬೇಡ ಎಂದು ಆಸ್ತಿ ಬದಲು ಬೇರೆ ಏನಾದರೂ ಉಡುಗೊರೆ ಅಥವಾ ಮತ್ತೆ ಏನಾದರೂ ಪಡೆದು ಹಕ್ಕು ಬಿಡುಗಡೆ ಪತ್ರದ ಮೂಲಕ ತಮ್ಮ ಆಸ್ತಿಯ ಮೇಲಿನ ಹಕ್ಕನ್ನು ಬಿಟ್ಟು ಕೊಡುತ್ತಿರುತ್ತಾರೆ. ಆ ಹೆಣ್ಣು ಮಕ್ಕಳಿಗೆ ಏನಾದರೂ 2005ಕ್ಕಿಂತ ಹಿಂದೆ ಅಥವಾ 2005 ರಿಂದ ಈಚೆಗೆ ಈ ರೀತಿ ಹಕ್ಕು ನ್ಯಾಯಾಲಯದಲ್ಲಿ ಧಾವೆ ಹೂಡಲು ಸಾಧ್ಯವಿಲ್ಲ, ಅವರಿಗೂ ಆಸ್ತಿಯಲ್ಲಿ ಪಾಲು ಬರುವುದಿಲ್ಲ. ಜೊತೆಗೆ ತಂದೆಯ ಮನೆಯ ಆಸ್ತಿ 2005 ರಲ್ಲಿ ಆದ ತಿದ್ದುಪಡಿಗಿಂತ ಹಿಂದೆ ಘಟನೆ ಆಗಿ ಹೋಗಿದ್ದರೆ ಅಂತ ಸಂದರ್ಭದಲ್ಲಿ ಕೂಡ ನೀವು ತಂದೆ ಆಸ್ತಿಯಲ್ಲಿ ಪಾಲು ಕೇಳಲು ಬರುವುದಿಲ್ಲ. ಇದನ್ನು ತಂದೆಯ ಆಸ್ತಿ ಕೇಳುವ ಎಲ್ಲ ಹೆಣ್ಣುಮಕ್ಕಳು ತಪ್ಪದೇ ತಿಳಿದುಕೊಂಡಿರಬೇಕು.
ಕಾನೂನು ತಜ್ನ್ಯರ ಸಲಹೆಯೊಂದಿಗೆ.
BPN ಸುದ್ಧಿ .