---Advertisement---

Advertisement

ಹಿರಿಯ ಪತ್ರಕರ್ತ ಡಿ.

ಏರೋ ಇಂಡಿಯಾ ಎಂ

ಉಮಾಪತಿಗೆ

ಕೆಯುಡಬ್ಲೂಜೆಯ ಪ್ರತಿಷ್ಠಿತ ಬಾಬಾಸಾಹೇಬ್ ಅಂಬೇಡ್ಕರ್

ದತ್ತಿ ಪ್ರಶಸ್ತಿ

 

ಬೆಂಗಳೂರು (BPN ಸುದ್ಧಿ): ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೊಡುವ ಪ್ರತಿಷ್ಠಿತ “ಡಾ. ಬಿ.ಆರ್ ಅಂಬೇಡ್ಕರ್ ದತ್ತಿ ಪ್ರಶಸ್ತಿ” ಗೆ ಹಿರಿಯ ಪತ್ರಕರ್ತ ಡಿ. ಉಮಾಪತಿ ಆಯ್ಕೆಯಾಗಿದ್ದಾರೆ.

ಸಾಮಾಜಿಕ ಕಳಕಳಿಯ, ಸಮಸಮಾಜದ ಆಶಯಗಳ ಬಿಂಬಿತ, ಮಾನವೀಯ ವರದಿ ಮತ್ತು ವಿಶ್ಲೇಷಣಾ ಬರಹಗಳ ಸಂವೇದನಾ ಶೀಲ ಪತ್ರಕರ್ತರನ್ನು ಗುರುತಿಸಿ ಗೌರವಪೂರ್ವಕವಾಗಿ ಅಭಿನಂದಿಸುವ ಆಶಯದಿಂದ ಬಾಗಲಕೋಟೆಯ ಹಿರಿಯ ಪತ್ರಕರ್ತ ಸುಭಾಷ್ ಹೊಲ್ಲೂರು ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಮಹಾ ಮಾನವತಾವಾದಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೆಸರಿನಲ್ಲಿ ವಾರ್ಷಿಕ ಪ್ರಶಸ್ತಿಯ ದತ್ತಿನಿಧಿಯನ್ನು ಸ್ಥಾಪಿಸಿದ್ದು, 2021-22 ನೇ ಸಾಲಿನಿಂದ ಈ ಪ್ರಶಸ್ತಿಯನ್ನು ವೃತ್ತಿಪರ- ಸಾಧಕ ಪತ್ರಕರ್ತರಿಗೆ ನೀಡಲಾಗುತ್ತಿದೆ.

ಭಾರತದ ಪತ್ರಿಕೋದ್ಯಮಕ್ಕೆ ಮತ್ತು ಪತ್ರಕರ್ತನಿಗೆ ಮೌಲಿಕ ಮಾದರಿಯೊಂದನ್ನು ಕಟ್ಟಿಕೊಟ್ಟ ಶ್ರೇಷ್ಠ ಪತ್ರಕರ್ತ ಬಾಬಾಸಾಹೇಬ್ ಅಂಬೇಡ್ಕರ್ ಹೆಸರಿನಲ್ಲಿ ನೀಡಲಾಗುವ ಈ ಪ್ರಶಸ್ತಿಯನ್ನು ಮೊದಲಿಗೆ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರಿಗೆ ನೀಡಲಾಗಿತ್ತು. ಪ್ರಶಸ್ತಿಯು 10 ಸಾವಿರ ರೂ. ನಗದು, ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ.

ಡಿ.ಉಮಾಪತಿ ಪರಿಚಯ

ಮಾರ್ಚ್ 18,1959 ರಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಜನಿಸಿದ ಡಿ ಉಮಾಪತಿ ಅವರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಆಂಗ್ಲ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಬಿ.ಎ, ಮೈಸೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಎಂ.ಎಂ ಸ್ನಾತಕೋತ್ತರ ಪದವಿಯಲ್ಲಿ ಎರಡನೆ ಬ್ಯಾಂಕ್ ಪಡೆದವರು.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ಸಮೂಹ ಸಂಸ್ಥೆ ಯ ಕನ್ನಡ ಪ್ರಭ, ಈ ಟಿವಿ, ಯ ದೆಹಲಿ ಕರೆಸ್ಪಾಂಡೆಂಟ್ ಅಗಿ 27 ವರ್ಷಗಳ ಪರಿಣಾಮಕಾರಿ ವರದಿಗಳಿಂದ ಹೆಸರುಗಳಿಸಿದವರು, ಪಾರ್ಲಿಮೆಂಟ್ ವರದಿ, ಚುನಾವಣಾ ವಿಶ್ಲೇಷಣಿಗಳು , ಸುಪ್ರೀಂ ಕೋರ್ಟು ನಲ್ಲಿನ ನೀರು ನ್ಯಾಯಾಧೀಕರಣ ವ್ಯಾಜ್ಯಗಳ, ರಾಷ್ಟ್ರಮಟ್ಟದ ರಾಜಕೀಯ ಬೆಳವಣಿಗೆಗಳು, ಮತ್ತು ವಿದೇಶಾಂಗ ಸಚಿವರ ವಿದೇಶ ಪ್ರವಾಸದ ಜೊತೆಗೂಡಿ ರಾಜತಾಂತ್ರಿಕ ವರದಿಗಾರಿಕೆಯಲ್ಲಿ ವಿಶಿಷ್ಟ ಅನುಭವ ಇವರದ್ದಾಗಿದೆ.

ದೆಹಲಿಯಲ್ಲಿದ್ದು ರಾಷ್ಟ್ರೀಯ ಪತ್ರಕರ್ತರಾಗಿರುವ ಉಮಾಪತಿ ಅವರು ಅಂದೋಲನ, ರೈತ ಚಳವಳಿ, ವಿಜಯಕರ್ನಾಟಕ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ವಾರ್ತಾಭಾರತಿ ಪತ್ರಿಕೆಗಳಿಗೆ ಅಂಕಣ ಬರಹಗಾರರಾಗಿಯೂ, ಪ್ರಸ್ತುತ ‘ನ್ಯಾಯಪಥ(ಗೌರಿ ಮಿಡಿಯಾ)’ ಮತ್ತು ‘ಈ ದಿನ’ ವೆಬ್ ಜರ್ನಲ್‌ನ ಸಂದರ್ಶಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಅಂಬೇಡ್ಕರ್ ಪ್ರತಿಷ್ಠಾನದ ಭೋಧಿವರ್ಧನ ಪ್ರಶಸ್ತಿ, ಎಸ್ಸಿ/ಎಸ್ಟಿ ಎಡಿಟರ್ ಅಸೋಸಿಯೇಷನ್‌ನ ‘ಬಿ. ರಾಚಯ್ಯ ಪ್ರಶಸ್ತಿ’, ಪ್ರೆಸ್ ಕ್ಲಬ್ ಬೆಂಗಳೂರು ನ ಜೀವಮಾನಸಾಧನೆ ಪ್ರಶಸ್ತಿ, ಇಂಡಿಯನ್ ಎಕ್ಸ್ ಪ್ರೆಸ್ ಗ್ರೂಪ್ ನೀಡುವ ಸಂಪಾದಕ ಮಂಡಳಿ ಆಯ್ಕೆಯ ಅತ್ಯುತ್ತಮ ಶ್ರಮಜೀವಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ನ ನಾಡಿಗೇರಿ ಕಿಟ್ಟಪ್ಪ ದತ್ತಿ ಪ್ರಶಸ್ತಿ, ಕರ್ನಾಟಕ ಸರ್ಕಾರದ ಕನ್ನಡ ರಾಜ್ಯೋತ್ಸವ ಮತ್ತಿತರ ಪ್ರಶಸ್ತಿಗಳು ಇವರಿಗೆ ಸಂದಿವೆ. ‘ದೆಹಲಿ ನೋಟ’, ‘ಪದಕುಸಿಯೇ ನೆಲವಿಲ್ಲ’ ಉಮಾಪತಿ ಅವರ ಎರಡು ಮಹತ್ವದ ಕೃತಿಗಳಾಗಿವೆ.

 

By BPN

Leave a Reply

Your email address will not be published. Required fields are marked *