---Advertisement---

Advertisement

ಕರ್ನಾಟಕ ವಿಧಾನ ಸಭಾ ಚುನಾವಣೆಗೆ ನೀತಿ ಸಂಹಿತೆ ಜಾರಿಯಾದ ಹಿನ್ನಲೆಯಲ್ಲಿ  ಖಾನಪುರ ಕ್ಷೇತ್ರ ಶಿಕ್ಷಣಾಧಿಕಾರಿ ಖಡಕ್ ಆದೇಶ ಹೊರಡಿಸಿದ್ದಾರೆ.

ಖಾನಾಪುರ ತಾಲೂಕಿನ ಎಲ್ಲಾ ಅನುದಾನಿತ ಅನುದಾನ ರಹಿತ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯೋಪಾಧ್ಯಾಯರುಗಳಿಗೆ ರಾಜ್ಯಾದ್ಯಂತ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಯಾವುದೇ ಶಿಕ್ಷಕರಾಗಲಿ ವಿದ್ಯಾರ್ಥಿಗಳಾಗಲಿ ಇತರೆ ಸಿಬ್ಬಂದಿ ವರ್ಗದವರಾಗಲಿ, ರಾಜಕೀಯ ವ್ಯಕ್ತಿಗಳ ಫೋಟೋ ಹೆಸರು ಇರುವ ಸ್ಕೂಲ್ ಬ್ಯಾಗ್ ಹಾಗೂ ಶರ್ಟ್ ಪ್ಯಾಂಟ್ ಹಾಗೂ ಯಾವುದೇ ಇನ್ನಿತರ ಸಂಕೇತಗಳಿರುವ ಶಾಲಾ ವಸ್ತುಗಳನ್ನು ಶಾಲೆಗೆ ತೆಗೆದುಕೊಂಡು ಬರುವಂತಿಲ್ಲ ಇದು ಮಾನ್ಯ ತಹಸೀಲ್ದಾರ್ ಇವರ ಆದೇಶವಾಗಿರುತ್ತದೆ ಕಾರಣ ಎಲ್ಲರೂ ಹಿಂದೆ ಕ್ರಮವಹಿಸಿ ತಪ್ಪಿದ್ದಲ್ಲಿ ಅಂತ ವಸ್ತುಗಳನ್ನು ಸಿಸ್ ಮಾಡಿ ತಮ್ಮ ವಿರುದ್ಧ ಕೇಸ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವರು ಇಂದೇ ಇದನ್ನು ಎಲ್ಲ ಮಕ್ಕಳಿಗೂ ಹಾಗೂ ಸಿಬ್ಬಂದಿಯವರಿಗೂ ಕಡ್ಡಾಯವಾಗಿ ತಿಳಿಸಿ ತಪ್ಪಿದ್ದಲ್ಲಿ ತಮ್ಮ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಖಾನಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿರುತ್ತಾರೆ.

By BPN

Leave a Reply

Your email address will not be published. Required fields are marked *