“Time Travelling” ಅಂತ ಕೇಳಿದಾಕ್ಷಣ ಎಲ್ಲರ ಕಿವಿ ನೆಟ್ಟಗಾಗೋದಂತೂ ಸಹಜ. ಪುಸ್ತಕ ಪೆನ್ನು ಹಿಡಿದು ಏನೋ ಒಂದಿಷ್ಟನ್ನು ಗೀಚಲೆಂದು ಕೂತ ನನಗೆ ಅದೆಷ್ಟೋ ಬಾರಿ “Time Travel”ನ ಬಗೆಗಿನ ಕತೆ .
Christopher Nolan ನ Inception, Intersteller ಹಾಗೂ Tenent ಮತ್ತೆ Baran Bo Odarನ Dark ಮತ್ತೆ 1899 ಹಾಗೂ ಕನ್ನಡದ Pawan Kumar ನಿರ್ದೇಶನದ ಲೂಸಿಯ, ಇವನ್ನೆಲ್ಲಾ ನೋಡಿದಾಗಂತೂ ನನ್ನ ಆ ಹುಚ್ಚು ಇನ್ನಷ್ಟು ಹೆಚ್ಚಾಗೋದಂತೂ ನಿಜ!
.
Ikshvaku Ram ರ ನಿರ್ದೇಶನದ “Everything Is Possible” ನಾ ನೋಡಿದಂತಹ “Time Travell”ನ ಬಗೆಗಿನ ಕನ್ನಡದ ಎರಡನೆಯ ಕಿರುಚಿತ್ರವಿದು. ಈ ಸಿನಿಮಾದಲ್ಲಿ ಬಳಸಿದ ಪ್ರಾಪರ್ಟೀಸ್ ಅಂತೂ ಅದ್ಭುತ!. ಸಿನಿಮಾದ ಶುರುವಲ್ಲೇ ನಾಯಕಿಯ ಹಾವ ಬಾವ ಹಾಗೂ ಅವಳು ಹೇಳೊ; “ಅದು.. ನನಗೆ ಈ ಎಲಿಝಬೆತ್ ಸ್ಟೈಲ್ ಅಂದ್ರೆ ತುಂಬಾ ಇಷ್ಟ ಸರ್” ಡೈಲಾಗ್ ನಿಂದಲೇ ಈಕೆ “Time Travelling” ಮಾಡಿ ಬಂದವಳೆಂದು ನನಗಂತೂ ಮೊದಲೇ ತಿಳಿಯಿತು. (ಅದೇನೋ ಗೊತ್ತಿಲ್ಲ, ಇತ್ ಇತ್ಲಗೆ ಸಿನಿಮಾದ ಪ್ರಾರಂಭದಲ್ಲೇ ಮುಂದೇನಾಗಬಹುದೆಂಬ ಸೂಚನೆ ನನಗೆ ಸಿಕ್ಕಿರುತ್ತೆ) ನನ್ನ ಪ್ರಾಕಾರ ಕೊನೆಯವರೆಗೂ ಈ ರೀತಿಯ ಒಂದು ಸಣ್ಣ ಸುಳಿವೂ ಕೊಡದೆ ಪ್ರೇಕ್ಷಕರ ರೋಚಕತೆಯ ರೊಚ್ಚಿಗೆಬ್ಬಿಸುವುದೇ ಒಂದು ಅತ್ಯುನ್ನತ ಸಿನಿಮಾ. ನನಗನಿಸಿದಾಗೆ ಈ ಕಿರುಚಿತ್ರದಲ್ಲಿ ಅದೊಂದೇ ಕೊರತೆ ಹೊರತು ಮತ್ಯಾವುದೂ ಇಲ್ಲ! ತುಂಬಾ ಥಿಯೇರಿಗಳ ಬಗೆಗಿನ ಕೊಂಚ ಮಾಹಿತಿಯನ್ನ ನೀಡಿ ಅದರ ಆದಾರದ ಮೇಲೆಯೆ ಕತೆ ಹೆಣೆದು ನಿರ್ಮಿಸಲಾಗಿರುವ ಈ ಕಿರುಚಿತ್ರ ನೋಡುಗರಿಗೆ ಬೋರ್ ಅಂತೂ ಹೊಡಿಸೋದಿಲ್ಲ.
ಇನ್ನೂ ನಟನೆಯ ವಿಷಯಕ್ಕೆ ಬಂದರೆ Mata Koppala ಸರ್ ಹಾಗೂ Kushee Ravi ಇವರಿಬ್ಬರ ನಟನೆ ಅಂತೂ ಅದ್ಭುತ, ಜೊತೆಗೆ ಅಲ್ಲಿದ್ದ ಪ್ರತಿಯೊಂದೂ ವಸ್ತುಗಳು ಕೂಡ ಅತ್ಯದ್ಭುತವಾಗಿ ನಟಿಸಿದಂತೂ ಕರೆ!.
ಇನ್ನೂ ಈ ಕಿರುಚಿತ್ರದ ಮತ್ತೊಂದು ಛಾಪ್ಟರ್ “Time Is An Illusion”ನ ಬರುವಿಕೆಗಾಗಿ ಕಾಯುತ್ತಿರುವ ವಿಕ್ಷಕ ಪ್ರಭು. ಈ ಕಿರುಚಿತ್ರಕ್ಕಾಗಿ ದುಡಿದ ಎಲ್ರಿಗೂ ಶುಭವಾಗಲಿ ಎಂದು ಆಶಿಸುತ್ತಾ ಕೊನೆಯದಾಗಿ ಹೇಳುವುದಿಷ್ಟೆ;
“Everything Is Possible!