ಪ್ರಿಯ ಓದುಗರೇ,
ಇನ್ನೇನು SSLC ಪರೀಕ್ಷೆ ಬಂದೆ ಬಿಟ್ಟಿತು. ಹಾಗಂತ ಹೆದರೋ ಅವಶ್ಯಕತೆ ಇಲ್ಲಾ. ಪರೀಕ್ಷೆ ಬರೆಯೋಕ್ಕೆ ಭಯವಿದೆಯೇ? ಮಕ್ಕಳೇ……
ಹಾಗಾದರೆ ಯಾಕೆ ಹೆದರಿಕೊಳ್ಳುತಿರಾ? ಪರೀಕ್ಷೆ ಭಯ ಬಿಟ್ಟು ಬಿಡಿ.
ಹೌದು ಪ್ರಿಯ ಮಕ್ಕಳೇ ನೀವು ಜಾಣರು, ಬುದ್ಧಿವಂತರು, ನಿಮ್ಮ ವಿವೇಕ ನಿಮ್ಮ ಕೈಯಲ್ಲಿದೆ ಪರೀಕ್ಷೆ ಯುದ್ಧವಲ್ಲ ಅದು ಹಬ್ಬ ಇದ್ದಂತೆ.
ನೀವು ಪರೀಕ್ಷೆ ಎದುರಿಸಲು ಈ ಅಂಶಗಳನ್ನು ಅನುಸರಿಸಿ ಖಂಡಿತ ನಿಮ್ಮ ನೆನಪಿನ ಶಕ್ತಿ ನಿಮಗೆ ಸಹಾಯ ಮಾಡುತ್ತೆ.
ಹಾಗಾದ್ರೆ ಅವುಗಳು ಯಾವುವು? ಏನು ಅನುಸರಿಸಾ ಬೇಕು ನೋಡೋಣ.
1) ಮೊದಲು ಪ್ರಶ್ನೆ ಪತ್ರಿಕೆ ಓದಿ, ಅರ್ಥ ಮಾಡಿಕೊಳ್ಳಿ. ಉತ್ತರ ಬರೆಯುವ ಮೊದಲು ಎಷ್ಟು ಅಂಕಗಳಿಗೆ ಪ್ರಶ್ನೆ ಕೇಳಲಾಗಿದೆ, ಪ್ರಶ್ನೆಗೆ ಎಷ್ಟು ಉತ್ತರ ಬರೆಯಬೇಕು ಎಂದು ಪ್ಲಾನ್ ಮಾಡಿಕೊಳ್ಳಿ. ಈ ಪ್ರಕಾರ ಉತ್ತರ ಲಾಜಿಕಲಿ ಹಾಗೂ ಅಂಕಗಳಿಗೆ ಎಷ್ಟು ಬೇಕೋ ಅಷ್ಟು ಉತ್ತರವನ್ನು ಸ್ಪಷ್ಟವಾಗಿ, ಸರಳವಾಗಿ ಬರೆಯಿರಿ.
2) ಮೊದಲು ನಿಮಗೆ 15 ನಿಮಿಷಗಳು ಪ್ರಶ್ನೆ ಪತ್ರಿಕೆಯನ್ನು ಓದಿಕೊಳ್ಳಲು ಅವಕಾಶ ಇರುತ್ತದೆ. ಈ ಸಮಯವನ್ನೇ ಅದಕ್ಕೆ ಮೀಸಲಿಡಿ. ನಂತರ ಸುಲಭವಾಗಿ ಉತ್ತರಿಸಬಹುದಾದ ಮತ್ತು ಕಠಿಣ ಎಂಬ ಪ್ರಶ್ನೆಗಳನ್ನು ವಿಂಗಡಿಸಿಕೊಳ್ಳಿ, ನಂತರ ಮೊದಲು ಸುಲಭವಾದ ಪ್ರಶ್ನೆಗಳಿಗೆ ಉತ್ತರ ನೀಡಿ, ನಂತರ ಕಠಿಣ ಪ್ರಶ್ನೆಗಳಿಗೆ ಅಲೋಚಿಸಿ ಉತ್ತರಿಸಿ. ಕಠಿಣ ಪ್ರಶ್ನೆಗಳು ಉತ್ತರ ನೆನಪಿಗೆ ಸಮಯ ತೆಗೆದುಕೊಳ್ಳುತ್ತವೆ. ಆದ್ದರಿಂದ ಮೊದಲು ಸುಲಭ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
3) ಮೊದಲ 15 ನಿಮಿಷ ಪ್ರಶ್ನೆಗಳನ್ನು ಓದಿದಾಗ ಸಿಗುವ ಕಠಿಣ ಪ್ರಶ್ನೆಗಳ ಬಗ್ಗೆ ಹೆಚ್ಚು ಆತಂಕ ಪಡದಿರಿ. ಇದರಿಂದ ಸುಲಭ ಪ್ರಶ್ನೆಗಳಿಗೆ ಉತ್ತರಿಸುವ ವಿಧಾನವು ಸಹ ಕಷ್ಟವಾಗಿಬಿಡಬಹುದು. ಆದ್ದರಿಂದ ಹೆಚ್ಚು ಒತ್ತಡಕ್ಕೆ ಒಳಗಾಗದಿರಿ. ನೀವು ಕಠಿಣ ಪ್ರಶ್ನೆಗಳಿಗೂ ಯಾವಾಗ ಉತ್ತರ ಬರೆಯಲು ಆರಂಭಿಸುವಿರೋ, ಆಗ ಅದು ಸಹ ಸುಲಭವಾಗುತ್ತದೆ. ಕೊಂಚ ಯೋಚಿಸಿದರೆ, ಅದಕ್ಕೂ ಉತ್ತರ ನೆನಪಿಗೆ ಬರುವ ಸಾಧ್ಯತೆಗಳು ಹೆಚ್ಚು.
ನಿಮಗೆ ಪ್ರಶ್ನೆ ಓದಿದಾಗ ಯಾವೆಲ್ಲ ಪ್ರಶ್ನೆಗೆ ಸುಲಭವಾಗಿ ಉತ್ತರ ಬರೆಯಬಹುದು, ಕಠಿಣ ಪ್ರಶ್ನೆ ಯಾವುವು ಎಂದು ತಿಳಿಯುತ್ತದೆ. ಮೊದಲು ಯಾವಾಗಲು ಸುಲಭವಾಗಿ ಉತ್ತರಿಸಬಲ್ಲ ಪ್ರಶ್ನೆಗಳನ್ನೇ ಆಯ್ಕೆ ಮಾಡಿಕೊಂಡು ಮುಗಿಸಬೇಕು. ನಂತರ ಮ್ಯಾನೇಜೇಬಲ್ ಎನ್ನುವ ಪ್ರಶ್ನೆಗೆ ಉತ್ತರಿಸಿ. ಈ ಮೂಲಕ ನೀವು ಚಾಲೆಂಜ್ ಎದುರಿಸಬಲ್ಲ ಆತ್ಮ ವಿಶ್ವಾಸ ಮೂಡುತ್ತದೆ.
ಪರೀಕ್ಷೆಯಲ್ಲಿ ನೀವು ಉತ್ತರ ಬರೆಯಲು, ಬರೆಯಬೇಕಾದರೆ ನಿಮ್ಮ ಉತ್ತರ ವೇಗದ ಬಗ್ಗೆ ಗಮನವಿರಲಿ. ಸಮಯ ಪೋಲಾಗುತ್ತಿದೆಯೇ ಎಂಬುದರ ಮೇಲೆಯೂ ಅರಿವಿರಲಿ. ಹಾಗೆ ವೇಗದ ಗುಂಗಲ್ಲಿ ತಪ್ಪು ಉತ್ತರ ನೀಡದಂತೆ ಎಚ್ಚರವಿರಲಿ. ಉತ್ತರಿಸುವಾಗ ಸಣ್ಣ ತಪ್ಪಿಗೂ ಸಹ ಆಹ್ವಾನ ನೀಡದಿರಿ.
ಕೆಲವು ಬಾರಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಹಾಲ್‌ನಲ್ಲಿ ಉತ್ತರ ಬರೆಯುವ ವೇಳೆ, ಕೆಲವು ಪ್ರಶ್ನೆಗಳಿಗೆ ಉತ್ತರವನ್ನು ನೆನಪಿಸಿಕೊಳ್ಳುವ ಹಂಬಲದಲ್ಲಿ ಸಮಯದ ಅರಿವು ಮರೆತು ಬಿಡುತ್ತದೆ. ಈ ತಪ್ಪುಗಳನ್ನು ಮಾಡದಿರಿ. ನೀವು ಆಗಾಗ ಸಮಯವನ್ನು ಗಮನಿಸಿಕೊಳ್ಳುವುದರಿಂದ ನಿಮ್ಮ ಒತ್ತಡ ಹೆಚ್ಚುವುದಿಲ್ಲ. ಎಲ್ಲ ಪ್ರಶ್ನೆಗಳಿಗೂ ಉತ್ತರವನ್ನು ನೀಡುವ ನಿಟ್ಟಿನಲ್ಲಿ ಸಮಯ ಸಹಕಾರಿಯಾಗುತ್ತದೆ.
ಯಾವುದೇ ಪ್ರಶ್ನೆಗೆ ಉತ್ತರಿಸುವ ಮೊದಲು ಅಲೋಚನೆ ಒಳ್ಳೆಯದು. ಆದರೆ ಉತ್ತರ ಬೇಗ ಸಿಗದಿದ್ದಲ್ಲಿ, ಒಂದೇ ಪ್ರಶ್ನೆಗೆ ಹೆಚ್ಚು ಕಾಲ ಚಿಂತಿಸುತ್ತಾ ಕೂರಬೇಡಿ. ಅಲ್ಲದೇ ಪ್ರಶ್ನೆ ಸುಲಭವಾಗಿದೆ ಎಂದು ಅಂಕಗಳಿಗೆ ಬೇಕಿರುವುದಕ್ಕಿಂತ ಹೆಚ್ಚಿನ ದೀರ್ಘ ಉತ್ತರವನ್ನು ಬರೆಯುತ್ತಾ ಕೂರದಿರಿ.
ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಗೆ ಉತ್ತರ ನೀಡಿದ ಮೇಲೆ, ಪತ್ರಿಕೆಯನ್ನು ಒಮ್ಮೆ ಪುನರ್ ಪರಿಶೀಲನೆ ಮಾಡಿ. ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆಯೇ, ಪ್ರಶ್ನೆ ಸಂಖ್ಯೆ ಸರಿಯಾಗಿ ಹಾಕಲಾಗಿದೆಯೇ, ರಿಜಿಸ್ಟರ್ ನಂಬರ್ ಬರೆಯಲಾಗಿದೆಯೇ ಎಂದು ಪರಿಶೀಲನೆ ಮಾಡಿಕೊಳ್ಳಿ.
ಜಾಹೀರಾತು
ಇದಿಷ್ಟೇ ಪ್ರಿಯ ಮಕ್ಕಳೇ ಇಷ್ಟನ್ನು ಪಾಲಿಸಿದರೆ ನಿಮ್ಮ ಪರೀಕ್ಷೆಗೆ ಯುದ್ಧ ಮಾದರಿಯಲ್ಲಿ ಬಂದ ಭಯ ಹಬ್ಬ ಆಚರಿಸಿದಹಾಗೆ ಸುಲಭ.
ಹಾಗಾದರೆ ಪ್ರತಿಯೊಬ್ಬರೂ ಈ ಟಿಪ್ಸ್ ಪಾಲಿಸ್ತಿರಲ್ಲ ಮಕ್ಕಳೇ
ನಿಮಗೆಲ್ಲ ಶುಭವಾಗಲಿ, ಎಲ್ಲರು ಅಧಿಕ ಅಂಕ ಗಳಿಸಿ ಉತ್ತಿರ್ಣ ರಾಗಿರಿ ಎಂದು ಬೆಳಗಾವಿ ಫೋಟೋ ನ್ಯೂಸ್ ಆಶಿಸುತ್ತದೆ
ALL THE BEST 👍
ಸ್ಟೀಫನ್ ಜೇಮ್ಸ್ BPN