---Advertisement---

Advertisement

ಕಣ್ಣಿನ ತಪಾಸನಾ ಶಿಬಿರ

 

ಮೂಡಲಗಿ – ತಾಲೂಕಿನ ರಾಜಾಪುರ ವಲಯದ ತುಕ್ಕಾನಟ್ಟಿ ಕಾರ್ಯಕ್ಷೇತ್ರದಲ್ಲಿ ಶಾರದಾ ಜ್ಞಾನವಿಕಾಸ ಕೇಂದ್ರದ ಲಕ್ಷ್ಮಿ ದೇವಿ ಸಭಾಭವನದಲ್ಲಿ ಆರೋಗ್ಯ ತಪಾಸಣಾ ಶಿಬಿರದಲ್ಲಿ ಕಣ್ಣಿನ ತಪಾಸಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಅಕ್ಕವ್ವ ಅರಭಾವಿ ಇವರು ಉದ್ಘಾಟನೆ ಮಾಡಿ ಶುಭ ಹಾರೈಸಿದರು.

ಸಮಾರಂಭದಲ್ಲಿ ಮಾತನಾಡಿದ ಸಿದ್ಧಾರೂಢ ಸ್ವಾಮಿ ಅಪ್ಪಣ್ಣ ಇವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯಿಂದ ನಡೆಯುವ ಹತ್ತು ಹಲವಾರು ಕಾರ್ಯಕ್ರಮಗಳು ಪ್ರತಿಯೊಬ್ಬರಿಗೂ ಮುಟ್ಟುವಂತೆ ಪೂಜ್ಯರ ಕನಸಾಗಿದ್ದು ಇದರ ಸಫಲತೆಯನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಪ್ರತಿಯೊಬ್ಬರಿಗೂ ಆರೋಗ್ಯ ಅತ್ಯಮೂಲ್ಯವಾದದ್ದು ಅದನ್ನು ಕಾಪಾಡಿಕೊಳ್ಳಬೇಕು ಎಂದರು

 

ವೈದ್ಯಾಧಿಕಾರಿ ಶ್ರೀಮತಿ ದೀಪಿಕಾ ಚವ್ಹಾನ್ ಇವರು, ಪ್ರತಿಯೊಬ್ಬರಿಗೂ ಕಣ್ಣು ಎಂಬುದು ಪ್ರಮುಖ ಅಂಗವಾಗಿದ್ದು ವಯಸ್ಸಾದವರಿಗೂ ವಯಸ್ಸಾಗದೆ ಇರುವವರಿಗೂ ಕೆಲವೊಂದು ಸಮಯದಲ್ಲಿ ದೃಷ್ಟಿ ಸಮಸ್ಯೆ ಬರುತ್ತದೆ ಕಣ್ಣಿನ ಪೊರೆಗೆ ಸೂಕ್ತವಾದ ಚಿಕಿತ್ಸೆ ನೀಡಿದ ನಂತರ ಅತಿ ಜಾಗೃತೆವಹಿಸಿ ಕನ್ನಡಕವನ್ನು ಬಳಸಿಕೊಳ್ಳಬೇಕು ನಮ್ಮ ದೇಹದ ಇತರ ಪ್ರಮುಖ ಅಂಗಗಳ ಬಗ್ಗೆಯೂ ಕೂಡ ಜಾಗೃತಿ ವಹಿಸಿಕೊಂಡು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಸದಸ್ಯರ ಕಣ್ಣಿನ ತಪಾಸಣೆ ಮಾಡಿ ಕನ್ನಡಕವನ್ನು ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಬರಮಪ್ಪ ಹರಿಜನ ಗ್ರಾಮ ಪಂಚಾಯತಿ ಉಪಾಧ್ಯಕ್ಷ, ವಲಯದ ಮೇಲ್ವಿಚಾರಕರು ಅಣ್ಣಪ್ಪ, ತಾಲೂಕು ಸಮನ್ವಾಧಿಕಾರಿ ಶ್ರದ್ಧಾ ಮಂಜುನಾಥ್ ಕಮ್ಮಾರ, ಸೇವಾ ಪ್ರತಿನಿಧಿಗಳು ಸುನಂದಾ ಅಶ್ವಿನಿ, ಲಕ್ಷ್ಮಿ ಕೇಂದ್ರ ಸದಸ್ಯರು ಉಪಸ್ಥಿತರಿದ್ದರು.

By BPN

Leave a Reply

Your email address will not be published. Required fields are marked *