ರೈತರು ಭೂಮಿಯ ತೇವಾಂಶ ನೋಡಿ ಬಿತ್ತನೆ ಕಾರ್ಯ ಮಾಡಬೇಕು- ಕೃಷಿ ಅಧಿಕಾರಿ ನಾಯ್ಕರ್
ರೈತರು ಭೂಮಿಯ ತೆವಾಂಶ ನೋಡಿ ಬಿತ್ತನೆ ಕಾರ್ಯ ಮಾಡಬೇಕು ಎಂದು ಹುಕ್ಕೇರಿ ಸಹಾಯಕ ಕೃಷಿ ಅಧಿಕಾರಿ ಆರ್ ಬಿ ನಾಯ್ಕರ ಹೇಳಿದರು.
ಅವರು ಇಂದು ಮಾದ್ಯಮಗಳೊಂದಿಗೆ ಮಾತನಾಡುತ್ತಾ ಹುಕ್ಕೇರಿ ತಾಲೂಕಿನಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆಯಾಗಿದ್ದು ಮುಂಗಾರು ಬಿತ್ತನೆ ವಿಫಲವಾಗಿದೆ ಕಾರಣ ರೈತರು ಹಿಂಗಾರು ಬೆಳೆ ತೆಗೆಯಲು ಭೂಮಿಯ ತೆವಾಂಶ ನೋಡಿ ಬಿತ್ತನೆ ಮಾಡಿದರೆ ಮಾತ್ರ ಬೆಳೆ ತೆಗೆಯಬಹುದು ,ರೈತರು ದುಡುಕಿ ಬಿತ್ತನೆ ಮಾಡಿದರೆ ಬೀಜ ಮೋಳಕೆ ಒಡೆಯದೆ ಹಾನಿ ಅನುಭವಿಸುವ ಸಂಧರ್ಭ ಬರಬಹುದು , ತಾಲೂಕಿನಲ್ಲಿ ಸಾಕಷ್ಟು ಬಿತ್ತನೆ ಬೀಜ ದಾಸ್ತಾನು ಇದೆ ಕಾರಣ ರೈತರು ದುಡಕಬಾರದು ಎಂದು ಸಲಹೆ ನೀಡಿದರು.
ವರದಿ(BPN )ವಿನಯ ಪಾಟೀಲ