---Advertisement---

Advertisement

ಸಮಗ್ರ ಕೃಷಿ ಅಳವಡಿಸಿಕೊಂಡರೆ ರೈತರ ಆದಾಯ ದ್ವಿಗುಣ – ಮಹಾಂತೇಶ ಹೂಗಾರ

 

ಮೂಡಲಗಿ : ಸಮಗ್ರ ಕೃಷಿ ಅಳವಡಿಸಿಕೊಂಡರೆ ರೈತರ ಆದಾಯ ದ್ವಿಗುಣ ಮಾಡಿಕೊಳ್ಳಬಹುದು ಯುವಕರು ಕೃಷಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಅರಭಾವಿ ಕೃಷಿ ಪ್ರಾಧ್ಯಾಪಕ ಮಹಾಂತೇಶ ಹೂಗಾರ ಹೇಳಿದರು.

 

ಅವರು ಮೂಡಲಗಿ ತಾಲೂಕಿನ ಅವರಾದಿ ಗ್ರಾಮದ ನಾಡಗೌಡರ ತೋಟದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜರುಗಿದ ಕೃಷಿ ವಿಸ್ತರಣಾ ಕಾಯ೯ಕ್ರಮ ಉದ್ಘಾಟಿಸಿ ಮಾತನಾಡಿ ಜನಸಂಖ್ಯೆ ಹೆಚ್ಚಾದಂತೆ ಆಹಾರ ಉತ್ಪನ್ನಗಳಿಗೆ ಬೇಡಿಕೆಯೂ ಹೆಚ್ಚಾಗುತ್ತಿದೆ ಕೃಷಿಯಲ್ಲಿ ನಿರಂತರ ಸಂಶೋಧನೆಗಳು ನಡೆಯುತ್ತವೆ. ಅದೇ ರೀತಿ ರೈತರು ಕೂಡಾ ಸಂಶೋಧನೆಗಳನ್ನು ಅಳವಡಿಸಿಕೊಂಡು ಸಾವಯವ ಬೆಳೆಗಳ ಬೆಳೆಯಬೇಕು ಎಂದರು.

ಕಾಯ೯ಕ್ರಮದಲ್ಲಿ ಹಿರಿಯ ಪ್ರಗತಿ ಪರ ರೈತ ಎನ್ ಆರ್ ನಾಡಗೌಡ, ಗ್ರಾಮ ಪಂಚಾಯತ ಅಧ್ಯಕ್ಷೆ ಸವಿತಾ ನಾಯಿಕ, ಶ್ರೀಶೈಲ ಪೂಜೇರಿ, ಲಕ್ಷ್ಮಿ ಪಾಟೀಲ, ಲಕ್ಷ್ಮಣ ಉಟಗಿ, ಹನುಮಂತಗೌಡ ಪಾಟೀಲ, ಹನುಮಂತ ಡೊಂಬರ, ಪ್ರಕಾಶ ಕಾಳಶೆಟ್ಟಿ, ಶಿವಪ್ಪ ಪೂಜೇರಿ, ಈರಪ್ಪ ಅಂಗಡಿ, ಅಡಿವೆಪ್ಪಾ ಹಮ್ಮಿದಡ್ಡಿ, ಯೋಜನೆಯ ಕೃಷಿ ಮೇಲ್ವಿಚಾರಕ ಮೈಲಾರಪ್ಪ ಬೈಲಿ, ರಾಘವೇಂದ್ರ ಪಟಗಾರ, ಮಂಜುನಾಥ ಮಹಿಳಾ ಸಂಘದ ಸವ೯ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.

 

 

By BPN

Leave a Reply

Your email address will not be published. Required fields are marked *