“ಹೌದು..ಫ್ರೀ ಸ್ಕೀಂಗೆ ತತ್ ಕ್ಷಣಕ್ಕೆ 1300 ಬಸ್ ಹಾಗೂ ಕನಿಷ್ಟ ಎಂದ್ರೂ 4 ರಿಂದ 5 ಸಾವಿರ ಡ್ರೈವರ್ಸ್-ಕಂಡಕ್ಟರ್ಸ್ ಬೇಕಾಗುತ್ತದೆ.ಇಷ್ಟೊಂದು ಸಂಪನ್ಮೂಲ ಸಧ್ಯಕ್ಕಂತೂ ನಮ್ಮಲ್ಲಿಲ್ಲ.. ದಿಢೀರ್ ತಂದ್ ನಿಲ್ಲಿಸೊಕ್ಕೆ,ನಾಳೆ ಬೆಳಗಾಗವುದರೊಳಗೆ ಅಷ್ಟೊಂದು ಸಿಬ್ಬಂದಿ ನೇಮಿಸಿಕೊಳ್ಳಲಿಕ್ಕೂ ಆಗೊಲ್ಲ.ಏಕೆಂದ್ರೆ ನಮ್ಮ ಬಳಿಯೇನೂ ಮಂತ್ರದಂಡವಿಲ್ಲ..ಇದೆಲ್ಲಾ ದಿಢೀರ್ ನಡೆದುಬಿಡುವಂಥ ಪ್ರಕ್ರಿಯೆಗಳೂ ಅಲ್ಲ..ಹಾಗಂತ ಆಗೋದೇ ಇಲ್ಲ ವೆಂದೇನಲ್ಲ.ಕಡಿಮೆ,ಕಡಿಮೆ ಎಂದ್ರೂ ಒಂದೆರೆಡು ತಿಂಗಳುಗಳೇ ಬೇಕಾಗಬಹುದು.ಆದ್ರೆ ನಮಗಿರುವ ಗೊಂದಲ ಹಾಗೂ ಅನುಮಾನ ಏನಂದ್ರೆ ನಮ ಗೆ ಜನ ಅಷ್ಟೊಂದು ಕಾಲಾವಕಾಶ ಕೊಡ್ತಾರಾ ಎಂದು..ನಮ್ಮ ಪ್ರಯತ್ನವನ್ನಂತೂ ನಾವು ಮಾಡಿದ್ದೇವೆ.ಪ್ರಾಮಾಣಿಕವಾಗಿ ಸರ್ಕಾರಕ್ಕೆ ವರದಿ ನೀಡಿದ್ದೇವೆ” – ಕೆಎಸ್ ಆರ್ ಟಿಸಿ ಹಿರಿಯ ಅಧಿಕಾರಿ
ಬೆಂಗಳೂರು: ಅಧಿಕಾರಕ್ಕೆ ಬರೋ ಏಕೈಕ ಕಾರಣಕ್ಕೆ ಕಾಂಗ್ರೆಸ್ ಉಚಿತ ಗಿಫ್ಟ್ ಗಳನ್ನು ಘೋಷಿಸಿತಾ ಎನ್ನುವ ಅನುಮಾನ ಕಾಡುತ್ತಿದೆ.ಇಂತದ್ದೊಂದು ಅನುಮಾನ ಕಾಡೊಕ್ಕೆ ಕಾರಣ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸ್ಕೀಂ ಮಾಡಿ ಅದನ್ನು ಘೋಷಿಸುವ ಮುನ್ನ ಪೂರಕ ವ್ಯವಸ್ಥೆ ಮಾಡಿಕೊಳ್ಳದ ಸರ್ಕಾರದ ಸ್ಥಿತಿ. ಏಕಂದ್ರೆ ಉಚಿತ ಪ್ರಯಾಣದ ಘೋಷಣೆ ಮಾಡಿರೋ ಸರ್ಕಾರಕ್ಕೆ ಆ ವ್ಯವಸ್ಥೆ ನಿರ್ವಹಣೆಗೆ ಬೇಕಾದ ಸಂಪನ್ಮೂಲಗಳಿವೆಯೇ.. ಇಲ್ಲವೇ.. ಎನ್ನುವುದರ ಮಾಹಿತಿನೇ ಇಲ್ಲವಾಗಿದೆ.ಸ್ಕೀಂ ಜಾರಿ ಬೆನ್ನಲ್ಲಿ ಸೃಷ್ಟಿಯಾಗುತ್ತಿರುವ ಕೆಲವು ಪ್ರಮುಖ ಆತಂಕಗಳು ಇಲ್ಲಿವೆ.
ಉಚಿತ ಬಸ್ ಪ್ರಯಾಣದ ಘೋಷಣೆ ಮಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರಕ್ಕೆ ಸ್ಕೀಂ ಘೋಷಣೆ ಮಾಡ್ತಿದ್ದಂಗೆ ಎಷ್ಟು ಹೆಚ್ಚುವರಿ ಬಸ್ ಗಳ ಅವಶ್ಯಕತೆ ಬೇಕಾಗುತ್ತದೆ..ಆ ಕೊರತೆ ನೀಗಿಸುವ ವ್ಯವಸ್ಥೆ ಇದೆಯಾ..? ಕೊರತೆ ಎದುರಿಸಲಿಕ್ಕೆ ಬೇಕಾದ ಸಂಪನ್ಮೂಲ ಇದೆಯಾ..? ಎನ್ನುವ ಮಾಹಿತಿನೇ ಇಲ್ಲ ಎನಿಸುತ್ತದೆ.ಏಕಂದ್ರೆ ಉಚಿತ ಬಸ್ ಪ್ರಯಾಣ ಘೋಷಣೆಯಾ ಗುತ್ತಿದ್ದಂತೆ ಬಸ್ ನಲ್ಲಿ ಸಂಚರಿಸುತ್ತಿರುವ ಮಹಿಳೆಯರ ಶೇಕಡಾವಾರು ಪ್ರಮಾಣದಲ್ಲಿ ಒಂದಷ್ಟು ಹೆಚ್ಚಳ ಆಗುತ್ತದೆ.ಆದರೆ ಹೆಚ್ಚಳವಾಗಲಿರುವ ಅಷ್ಟೊಂದು ಪ್ರಮಾಣದ ಮಹಿಳಾ ಪ್ರಯಾಣಿಕರನ್ನು ಹೊತ್ತೊಯ್ಯಲು ಬೇಕಾದಷ್ಟು ಬಸ್ ಗಳೇ ಇಲ್ಲವಾಗಿದೆ. ಈ ಅಂಕಿಅಂಶಗಳನ್ನು ಕ್ರೋಢೀಕರಿಸುವ ಕೆಲಸವನ್ನು ಸರ್ಕಾರ ಏನಾದ್ರೂ ಮಾಡಿದೆಯೇ..? ಪಡೆದುಕೊಂಡಿದೆ ಎನ್ನುವುದೇ ಆದಲ್ಲಿ ಅಷ್ಟೊಂದು ಹೆಚ್ಚುವರಿ ಬಸ್ ಗಳೆಲ್ಲಿವೆ..? ಅವುಗಳನ್ನು ಎಲ್ಲಿಂದ ತರುತ್ತೀರಿ..? ನಾಳೆಯೇ ಸ್ಕೀಂ ಘೋಷಣೆಯಾದ್ರೆ ತತ್ ಕ್ಷಣ ಬಸ್ ಗಳತ್ತ ದೌಡಾಯಿಸುವ ಮಹಿಳಾ ಪ್ರಯಾಣಿಕರನ್ನು ಹೇಗೆ ಹೊತ್ತೊಯ್ಯುವ ಕೆಲಸ ಮಾಡ್ತೀರಿ..? ಬಹುಮುಖ್ಯವಾದ ಈ ಪ್ರಶ್ನೆ ಬಗ್ಗೆ ಸರ್ಕಾರ ಆಲೋಚಿಸಿಯೇ ಇಲ್ವೇನೋ..?
೧೩೦೦-೧೫೦೦ ಹೊಸ ಬಸ್ ಗಳ ಅವಶ್ಯಕತೆ: ಕೆಎಸ್ ಆರ್ ಟಿಸಿ ಅಧಿಕಾರಿಗಳು ಹೇಳುವ ಪ್ರಕಾರ ಹೆಚ್ಚಾಗಲಿರುವ ಮಹಿಳಾ ಪ್ರಯಾಣಿಕರನ್ನು ಹೊತ್ತೊಯ್ಯಲು ಕೆಎಸ್ ಆರ್ ಟಿಸಿ, ಬಿಎಂಟಿಸಿ,ಎನ್ ಡಬ್ಲೂ ಕೆ ಆರ್ ಟಿಸಿ,ಕೆಕೆಆರ್ ಟಿಸಿ ನಿಗಮಗಳನ್ನು ಒಟ್ಟು ಸೇರಿಸಿ 1300 ಕ್ಕೂ ಹೆಚ್ಚು ಬಸ್ ಗಳು ಬೇಕಾಗುತ್ತವೆ.ಬಿಎಂಟಿಸಿ ಬಿಟ್ಟರೆ ಉಳಿದ ಮೂರು ನಿಗಮಗಳಲ್ಲಿ ಬಸ್ ಗಳ ಖರೀದಿಯೇ ನಿರೀಕ್ಷಿತ ಸಂಖ್ಯೆಯಲ್ಲಿ ಆಗಿಯೇ ಇಲ್ಲ.ಕೆಎಸ್ ಆರ್ ಟಿಸಿಗೆ ಹತ್ತಿರತ್ತಿರ 500 ರಿಂದ 600 ಬಸ್ ಗಳು ಬೇಕಾಗುತ್ತವೆ.ಇಷ್ಟೊಂದು ಪ್ರಮಾಣದ ಬಸ್ ಗಳು ಇದ್ದಲ್ಲಿ ಮಾತ್ರ ಫ್ರೀ ಸ್ಕೀಂ ನಲ್ಲಿ ಮಹಿಳೆಯರನ್ನು ಸಮರ್ಪಕವಾಗಿ ಹೊತ್ತೊಯ್ಯಲು ಸಾಧ್ಯವಾಗುತ್ತದೆಯಲ್ಲದೇ ಸ್ಕೀಂ ಕೂಡ ಯಶಸ್ವಿಯಾಗುತ್ತದೆ.
ಥಾಮಸ್ (ಹಿರಿಯ ವರದಿಗಾರರು )
ಬೆಂಗಳೂರು.