ಪ.ಜಾ/ಪ.ಪಂ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಫ್ ವಿತರಣೆ
ಮೂಡಲಗಿ: ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಸಿಷ್ಟ ಜಾತಿ / ಪರಿಸಿಷ್ಟ ಪಂಗಡ ಕೋಶ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟಯ ಸಹಯೋಗದಲ್ಲಿ ಅರಬಾವಿ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದ ಸ್ನಾತಕ-ಸ್ನಾತಕೊತ್ತರ ಓದುತ್ತಿರುವ ಪ.ಜಾ/ಪ.ಪಂ ವಿದ್ಯಾರ್ಥಿಗಳಿಗೆ 2022-23 ನೇ ಸಾಲಿನ ಉಚಿತ ಲ್ಯಾಪಟಾಫ್ ವಿತರಣೆ ಕಾರ್ಯಕ್ರಮ ಅರಭಾವಿ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಜರುಗಿತು.
ನಿರ್ದೇಶಕರು, , ಬಾಗಲಕೋಟಿ ತೋವಿವಿಯ ಪ.ಜಾ/ಪ.ಪಂ ಕೋಶದ ನಿರ್ದೇಶಕ ಡಾ. ವೆಂಕಟೇಶ ಮಾತನಾಡಿ, ವಿದ್ಯಾರ್ಥಿಗಳು ಸರ್ಕಾರದ ಅನುಧಾನ ಸೌಲಭ್ಯಗಳನ್ನು ತಮ್ಮ ಕಲಿಕೆಯಲ್ಲಿ ಲ್ಯಾಪ್ ಟಾಫ್ ಬಳಕೆಯ ಸದುಪಯೋಗ ಪಡೆದುಕೊಂಡು ತಮ್ಮ ಹಾಗೂ ತಮ್ಮ ಕುಟುಂಬದ ಪ್ರಗತಿಗೆ ಕಾರಣರಾಗಬೇಕೆಂದರು.
ಅರಭಾವಿ ಕಿತ್ತೂರ ರಾಣಿ ಚನ್ನಮ್ಮಾ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ಎಮ್. ಜಿ. ಕೆರುಟಗಿ ಅವರು ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಫ್ ವಿತರಿಸಿ ಲ್ಯಾಪ್ ಟಾಫ್ ಪಡೆದಂತಹ ವಿದ್ಯಾರ್ಥಿಗಳು ಇಂತಹ ತಾಂತ್ರಿಕತೆಯ ಬಳಕೆಯನ್ನು ತಮ್ಮ ಒಂದು ಉತ್ತಮ ಭವಿಷಕ್ಕೆ ಉಪಯೋಗಿಸಿಕೊಂಡು ತಮ್ಮ ಜೀವನದಲ್ಲಿ ಯಶಸ್ವಿಯನ್ನು ಕಂಡುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯ ಉಪನ್ಯಾಸಕರಾದ ಡಾ. ಕಾಂತರಾಜು ವಿ., ಡಾ.ವಿ.ಡಿ.ರಾಠೋಡ, ಡಾ. ಎ.ಎಮ್.ನದಾಫ ಹಾಗೂ ಶಿಕ್ಷಕೇತರ ಸಿಬ್ಬಂದಿಗಳಾದ ಸರಳಾ ಕಲ್ಯಾಣ, ಸವಿತಾ ಕರಬಣ್ಣವರ, ತುಳಸಪ್ಪ ಎಸ್.ಎಮ್ ಮತ್ತಿತರರು ಉಪಸ್ಥಿತರಿದ್ದರು.
ಮಹಾವಿದ್ಯಾಲಯ ಪ.ಜಾ/ಪ.ಪಂ ಸಮನ್ಮಯಾಧಿಕಾರಿ ಡಾ. ಮಹಾಂತೇಶ ನಾಯಕ ಬಿ.ಎನ್ ಅವರು ನಿರೂಪಿಸಿ ವಂದಿಸಿದರು. .