ಕಲೆ ಮತ್ತು ಕಲಾವಿದ ಸರಣಿಯಲ್ಲಿ ಅತಿಥಿ ಕಲಾವಿದ, ಬ್ಯಾಂಕ್ ಉದ್ಯೋಗಿ, ಹಾಡುಗಾರ :ಪ್ರಹ್ಲಾದ್ ಕಡೇಚೂರು.
ಕಲೆ ಎಲ್ಲರನ್ನು ಕೈ ಬೀಸಿ ಕರೆಯುತ್ತೇ ಕೆಲವರನ್ನು ಮಾತ್ರ ಆರಿಸಿ ಕೊಳ್ಳುತ್ತೆ. ಎಂಬ ಮಾತಿನಂತೆ ಈ ವಾರದ ಕಲೆ ಮತ್ತು ಕಲಾವಿದ ಸರಣಿಯಲ್ಲಿ ಅತಿಥಿ ಕಲಾವಿದ, ಬ್ಯಾಂಕ್ ಉದ್ಯೋಗಿ, ಹಾಡುಗಾರ :ಪ್ರಹ್ಲಾದ್ ಕಡೇಚೂರು. 12.09.1959. ಹುಟ್ಟಿದ ಇವರು 64 ತುಂಬಿದ ಚಿರ ಯುವಕ ಹುಮ್ಮಸ್ಸು. ಹಿರಿಯ ಕಲಾವಿದನ ಕಿರುಪರಿಚಯ ನಿಮ್ಮ Belagaviphotonews.com ನಲ್ಲಿ.
1989ರಿಂದ ಕಲಬುರಗಿಯ ‘ರಂಗ ಮಾಧ್ಯಮ ಹವ್ಯಾಸಿ ನಾಟಕ ತಂಡದ ಮುಖಾಂತರ ರಂಗ ಪ್ರವೇಶ. ಡಾ. ಗಿರಡ್ಡಿ ಗೋವಿಂದರಾಜ್ ಹಾಗೂ ಡಾ. ಚಂದ್ರಕಾಂತ್ ಕುಸನೂರ್ ಅವರು 1975ರಲ್ಲಿ ಹುಟ್ಟು ಹಾಕಿದ ಸಂಸ್ಥೆ. ಇಂದಿಗೂ ಅದನ್ನ ನಡೆಸಿಕೊಂಡು ಹೋಗುತಿದ್ದಾರೆ.
. ಸುಮಾರು 30ನಾಟಕಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. .
ಪ್ರಮುಖವಾಗಿ ಎಚ್. ಎಸ್. ವೆಂಕಟೇಶ್ ಮೂರ್ತಿ ಯವರ ಹೆಜ್ಜೆಗಳು, ಪರಕಾಯ, ಕತ್ತಲೆಗೆ ಎಷ್ಟೊಂದು ಮುಖ, ಕಂಬಾರರ ಹರಕೆಯ ಕುರಿ, ಶ್ರೀರಂಗರ ಏನ ಬೇಡಲಿ ನಿನ್ನ ಬಳಿಗೆ ಬಂದು,
ಕುಸನೂರ್ ಅವರ ಗ್ರಹಣ, ಆನಿ ಬಂತಾನಿ,
ಡಾ. ದ. ರಾ. ಬೇಂದ್ರೆಯವರ ಜಾತ್ರೆ,
ಹಾಗೂ ಕೆ. ಮರಳುಸಿದ್ದಪ್ಪ ಅವರ ಸ್ವತಂತ್ರ ವೀರ ವೆಂಕಟಪ್ಪ ನಾಯಕ ಹಾಗೂ ಸಂಗೊಳ್ಳಿ ರಾಯಣ್ಣ ಇದರ ಜೊತೆಗೆ 4ನಾಟಕ ದೂರದರ್ಶನ, ಕಲಬುರ್ಗಿ, ಸಾಕ್ಷಿ ಚಿತ್ರಕ್ಕೆ ಕಂಠ ದಾನ
, ರೆಡ್ ಎಫ್. ಎಂ ಗೆ ಜಾಹಿರಾತಿಗೆ ಕಂಠ ದಾನ.
2 ಹಿಂದಿ ಟೆಲಿ ಚಿತ್ರಗಳು 1 ಕಲಿಯುಗ ಮೇ ಸಾಯಿ 2 ಮಾತಮ್ ಬಾಲಾಜಿ ಟೆಲಿ ಫಿಲಂಸ್ ಏಕತಾ ಕಪೂರ್ ಅವರ ಹಿಂದಿ ಧಾರವಾಹಿ k2 pali Hills ನಲ್ಲಿ ಪಾತ್ರ.
ಕನ್ನಡ ಚಂದನ ವಾಹಿನಿಗಾಗಿ ಬಿಸಿಲ ಹನಿಗಳು, ಸ್ತ್ರೀಲೋಕ, ಹಾಸ್ಯ ಲಾಸ್ಯ,
ಅನೇಕ ಆಕಾಶವಾಣಿ ಕಲಬುರಗಿ ಗಾಗಿ 35ನಾಟಕಗಳಲ್ಲಿ ಅಭಿನಯಿಸಿದ್ದಾರೆ ಸಂವಾದಗಳು, ಸಂದರ್ಶನಗಳನ್ನು ಮಾಡಿರುತ್ತಾರೆ.
. ಸುಮಾರು 40 ಲೇಖನಗಳು ದಿನಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಗಿರೀಶ್ ಕಾಸರವಳ್ಳಿ ಅವರ ಸಾಕ್ಷ್ಯ ಚಿತ್ರ ಹಾಗೂ ಕಾಲ ಜ್ಞಾನ ಚಲನ ಚಿತ್ರದಲ್ಲಿ ಪಾತ್ರ ವಹಿಸಿದ್ದಾರೆ . ಹವ್ಯಾಸಿ, ಗಾಯಕ ಹಾಗೂ ವಿಮರ್ಶೆ, ಹಾಗೂ ಅನೇಕ ಕಾರ್ಯಕ್ರಮಗಳಿಗೆ ನಿರೂಪಣೆ ಕೂಡ ಮಾಡಿದ್ದಾರೆ.
ಇನ್ನೂ ಅವಕಾಶಗಳು ಬಂದರೆ ನಟನೆಗೂ ಸೈ ಎನ್ನುವ ಪ್ರಹ್ಲಾದ್ ಕಡೇಚೂರು, ಈಗಲೂ ಆ ಉಮ್ಮಸ್ಸು ಅವರಲ್ಲಿದೆ.
ಅವರನ್ನು ಸಂಪರ್ಕಿಸಬಹುದಾದ ವಿಳಾಸ :
ಪ್ರಹ್ಲಾದ್ ಕಡೇಚೂರು
S/O ಕೆ ರಾಘವೇಂದ್ರ ರಾವ್
ಶೇಷ ನಿಲಯ
ನೀರಿನ ಟ್ಯಾಂಕ್ ಹತ್ತಿರ
ಸರಸ್ವತ್ಪುರ
ಧಾರವಾಡ 580 002
mobile: 99006 91109-
Belagaviphotonews.com