---Advertisement---

Advertisement

ಮೂಡಲಗಿ ಪಟ್ಟಣದ ನಾಗಲಿಂಗ ನಗರದ ನಿವಾಸಿ ಫಾತಿಮಾ ಹುಸೇನಸಾಬ ಮುಲ್ಲಾ ಎಂಬ ವೃದ್ದಳು ಬಾಡಿಗೆ ಮನೆಯಲ್ಲಿ ಸುಮಾರು ವರ್ಷಗಳಿಂದ ಅದೇ ಮನೆಯಲ್ಲೇ ವಾಸಿಸುತ್ತಿದ್ದಾಳೆ. ಇವಳಿಗೆ ಬೆಚ್ಚಗೆ ಇರಲು ಸರಿಯಾದ ಸೂರು ಇಲ್ಲದೇ ಬಿಸಿಲು, ಚಳಿ ಮಳೆ, ಲೆಕ್ಕಿಸದೇ ಹಂಪಿಗೆ ಹೋಗುವದಕಿಂತ ಈ ಕೊಂಪೆಯಲ್ಲಿರುವುದೇ ಲೇಸೆಂದು ಕೊಂಪೆಯನ್ನೆ ಅರಮನೆಯಂದು ಭಾವಿಸಿ ಜೀವನ ಸಾಗಿಸುತ್ತಿದ್ದಾಳೆ.

ಇನ್ನು ವೃದ್ದಳಿಗೆ ಸರಿಯಾದ ಮನೆ ಇಲ್ಲದಿರುವದರಿಂದ ಜೀವ ಕೈಯಲ್ಲಿ ಹಿಡಿದು ಬದುಕುತ್ತಿದ್ದಾಳೆ ಅಲ್ಲದೇ ದೇವರೆ ಕಾಪಾಡಬೇಕೆಂದು ನಿಟ್ಟಿಸಿರುವ ಬಿಡುತ್ತಾ, ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿಯಲ್ಲಿ ಅಕ್ಕಪಕ್ಕದ ಮನೆಯವರ ಹತ್ತಿರ ಹೊಟ್ಟೆಗಾಗಿ ಊಟ ಕೇಳದೆ ವಿಧಿಯಿಲ್ಲ. ನೆರೆಯವರು ಕೊಡದಿದ್ದರೆ ವೃದ್ದಳಿಗೆ ಉಪವಾಸವೇ ಗತಿ….
ವೃದ್ದಳಿಗೆ 7 ಪುತ್ರರರು, ಮೂವರು ಪುತ್ರಿಯರು ಇದ್ದರೂ ಸಹ ಕೆಲವು ವರ್ಷಗಳಿಂದ ನೋಡಿಕೊಳ್ಳದೆ ವೃದ್ದಳನ್ನು ಬಾಡಿಗೆ ಮನೆಯಲ್ಲಿ ಬಿಟ್ಟು ತಾವುಗಳು ಬೇರೆಕಡೆ ವಾಸಿಸುತ್ತಿದ್ದಾರೆ. ಸುಮಾರು ವರ್ಷಗಳಿಂದ ಒಂದು ತುತ್ತಿನ ಊಟದ ವ್ಯವಸ್ಥೆಗಾಗಿ ಅಲ್ಲಿ ಕೆಲಸ ಮಾಡುತ್ತಿದಳ್ಳು. ಆದರೆ ಕಳೆದ 15 ದಿನಗಳ ಕಾಲ ಹಿಂದೆ ಕಾಲು ಜಾರಿ ಬಿದ್ದಿದರಿಂದ ನಡಿಯೋಕೆ ಆಗದೆ ಹಾಸಿಗೆ ಹಿಡಿದಿದ್ದು, ನೋವು ತಡದೆಕೊಳ್ಳದೆ ಆ ಹಿರಿಯ ಜೀವ ತನ್ನಲೇ ತಾನೆ ಮರಗುವಂತಾಗಿದೆ.

ಇದನ್ನು ಅರಿತ ಸ್ಥಳೀಯರು ಮುಸ್ಲಿಂ ಸಮಾಜದ ಹಿರಿಯರ ಗಮನಕ್ಕೆ ತಂದರು ಸಹ ಆ ವೃದ್ದಳ ಮಕ್ಕಳ್ಳು ಆಸ್ಪತ್ರೆಗೆ ಸೇರಿಸದೆ ಇರುವುದರಿಂದ ಆ ಹಿರಿಯ ಜೀವ ಹಾಸಿಗೆಯಲ್ಲೇ ಮಲಮೂತ್ರ ಮಾಡಿಕೊಂಡು ನರಕ ಯಾತನೆಯನ್ನು ಅನುಭವಿಸಿತಿದ್ದಳ್ಳು . ಈ ಕುರಿತು ಸ್ಥಳೀಯ ಕನಾ೯ಟಕ ಕಾಯ೯ನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳ ಗಮನಕ್ಕೆ ಬಂದ ಕೂಡಲೇ ಸ್ಥಳಕ್ಕೆ ದಾವಿಸಿ ವೃದ್ದಳ ಆರೋಗ್ಯವನ್ನು ವಿಚಾರಿಸಿ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಪೋಲಿಸ್ ಸಿಬ್ಬಂದಿಗಳ ಸಹಕಾರದೊಂದಿಗೆ ಗೋಕಾಕದ ಸರಕಾರಿ ಆಸ್ಪತ್ರೆಗೆ ವೃದ್ದಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಕಳುಹಿಸಿಕೊಟ್ಟಿದ್ದಾರೆ.

BPN REPORT MOODALAGI .

By BPN

Leave a Reply

Your email address will not be published. Required fields are marked *