ಮೂಡಲಗಿ : ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ತಾಲೂಕಿನ ಧರ್ಮಟ್ಟಿ ಗ್ರಾಮದಲ್ಲಿ ಚಿರತೆ
ಪ್ರತ್ಯಕ್ಷವಾಗಿದ್ದರಿಂದ ಸಾರ್ವಜನಿಕರ ಹಾಗೂ ಅರಣ್ಯ ಅಧಿಕಾರಿಗಳ ನಿದ್ದೆಗೆಡಿಸುವ ಮೂಲಕ ಮಕ್ಕಳ ಶಿಕ್ಷಣಕ್ಕೆ ತೊಡಕು ಮಾಡಿತ್ತು. ಆದರೆ ಈಗ ತಾಲೂಕಿನ ಶಿವಾಪೂರ(ಹ) ಗ್ರಾಮದ ಹೊರವಲಯದ ವ್ಯಾಪ್ತಿಯ ಕಿತ್ತೂರ ಎಂಬುವವರ ತೋಟದದಲ್ಲಿ ಮಂಗಳವಾರ ಮಧ್ಯಾಹ್ನ ಚಿರತೆಯ ಪ್ರತ್ಯಕ್ಷವಾಗಿದೆ ಎಂದು ಪ್ರತ್ಯಕ್ಷದರ್ಶಿ ಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದರಿಂದ ಜನರಲ್ಲಿ ಆತಂಕ ಮೂಡಿಸಿದೆ.
ವಿಡಿಯೋ ದೃಶ್ಯಾವಗಳಿಗಳನ್ನು ವಿಕ್ಷಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಸ್ಥಳೀಯ ತಹಶೀಲ್ದಾರ, ಪೊಲೀಸ್ ಸಿಬ್ಬಂದಿಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ ವೇಳೆ ಗದ್ದೆಯಲ್ಲಿ ಮೂಡಿದ ಹೆಜ್ಜೆ ಗುರುತುಗಳು ಚಿರತೆಯದಲ್ಲ ಎಂದು ಅರಣ್ಯ ಅಧಿಕಾರಿ ಸಂಜು ಸವಸುದ್ದಿ ತಿಳಿಸಿದ್ದಾರೆ. ಆದರೆ ವಿಡಿಯೋ ನೋಡಿದ ಸ್ಥಳೀಯ ಸಾರ್ವಜನಕರು ಆತಂಕಗಿಡಾಗಿದ್ದರಿಂದ ಆ.9ರಂದು ಒಂದು ದಿನದ ಮಟ್ಟಿಗೆ ಜಾಗೃತಿವಹಿಸಲು ಸ್ಥಳೀಯ ಅಧಿಕಾರಿಗಳಿಗೆ ತಹಶೀಲ್ದಾರ ಶಿವಾನಂದ ಬಬಲಿ ಸೂಚನೆ ನೀಡಿದ್ದಾರೆ. ಮುಂಜಾಗೃತ ಕ್ರಮವಾಗಿ ಸ್ಥಳೀಯ ಗ್ರಾಪಂ ದಿಂದ ಸಾರ್ವಜನಿಕರಿಗೆ ಎಚ್ಚರಿಕೆಯಿಂದಿರಲು ಡಂಗುರ ಸಾರುವ ಮೂಲಕ ಒಬ್ಬಂಟಿಯಾಗಿ ರಾತ್ರಿ ವೇಳೆ ಹಾಗೂ ಗದ್ದೆಗಳ ಕಡೆಗೆ ಹೋಗದಂತೆ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಬಿಇಓ ಅಜೀತ ಮನ್ನಿಕೇರಿ ಮಾತನಾಡಿ, ಸ್ಥಳೀಯ ತಹಶೀಲ್ದಾರ ಅವರ ಮಾರ್ಗದರ್ಶನದಂತೆ ಮಕ್ಕಳಿಗೆ ಮುಂಜಾಗೃತ ಕ್ರಮವಾಗಿ ಶಿವಾಪೂರ(ಹ) ಗ್ರಾಮದ ಕಿತ್ತೂರ ತೋಟದಲ್ಲಿ ಇರುವ ಎರಡು ಪ್ರಾಥಮಿಕ ಶಾಲೆಗಳಿಗೆ ಆ.9ರಂದು ಒಂದು ದಿನದ ಮಟ್ಟಿಗೆ ರಜೆ ಘೋಷಣೆ ಮಾಡಲಾಗಿದ್ದು, ಶಾಲೆಗಳ ಸುತ್ತಮುತ್ತ ಕಬ್ಬಿನ ಗದ್ದೆಗಳು ಇರುವುದರಿಂದ ರಜೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಿಪಿಐ ಶ್ರೀಶೈಲ ಬ್ಯಾಕೂಡ, ಪಿಎಸ್‌ಐ ಎಚ್ ವೈ ಬಾಲದಂಡಿ, ಗ್ರಾಮಲೆಕ್ಕಾಧಿಕಾರಿ ಸಂಜು ಅಗ್ನೆಪ್ಪಗೋಳ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಇದ್ದರು.