ಬೆಳಗಾವಿ
BPN ಸುದ್ಧಿ :ಬರುವ ವಿಧಾನ ಸಭಾ ಚುನಾವಣೆಗೆ ಸಂಗ್ರಹಿಸಲು ತರಲಾಗುತ್ತಿತ್ತು ಎನ್ನಲಾದ 68 ಲಕ್ಷ ರೂ ಮೌಲ್ಯದ ಮಧ್ಯವನ್ನು ಬೆಳಗಾವಿ ಅಬಕಾರಿ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಡಾ. ಮಂಜುನಾಥ್ ಅಬಕಾರಿ ಅಪರ ಆಯುಕ್ತರು [ಅಪರಾಧ ವಿಭಾಗ ] ಬೆಳಗಾವಿ ಫಿರೋಜ್ ಖಾನ್ ಖಿಲ್ಲೆದಾರ್, ಅಬಕಾರಿ ಜಂಟಿ ಆಯುಕ್ತರು, ಬೆಳಗಾವಿ ಇವರ ಆದೇಶದಂತೆ ಎಂ. ವನಜಾಕ್ಷಿ ಅಬಕಾರಿ ಉಪ ಆಯುಕ್ತರು, ಬೆಳಗಾವಿ ದಕ್ಷಿಣ ಜಿಲ್ಲೆ. ರವಿ. ಎಂ. ಮುರಾಗೋಡ ಅಬಕಾರಿ ಉಪ ಅಧಿಕ್ಷಕರು, ಬೆಳಗಾವಿ ಉಪ ವಿಭಾಗೀಯವರ ಮಾರ್ಗ ದರ್ಶನದಲ್ಲಿ ದಾಳಿ ನಡೆಯಿತು.
ಮುಂಬರುವ ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ 2023ರ ನಿಮಿತ್ಯ ಅಬಕಾರಿ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಖಾನಾಪೂರ ”ಲಯ ವ್ಯಾಪ್ತಿಯ ಜಾಂಬೋಟಿ-ಖಾನಾಪೂರ .ಎಚ್-31 ರಸ್ತೆಯ ಮೋದೆಕೊಪ್ಪ ಕ್ರಾಸ್ ಹತಿರ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದರು.
ಒಂದು ಕಂದು ಬಣ್ಣದ ಭಾರತ ಬೆಂಜ್ ಗೂಡ್ಸ್ ಕ್ಯಾರಿಯರ್ 12 ಚಕ್ರದ ಕಂಟೆನರ್ (ವಾಹನ ಸಂಖ್ಯೆ: ಜಿಜೆ-10/ಟಿಟಿ-8276)ನಲ್ಲಿ ಗೋವಾ ರಾಜ್ಯದಲ್ಲಿ ಮಾತ್ರ ಮಾರಾಟಕ್ಕಿರುವ 180ಎಮ್.ಎಲ್. ಅಳತೆಯ 21696 ಇಂಪಿರಿಯಲ್ ಬ್ಲ್ಯೂ ವಿಸ್ಕಿ ಬಾಟಲಿಗಳನ್ನು (ಒಟ್ಟು 3905.28 ಲೀ. ಗೋವಾ ಮದ್ಯ) ಸಾಗಾಟ ಮಾಡುತ್ತಿದ್ದಾಗ ದಾವಲಸಾಬ ಶಿಂದೋಗಿ, ಅಬಕಾರಿ ನಿರೀಕ್ಷಕರು, ಖಾನಾಪೂರ ವಲಯರವರು ಜಪ್ಪು ಮಾಡಿ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಪ್ರಥಮ ವರ್ತಮಾನ ವರದಿಯನ್ನು ಸಲ್ಲಿಸಿದ್ದಾರೆ.
belagaviphotonews. com