---Advertisement---

Advertisement

ಶೇಕ್ಸ್ ಪಿಯರ್ ನ ಮ್ಯಾಕ್ ಬೆತ್ ನಾಟಕದ ಜ್ಞಾನ ಪೀಠ ಪ್ರಶಸ್ತಿ ವಿಜೇತ ಚಂದ್ರ ಶೇಖರ ಕಂಬಾರರ ಕನ್ನಡ ರೂಪಾಂತರ ‘ಮಾರೀಕಾಡು’ ಚಾಮರಾಜನಗರದ ಡಾ, ರಾಜಕುಮಾರ್ ರಂಗ ಮಂದಿರದಲ್ಲಿ ಪ್ರದರ್ಶನ ಕಂಡಿತು.

ಬೆಂಗಳೂರಿನ ವಾಸ್ಪ್ ಥಿಯೇಟರ್ ನ ಸುಮಾರು 45 ಕಲಾವಿದರು ಪ್ರಸ್ತುತ ಪಡಿಸಿದರು. ಎಲ್ಲರ ಅಭಿನಯ ಉತ್ತಮವಾಗಿತ್ತು. ಲೇಡಿ ಮ್ಯಾಕ್ ಬೆತ್ ಪಾತ್ರದಲ್ಲಿ ಸಂಜನಾ ಶಂಕರ್ ದು ಅಮೋಘ ಅಭಿನಯ. ಸಂಗೀತ ಅಭಿನಯದ ಭಾಗವೇ ಎನ್ನುವಷ್ಟು ಪೂರಕವಾಗಿತ್ತು. ಬೆಳಕು, ವಿನ್ಯಾಸ ನಿರ್ದೇಶನ, ನೃತ್ಯ ಮೇಳೈಸಿ ಹೊಸ ಅನುಭವ ನೀಡಿತು. ನಿರ್ದೇಶಕ ಜೋಸೆಫ್ ಜಾನ್ ಯುದ್ಧದ ಸನ್ನಿವೇಶದಲ್ಲಿ ಕೇರಳದ ಆತ್ಮರಕ್ಷಣಾ ಕಲೆ ಕಲರಿಪಯಟ್ಟುವನ್ನು ಸಮರ್ಥವಾಗಿ ಬಳಸಿಕೊಂಡಿದ್ದರು. ಇಡೀ ನಾಟಕ ರೋಚಕ ಅನುಭವ ನೀಡಿತು.

ಚಿತ್ರ :ಚರಣ್ ಬಿಳಿಗಿರಿ ಚಾಮರಾಜನಗರ.

By BPN

Leave a Reply

Your email address will not be published. Required fields are marked *