---Advertisement---

Advertisement

ಬೆಂಗಳೂರು : ಇಂದಿನಿಂದ [ಮಾ.6] ಎಲ್ಲಾ ಸಿಬ್ಬಂದಿಗಳು ಮಾಸ್ಕನ್ನು ಕಡ್ಡಾಯವಾಗಿ ಧರಿಸಬೇಕೆಂದು ಅರೋಗ್ಯ ಸಚಿವ ಕೆ ಸುಧಾಕರ್ ತಿಳಿಸಿದ್ದಾರೆ.

ಸುದ್ಧಿಗೋಷ್ಠಿ ನಡೆಸಿ ಮಾತಾನಾಡಿದ ಅವರು, H3N2 ನಿಂದ ದೇಶದಲ್ಲಿ ಸೋಂಕು ಹೆಚ್ಚಾಳ ವಾಗಿದೆ. ಅನೇಕರು ಗಾಬರಿಯಾಗಿದ್ದಾರೆ, ಹೀಗಾಗಿ ಉನ್ನತ ಮಟ್ಟದ ತಾಂತ್ರಿಕ ಸಲಹಾ ಸಮಿತಿ ಜೊತೆ ಸಭೆ ಮಾಡಿ ಚರ್ಚಿಸಿದಾಗ ಗಾಬರಿ ಆಗುವ ಪರಿಸ್ಥಿತಿ ನಿರ್ಮಾಣ ಆಗಿಲ್ಲ ಮುನ್ನೆಚರಿಕಾ ಕ್ರಮ ತೆಗೆದುಕೊಳ್ಳಬೇಕು ಎಂದರು.

ಮಾಸ್ಕ್ ಧರಿಸೋದು ಇತ್ತೀಚಿಗೆ ಕಡಿಮೆಯಾಗಿದೆ, ಆಸ್ಪತ್ರೆಯ ಸಿಬ್ಬಂದಿಕೂಡ ಧರಿಸುತ್ತಿಲ್ಲ. ಎಲ್ಲಾ ಅರೋಗ್ಯ ಸಿಬ್ಬಂದಿ ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಬೇಕೆಂದು ತಿಳಿಸಿದರು.

ಇದಲ್ಲದೆ ಇನ್ಫ್ಲುಯಂಜ ಗೆ ವ್ಯಾಕ್ಸಿನ್ ತೆಗೆದುಕೊಳ್ಳುವಂತೆ ಸಿಬ್ಬಂದಿಗೆ ಸೂಚಿಸಿದರು.

ಐಸಿಯು ನಲ್ಲಿ ಕೆಲಸಮಾಡುವವರಿಗೆ ಸರ್ಕಾರದಿಂದಲೇ ನೀಡಲಾಗುತ್ತದೆ. ಎಲ್ಲಾ ಜಿಲ್ಲೆಗಳಲ್ಲಿ ಐಸಿಯು ನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಇನ್ಫ್ಲುಯೆಂಜಾ ಸರಕಾರದಿಂದ ವ್ಯಾಕ್ಸಿನ್ ನೀಡಲಾಗುವುದು. 25 ಟೆಸ್ಟ್ ಗಳನ್ನು ವಾಣಿವಿಲಾಸ ಹಾಗೂ ವಿಕ್ಟೋರಿಯದಲ್ಲಿ ಟೆಸ್ಟಿಂಗ್ ಮಾಡಲಾಗುತ್ತದೆ 15 ವರ್ಷ ಕೆಳಗೆ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಸುಲಭವಾಗಿ ಸೋಂಕು ಬರುತ್ತದೆ. ಗರ್ಭಿಣಿಯರಿಗೆ ಸೋಂಕು ಬರುವ ಸಾಧ್ಯತೆ ಇದೆ. ಹೀಗಾಗಿ ಇವರೆಲ್ಲ ಎಚ್ಚರಿಕೆ ವಹಿಸಬೇಕು, ಕೆಮ್ಮುವಾಗ, ಸೀನುವಾಗ ಮುಖ ಕವರ್ ಮಾಡಿಕೊಳ್ಳಬೇಕು. ಕೈಯನ್ನು ಆಗಾಗ ಸೋಪಿನಿಂದ ತೊಳೆದುಕೊಳ್ಳಬೇಕು ಎಂದರು.

B P N ಸುದ್ದಿ.

By BPN

Leave a Reply

Your email address will not be published. Required fields are marked *