ರಾಜಕೀಯ ಪ್ರಾಬಲ್ಯಕ್ಕೆ ಮಣಿದು, ಮಾರಕ ವಸ್ತುಗಳ ಮಾರಾಟಗಾರರನ್ನು ಬಿಡುಗಡೆ ಮಾಡಿದ ಸಿಪಿಐ, ಶಿಸ್ತಿನ ಕ್ರಮಕ್ಕೆ ಶ್ರೀರಾಮ ಸೇನೆ ಹಿಂದುಸ್ತಾನ್ ಪೊಲೀಸ್ ಆಯುಕ್ತರಿಗೆ ಮನವಿ
*ರಾಜಕೀಯ ಪ್ರಾಬಲ್ಯ : ತಿಲಕವಾಡಿ ಸಿಪಿಐ ವಿರುದ್ದ ಗಾಂಜಾ ಕೇಸ್ ಮುಚ್ಚಿ ಹಾಕಿದ್ದು, ಶಿಸ್ತಿನ ಕ್ರಮಕ್ಕೆ ಪೊಲೀಸ್ ಆಯುಕ್ತರಿಗೆ ಮನವಿ*
ಬೆಳಗಾವಿ : ತಿಲಕವಾಡಿ ಪೊಲೀಸ್ ಠಾಣೆಗೆ ವ್ಯಾಪ್ತಿಯಲ್ಲಿ ದೊರೆತ ಗಾಂಜಾ ಕೇಸ್ ದಾಖಲೆ ಮಾಡದೇ ಅವರನ್ನು ಬಿಡುಗಡೆ ಮಾಡಿದ ಆರೋಪದ ಹಿನ್ನೆಲೆ ಸಿಪಿಐ ದಯಾನಂದ, ಹಾಗೂ ಇಬ್ಬರು ಕಾನ್ಸ್‌ಟೇಬಲ್ ವಿರುದ್ದ ನಗರ ಪೊಲೀಸ್ ಆಯುಕ್ತರಿಗೆ ದೂರು, ಶಿಸ್ತಿನ ಕ್ರಮಕ್ಕೆ ಮನವಿ ನೀಡಿದ ಶ್ರೀರಾಮ ಸೇನೆ ಹಿಂದೂಸ್ತಾನ್ ನ ರಮಾಕಾಂತ ಕೊಂಡುಸ್ಕರ್.
ಜನವರಿ 28 ನೇ ತಾರೀಖ ಆರ್.ಪಿ.ಡಿ ರೋಡಿ ಕಡೆ 4-5. ಕೆ.ಜಿ ಗಾಂಜಾ ಸಿಕ್ಕಿತ್ತು. ಕಾಲೇಜ್ ಗಳು ಇರುವ ಸ್ಥಳವಾಗಿದ್ದು, ಆ ಸ್ಥಳದಲ್ಲಿ ಗಾಂಜಾ ದಂತಹ ಮಾರಕ ವಸ್ತುಗಳನ್ನು ಮಾರಾಟ ಮಾಡುತ್ತಿರವುದು ಯುವ ಪೀಳಿಗೆಗಳನ್ನು ಹಾಳು ಮಾಡುವ ಕಾರ್ಯ ಮಾಡುತ್ತಿದ್ದಾರೆ. ಈ ವಿಚಾರವಾಗಿ ರಾಜಕೀಯ ಒತ್ತಡಕ್ಕೆ ಮನಿದ ತಿಲಕವಾಡಿ ಪೊಲೀಸರು ಆ ಕೇಸ್ ನ್ನು ದಾಖಲೆ ಮಾಡದೆ ಅವರನ್ನು ಬಿಡುಗಡೆ ಮಾಡಿರುವುದು ಕಂಡರೆ ಭ್ರಷ್ಟಾಚಾರ ಆಗಿದೆ. ಪೊಲೀಸ್ ಅಧಿಕಾರಿಗಳ ವಿರುದ್ದ ಕ್ರಮ ತೆಗೆದುಕೊಳ್ಳಲು ಬೆಳಗಾವಿ ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದೇವೆ ಎಂದು ಅವರು ತಿಳಿಸಿದರು.
ತಿಲಕವಾಡಿ ಸಿಪಿಐ ಸಣ್ಣ ಕೇಸ್ ಗೆ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದು, ಇಂತಹ ಮಾರಕ ವಸ್ತುಗಳ ವಿಚಾರದಲ್ಲಿ ಯಾಕೆ ನಿರ್ಲಕ್ಷ್ಯ ಮನೋದೋರಣೆ ನೀಡುತ್ತಿದ್ದಾರೆ ಅರ್ಥಾವಾಗಿತ್ತಿಲ್ಲ. ರಾಜಕೀಯ ಪ್ರಾಬಲ್ಯದಿಂದ ಮನಿಯುತ್ತಿರುವ ಸಿಪಿಐ, ಇದು ರಾಜಕೀಯ ಮುಕ್ತ ಪೊಲೀಸ್ ಇಲಾಖೆ ಇರಬೇಕು. ಆದರೇ ಪ್ರತಿಯೊಂದು ವಿಷಯದಲ್ಲಿ ರಾಜಕೀಯ ನಾಯಕರ ಪತ್ರವನ್ನು ತೆಗೆದುಕೊಂಡು ಬರಬೇಕು ಎಂದು ಪೊಲೀಸ್ ಇಲಾಖೆ ಹೇಳುತ್ತಿರುವುದು ಎಷ್ಟ ಮಟ್ಟಿಗೆ ಸರಿ. ಒಬ್ಬ ಕಾಮನ್ ಮ್ಯಾನ್ ಸಹ ಆ ಭಾಗದ ರಾಜಕೀಯ ನಾಯಕರ ಪತ್ರ ತಂದರೆ ಮಾತ್ರ ಯಾವುದೇ ಸಣ್ಣ ಕಾರ್ಯಕ್ರಮ ಮಾಡಲು ಪರವಾನಿಗೆ ನೀಡುತ್ತೇವೆ ಎಂದು ಹೇಳುತ್ತಾರೆ.
ಈ ವಿಚಾರವಾಗಿ ಪೊಲೀಸ್ ಆಯುಕ್ತರು ಶಿಸ್ತಿನ ಕ್ರಮ ತೆಗೆದುಕೊಂಡು ಮುಂದೆ ಈ ರೀತಿ ಅಹಿತಕರ ಘಟನೆಯನ್ನು ಪೊಲೀಸ್ ಇಲಾಖೆ ಮಾಡದಂತೆ ತಡೆಯಬೇಕು ಎಂದು ಆಯುಕ್ತರಿಗೆ ಮನವಿ ಮಾಡಿದ್ದೇವೆ ಎಂದರು.
BPN ವರದಿ