---Advertisement---

Advertisement

ಬೆಳಗಾವಿ : ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹದಿಂದ ಫೋನ್ ನಲ್ಲಿ ಬೆದರಿಕೆ ಹಾಕಿದ್ದ ಕೈದಿ ಜಯೇಶ್ ಪೂಜಾರಿ ಅಲಿಯಸ್ ಕಾಂತಾಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ, ಲಷ್ಕರ್ ಎ ತೊಯ್ದಾ ಹಾಗೂ ನಿಷೇಧಿತ ಪಿಎಫ್‌ಐ ಜತೆ ಸಂಪರ್ಕ ಇದೆ ಎಂದು ನಾಗಪುರ ಪೊಲೀಸ್ ಆಯುಕ್ತ ಅಮಿತೇಶ್ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಪುಣೆ ಪೊಲೀಸ್ ಆಯುಕ್ತ ಅಮಿತೇಶ್ ಅವರು, ಜಯೇಶನ ಬ್ರೇನ್ ವಾಶ್ ಆಗಿದೆ. ತೀವ್ರವಾದಿ ಆಗಿದ್ದಾನೆ. ಜೈಲಿನಲ್ಲಿ ಇತರ ಡಿ-ಗ್ಯಾಂಗ್ ಜೊತೆ ಸೇರಿ ಸಂಚು ರೂಪಿಸುತ್ತಿದ್ದಾನೆ ಎಂದು ತಿಳಿಸಿದ್ದ ಎಂದು ತಿಳಿಸಿದ್ದಾರೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೊಲೆ ಬೆದರಿಕೆ ಹಾಕಿದ್ದ ಜಯೇಶ್ ಪೂಜಾರಯನ್ನು ಇಲ್ಲಿನ ಜೈಲಲ್ಲಿ ಚೆನ್ನಾಗಿ ನೋಡಿಕೊಳ್ಳಲಾಗಿದೆ. ಬೆಳಗಾವಿ ಹಿಂಡಲಗಾ ಜೈಲಿನಿಂದ ನಿತಿನ್ ಗಡ್ಕರಿ ಅವರಿಗೆ ಎರಡು ಬಾರಿ ಬೆದರಿಕೆ ಹಾಕಿದ್ದ. ಹೀಗಾಗಿ ನಾಗುರ ಪೊಲೀಸರು ಅವನ ವಿರುದ್ಧ ಯುಎಪಿಎ ಕಾಯ್ದೆಯಡಿ ಕ್ರಮ ಕೈಗೊಳ್ಳಲಿದ್ದಾರೆ ಎಂದಿದ್ದಾರೆ.

ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ಪೊಲೀಸರು ರಾತ್ರೋರಾತ್ರಿ ಬೆಳಗಾವಿ ಹಿಂಡಲಗಾ ಜೈಲಿಗೆ ಆಗಮಿಸಿ ಜಯೇಶನನ್ನು ವಶಕ್ಕೆ ಪಡೆದುಕೊಂಡಿದ್ದರು.ಸಿಕ್ಕಿರುವ ಮಾಹಿತಿಯ ಪ್ರಕಾರ, ಜಯೇಶ್ ಪೂಜಾರಿ ಪಿಎಫ್‌ಐ, ದಾವೂದ್ ಇಬ್ರಾಹಿಂ ಮತ್ತು ಲಷ್ಕರ್-ಎ ತೊಯ್ದಾ ಜೊತೆ ಸಂಪರ್ಕ ಹೊಂದಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ನಾಗ್ವುರ ಪೊಲೀಸರ ವಶದಲ್ಲಿದ್ದು, ಕೂಲಂಕುಷವಾಗಿ ತನಿಖೆ ನಡೆಸಲಾಗುತ್ತಿದೆ. ನಾಗುರ ಪೊಲೀಸರು ಬೆಳಗಾವಿಯಿಂದ ನಾಗಪುರಕ್ಕೆ ಕರೆತಂದಿದ್ದಾರೆ.

ನಿತಿನ್ ಗಡ್ಕರಿಗೆ ಬೆದರಿಕೆ ಹಾಕಿದ್ದ ಪಾತಕಿ ದಾವೂದ್ ಸಂಪರ್ಕಗಳ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ನಾಗುರ ಪೊಲೀಸರು ಜಯೇಶ್ ಪೂಜಾರಿ ಮೇಲೆ ಯುಎಪಿಎ ಕಾಯ್ದೆಯಡಿ ಕ್ರಮಕ್ಕೆ ಪೊಲೀಸರು ಯೋಚಿಸುತ್ತಿದ್ದಾರೆ.

ಜಯೇಶ್ ಈತ ಕೇಂದ್ರ ಸಚಿವ ಗಡ್ಕರಿ ಅವರಿಗೆ 100 ಕೋಟಿ ರುಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದ. ಅದರ ನಂತರ ನಾಗುರ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. 100 ಕೋಟಿ ಠೇವಣಿ ಇಡಲು ಯುವತಿಯ ನಂಬರ್ ನೀಡಿದ ಜಯೇಶ್ ಪೂಜಾರಿಯನ್ನು ವಿಚಾರಣೆ ಗೊಳಪಡಿಸಿದ್ದರು. ಆ ಬಳಿಕ ಬೆಳಗಾವಿ ಜೈಲಿನಲ್ಲಿ ದಿಢೀರ್ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಜಯೇಶ್ ಪೂಜಾರಿಯಿಂದ ಎರಡು ಫೋನ್ ಮತ್ತು ಎರಡು ಸಿಮ್ ಕಾರ್ಡ್ ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಸಾಕ್ಷ್ಯದ ಆಧಾರದ ಮೇಲೆ ಜಯೇಶ್ ಪೂಜಾರಿಯನ್ನು ನಾಗುರ ಪೊಲೀಸರು ಬಂಧಿಸಿದ್ದಾರೆ.

ಕೂಲಂಕಷ ತನಿಖೆ ನಡೆಯುತ್ತಿದೆ. ಬೆಳಗಾವಿ ಜೈಲಿನಿಂದ ನೇರವಾಗಿ ದೇಶದ ಹಿರಿಯ ಕೇಂದ್ರ ಸಚಿವರ ಕಚೇರಿಗೆ ಸುಲಿಗೆ ಮಾಡಿದ ಜಯೇಶ್ ಪೂಜಾರ ಬೆದರಿಕೆ ಕರೆ ನಾಗುರ ಪೊಲೀಸರನ್ನು ನಿದ್ದೆಗೆಡಿಸಿತ್ತು. ಆದರೆ ಈಗ ಜಯೇಶ್ ಪೂಜಾರ ಕಸ್ಟಡಿಗೆ ಪಡೆದ ನಂತರ ನಾಗುರ ಪೊಲೀಸರು ಆತನನ್ನು ಕೂಲಂಕಷವಾಗಿ ವಿಚಾರಣೆ ನಡೆಸುತ್ತಿದ್ದಾರೆ.

ಸದ್ಯ ನಾಗುರ ಪೊಲೀಸರು ಈ ಬಗ್ಗೆ ತನಿಖೆ – Aಾರೆ. ಗಡ್ಕರಿ ಅವರಿಗೆ ಬೆದರಿಕೆ ಹಾಕಿದ ವ್ಯಕ್ತಿ ನಾಗ್ವುರ ಪೊಲೀಸರ ವ ನೆ. ಬೆದರಿಕೆ ಹಿಂದಿರುವ ಶಕ್ತಿಗಳ ಬಗ್ಗೆ ನಾಗಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

By BPN

Leave a Reply

Your email address will not be published. Required fields are marked *