ಸಂಗೀತ ಹಾಗೂ ಭಾವನೆಯ ಬೆಸುಗೆ
ಸಂಗೀತಕ್ಕೂ ಮಾನವ ಜೀವಿಯ
ಭಾವನೆಗು ಭಾವಪೂರ್ಣ ಬೆಸುಗೆ ಇದೆ.
ಸಂಗೀತಕ್ಕೆ ಭಾಷೆ ಬೇಡ ಅದರ ಶ್ರುತಿ ಒಂದು ಸಾಕು ಹೃದಯ ಮುಟ್ಟಲು.
ಸಂಗೀತವು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.
ಮಾನವ ಎಂತಹ ಒಂದು ದುಗುಡದಲ್ಲಿ ಇದ್ದರು ಸಂಗೀತಕ್ಕೆ ದುಗುಡವನ್ನು ಮರೆಸುವ ಶಕ್ತಿ ಇದೆ.
ಒಂದು ಪುಟ್ಟ ಕಥೆ
ಮೀನಾಕ್ಷಿ ಎಂಬ 22 ಹರೆಯದ ಸುಂದರ ಚೆಲುವೆಗೆ ದಿನ ನಿತ್ಯ ರೇಡಿಯೋ ದಲ್ಲಿ ಸಾಗರ್ ಎಂಬಾತನ ಗಾಯನ ಕೇಳುವ ಹುಚ್ಚು ಅವಳಿಗರಿವಿಲ್ಲದೆಯೇ ಅವನಿಗೆ ಮಾರುಹೋಗಿದ್ದಳು. ಅವಳ ಪುಟ್ಟ ಹೃದಯ ಸೋತುಹೋಗಿತ್ತು. ಮದುವೆಯಾದರೆ ಸಾಗರನನ್ನೇ ಎಂದು ಮನಸು ಮಾಡಿದ್ದಳು. ಒಂದು ಬಾರಿ ರೇಡಿಯೋ ಸ್ಟೇಷನ್ಗೆ ಹೋಗಿ ಸಾಗರ್ ನನ್ನು ಭೇಟಿಯಾದಳು. ಸಾಗರ್ ಒಬ್ಬ ಕಾಲು ಕಳೆದು ಕೊಂಡ ಸುಂದರ ಪುರುಷ. ಅವನನ್ನು ನೋಡಿದ ಮೀನಾಕ್ಷಿ ಗರಬಡಿದಂತಾದಳು. ಏನು ಮಾಡುವುದೆಂದು ತಿಳಿಯಲಿಲ್ಲ. ಸಾಗರನಲ್ಲಿ ತನ್ನ ಮನದ ಇಚ್ಛೆ ಹೇಳಿದಳು. ಸಾಗರ್ ತಾನೊಬ್ಬ ಕುಂಟ ಹೇಗೆ ಸ್ವೀಕರಿಸುವಿರಿ ಎಂದಾಗ ಮೀನಾಕ್ಷಿ ಹೇಳಿದ ಮಾತು ” ಸಾಗರ್ ನಿಮ್ಮ ಗಾಯನವನ್ನು ಮನಸಾರೆ ಮೆಚ್ಚಿ ನಿಮಗೆ ಹೃದಯ ಕೊಟ್ಟುಬಿಟ್ಟೆ. ಸಾಗರದ ಅಲೆಗಳಷ್ಟೇ ಮಧುರ ಆ ಗಾಯನ ಎಂದು ಹೇಳಿ ಮದುವೆ ಯಾದಳು. ಹೀಗೆ ಸಂಗೀತಕ್ಕೆ ಕಣ್ಣಿಲ್ಲ, ಕೇಳುವ ಹೃದಯ ಸಾಕು.
ಸಂಗೀತಕ್ಕೆ ಮಾನಸಿಕ ಕಾಯಿಲೆಯನ್ನು ವಾಸಿಮಾಡುವ ಶಕ್ತಿ ಇದೆ. ಸಂಗೀತವನ್ನು ಕೇಳುವುದಾಗಲಿ ಹವ್ಯಾಸವಾಗಿ ಬೆಳಸಿ ಕೊಂಡಲ್ಲಿ ಒಂಟಿತನವನ್ನು ದೂರ ಮಾಡುವುದು ಗೆಳೆಯರಾಗಿ ಸಂಬಂಧಿಕರಾಗಿ ನಮ್ಮ ಹೃದಯದೊಡನೆ ಬೆಸೆದಿರುತ್ತದೆ. ಉಸಿರಲ್ಲಿ ಉಸಿರಾಗಿರುತ್ತದೆ ಸಂಗೀತ 😍💕
✒️Dr. ಪೂರ್ಣಿಮಾ ರಾಜ್
True ……👍💕