ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಗೆ ಸೋಮವಾರ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.ಚನ್ನಮ್ಮ ಸರ್ಕಲ್ ದಿಂದ ಆರಂಭವಾಗಿ ಕಾಲೇಜು ರಸ್ತೆ, ರಾಮಲಿಂಗಖಿಂಡಗಲ್ಲಿ, ಶನಿ ಮಂದಿರ, ಕಪಿಲೇಶ್ವರ, ಶಿವಾಜಿ ಉದ್ಯಾನ, ಮಾಲಿನಿ ಸಿಟಿ ಮಾರ್ಗವಾಗಿ ಭವ್ಯ ರೋಡ್ ಶೋ ನಡೆಯಲಿದೆ. ಆದ್ದರಿಂದ ಪೊಲೀಸರು ಈ ಮಾರ್ಗದಲ್ಲಿ ಸಂಚಾರ ನಿರ್ಬಂಧಿಸಿದ್ದಾರೆ. ರಸ್ತೆಯ ಎರಡು ಬದಿಗೆ ಬ್ಯಾರಿಕೇಡ್ ಹಾಕಿ ಸಂಚಾರ ನಿಲ್ಲಿಸಲಾಗಿದೆ. ಇದು ಪ್ರಮುಖವಾಗಿ ವಿದ್ಯಾರ್ಥಿಗಳನ್ನು ಚಿಂತೆಗೀಡು ಮಾಡುವಂತಾಗಿದೆ. ಜೊತೆಗೆ ಸೋಮವಾರದಿಂದ ಹಲವು ಶಾಲಾ- ಕಾಲೇಜುಗಳಿಗೆ ಪರೀಕ್ಷೆ ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳು ಮುಂದೇನು ಮಾಡುವುದು ಎಂದು ಚಿಂತೆಗೊಳಗಾಗಿದ್ದಾರೆ.