ನಗರ ಪ್ರದೇಶಗಳಂತೆ ಗ್ರಾಮೀಣ ಪ್ರದೇಶಗಳಲ್ಲೂ ಮನೆ ಮನೆಗೆ ತೆರಳಿ ಕಸಸಂಗ್ರಹಿಸುತ್ತಿರುವ ಸ್ವಚ್ಛತಾ ಸಿಬ್ಬಂದಿ, ವಾಹನ ಚಾಲಕರು ಮಾಸಿಕ ವೇತನ ಸಿಗದೆಕಂಗಾಲಾಗಿದ್ದಾರೆ.
ಪ್ರತಿ ಮನೆಯಿಂದ 30 ರೂ. ಸಂಗ್ರಹಿಸಿ ಸಿಬ್ಬಂದಿಗೆ ವೇತನ ನೀಡುವಜ ವಾಬ್ದಾರಿಯನ್ನು ಮಹಿಳಾ ಸ್ವ-ಸಹಾಯ ಸಂಘಗಳಿಗೆ ವಹಿಸಲಾಗಿದೆ.
ಆದರೆ,’ಗ್ರಾಮಸ್ಥರು ನಿಯಮಿತವಾಗಿ ಹಣ ನೀಡದ ಹಿನ್ನೆಲೆಯಲ್ಲಿ ಸಿಬ್ಬಂದಿಗೆ ಸಮಯಕ್ಕೆ
ಸರಿಯಾಗಿ ವೇತನ ಸಿಗುತ್ತಿಲ್ಲ.
ಸ್ವಚ್ಛ ಭಾರತ ಯೋಜನೆಯ ಗ್ರಾಮೀಣ ಮತ್ತು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಸರ್ಕಾರವು ಪ್ರತಿ ಗ್ರಾಪಂಗೆ ತಲಾ 25 ರಿಂದ 30 ಲಕ್ಷ ರೂ. ವೆಚ್ಚದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ, ಕಸ ಸಾಗಿಸಲು ಮೂರು ಚಕ್ರದ ವಾಹನ ಒದಗಿಸಿದೆ. ಆದರೆ, ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಿ ವಿಲೇವಾರಿ ಮಾಡುವ ಸಿಬ್ಬಂದಿಗೆ ವೇತನಕ್ಕೆ ಪ್ರತ್ಯೇಕ ಅನುದಾನ ಮೀಸಲಿಟ್ಟಿಲ್ಲ. ಅಲ್ಲದೆ, ಗ್ರಾಮಸ್ಥರು ಪ್ರತಿ ತಿಂಗಳು 30 ರೂ.ನೀಡದಿರುವ ಹಿನ್ನೆಲೆಯಲ್ಲಿ ಸಿಬ್ಬಂದಿಗೆ ವೇತನ ಸಿಗದಿರುವುದಕ್ಕೆ ಮೂಲ ಕಾರಣ. ಹಿಂಡಲಗಾ ಪಂಚಾಯಿತಿಯಲ್ಲಿ 30 ರ ಬದಲಿಗೆ ತಿಂಗಳಿಗೆ 70 ರೂ ಪಡೆಯಲಾಗುತ್ತಿದೆ ಎಂದು ಆರೋಪ ಕೇಳಿ ಬರುತ್ತಿದೆ.