ಬೊಜ್ಜು ಒಂದು ಶಾಪವೇ?
ಹುರಳಿ ಕಾಳು
ಮೂಲಂಗಿ ನಂತರ ಚಿಯಾ *ಬೀಜ( ಕಾಮಕಸ್ತೂರಿ ಬೀಜ )*
ಚಿಯಾ ಬೀಜವು ತೂಕ ಇಳಿಕೆಯಲ್ಲಿ (weight loss) ಆಹಾರ ಪದ್ಧತಿ ಪ್ರಮುಖ ಪಾತ್ರ ವಹಿಸುತ್ತದೆ.
ಇದರಲ್ಲಿರುವ ಫೈಬರ್, ಪ್ರೋಟೀನ್ ಅಂಶಗಳು ತೂಕ ಇಳಿಕೆಗೆ (weight loss) ಅಪಾರ ಕೊಡುಗೆ ನೀಡುತ್ತದೆ.
ಅಷ್ಟಲ್ಲದೆ ಇದು ಮಧುಮೇಹದ ನಿರ್ವಹಣೆಗೆ ಸಹಾಯ ಮಾಡುತ್ತದೆ
-ಮಲಬದ್ಧತೆ ಸಮಸ್ಯೆ ನಿವಾರಿಸುತ್ತದೆ.
-ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ
-ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುತ್ತದೆ.
ಈಗ ಇದರ ಸೇವನೆ ಬಗ್ಗೆ ಹೇಳುತ್ತೇನೆ
ಒಂದು ಸ್ಪೂನ್ ಅಷ್ಟು ಚಿಯಾ ಬೀಜವನ್ನು 2 ಲೀಟರ್ ನೀರಲ್ಲಿ 15 ನಿಮಿಷ ನೆನಸಿ ಇಡೀ ದಿನ ಈ ನೀರು ಸೇವನೆ ಮಾಡಿ.
ತಂಪಾದ ಪನೀಯ ದಲ್ಲಿ ಚಿಯಾ ಬೀಜವನ್ನು ಬೆರೆಸಿ ಸೇವಿಸ ಬಹುದು. ಹಾಲಿನನಲ್ಲಿ ಕಾಲು ಸ್ಪೂನ್ ಹಾಕಿ ಚೆನ್ನಾಗಿ ಕುದಿಸಿ ಸೇವಿಸಿ.
ನೀವು ಹೆಚ್ಚುವರಿ ಕೊಬ್ಬನ್ನು ಕರಗಿಸಲು ಬಯಸಿದರೆ ಚಿಯಾ ಬೀಜಗಳು ಮತ್ತು ಮೊಸರಿನೊಡನೆ ಸೇರಿಸಿ ಜೊತೆಗೆ ಸಣ್ಣ ದಾಗಿ ಹೆಚ್ಚಿದ ಆಪಲ್ ಕರಬೂಜಾ ನಿಮಗೆ ಇಷ್ಟವಾದ ಹಣ್ಣುಗಳನ್ನು ಅಥವಾ ನೆನೆಸಿ ಸಿಪ್ಪೆ ಬಿಡಿಸಿದ ಬಾದಾಮಿ, ದ್ರಾಕ್ಷಿ ಯನ್ನು ಸೇರಿಸಿ ಸೇವಿಸಿ. ಇದು ದೇಹಕ್ಕೆ ತಂಪು ಹಾಗೂ ತೂಕ ಇಳಿಸುವುದಕ್ಕೆ ಸಹಾಯಕರ.
ಇಂದಿನಿಂದಲೇ ಚಿಯಾ ಬೀಜವನ್ನು ನಿಮ್ಮ ಜೀವನ ಶೈಲಿ ಯಲ್ಲಿ ಸೇರಿಸಿಕೊಳ್ಳಿ….
ಮುಂದುವರಿಯುವುದು…….
✒Dr. ಪೂರ್ಣಿಮಾ ರಾಜ್