ಚಿಕ್ಕೋಡಿ :ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸೇವಕ್ ಸಂಸ್ಥೆ, ಬೆಳಗಾವಿ ಚೈಲ್ಡ್‌ರೈಟ್ಸ್ ಟ್ರಸ್ಟ್, ಬೆಂಗಳೂರು, ಕರ್ನಾಟಕ ಬಾಲ್ಯವಿವಾಹ ವಿರೋಧಿ ವೇದಿಕೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಘಟಕ ಬೆಳಗಾವಿ, ಇವರ ಸಂಯುಕ್ತ ಆಶ್ರಯದಲ್ಲಿ ಮಹಿಳೆಯರ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿಯ ಪಿ.ಡಿ.ಓ ಮತ್ತು ಅಂಗನವಾಡಿ ಮೇಲ್ವಿಚಾರಕಿಯರಿಗೆ ಜಿಲ್ಲಾ ಮಟ್ಟದ ಬಲವರ್ಧನೆ ಕುರಿತು ಒಂದು ದಿನದ ಕಾರ್ಯಾಗಾರ” ನಡೆಯಿತು.
ಕಾರ್ಯಗಾರ ದಲ್ಲಿ ಮುರಳಿ ಮೋಹನ್ ರೆಡ್ಡಿ, ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಬಸವರಾಜ್ ಹೆಗ್ಗನಾಯಕ, ಮಹಾಂತೇಶ್ ಭಜಂತ್ರಿ, ಸಿಸ್ಟರ್ ಲೂರ್ದ್ ಮೇರಿ, ಡಾ. ವಾಸು ದೇವ ಶರ್ಮಾ, ಹರೀಶ್ ಜೋಗಿ, ಶ್ರೀಮತಿ ಶೋಭ ಗಸ್ತಿ ಉಪಸ್ಥಿತರಿದ್ದರು.